ಸಾಹಿತ್ಯ ಸಮ್ಮಿಲನ

ಸಾಹಿತ್ಯ ಸಮ್ಮಿಲನ

ಸಾಹಿತ್ಯ ಸಮ್ಮಿಲನ 

ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ರಂಗ ಹೀಗೆ ವಿವಿಧ ವಲಯಗಳಲ್ಲಿ ತೊಡಗಿಸಿಕೊಂಡಿರುವ ಡಾ. ಪ್ರೇಮಾ ಅಪಚಂದ ಅವರನ್ನು ನಾನು ಸುಮಾರು ವರ್ಷಗಳಿಂದ ಬಲ್ಲೆ. ಇವರೊಬ್ಬ ಕ್ರಿಯಾಶೀಲ ವ್ಯಕ್ತಿತ್ವವುಳ್ಳ ಮಹಿಳೆ, ಸುಮಾರು ಹತ್ತಕ್ಕಿಂತ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವ ಡಾ. ಪ್ರೇಮಾ ಅಪಚಂದ ಎಲ್ಲರೊಂದಿಗೆ ಸಹಜವಾಗಿ ಬೆರೆ ಯುವ ಹೃದಯ ವೈಶಾಲ್ಯತೆಯುಳ್ಳವರು. ಅಲ್ಲದೇ ಬೋಧನೆಯಲ್ಲಿ ಶಿಸ್ತನ್ನು ರೂಢಿಸಿಕೊಂಡು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿ ರುವುದಲ್ಲದೆ, ಜೊತೆಗೆ ಹಿಡಿದ ಕೆಲಸವನ್ನು ಬೇತಾಳನಂತೆ ಬೆನ್ನತ್ತಿ ಮುಗಿಸುವುದರೊಂದಿಗೆ ಯಾರೊಂದಿಗೂ ವೈಷಮ್ಯವನ್ನು ಸಾಧಿಸದೆ ನಿಷ್ಠೆಯಿಂದ ಇರುವುದನ್ನು ನಾನು ಕಂಡುಕೊಂಡಿದ್ದೇನೆ. ಸದಾ ಹಸನ್ಮುಖಿಯಾಗಿರುವ ಡಾ. ಪ್ರೇಮಾ ಅಪಚಂದ ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಹಲವಾರು ವಿಷಯದ ಮೇಲೆ ಮಾತನಾಡಿದ್ದಾರೆ ಅಲ್ಲದೆ ವಿವಿಧ ವಿಚಾರಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಸರ್ವರ ಮೆಚ್ಚುಗೆಯನ್ನು ಪಡೆದಿದ್ದಾರೆ. ಸದಾ ಓದು ಮತ್ತು ಬರವಣಿಗೆಯಲ್ಲಿ ನಿರತರಾಗಿರುವ ಇವರು "ಸಾಹಿತ್ಯ ಸಮ್ಮಿಲನ" ಎನ್ನುವ ಲೇಖನಗಳ ಒಳನೋಟ. ಪುಸ್ತಕದಲ್ಲಿನ ಜಾನಪದ ಮಹಾಕಾವ್ಯಗಳ ಕುಟುಂಬ ಜೀವನದಲ್ಲಿ ಸ್ತ್ರೀ, ಶರಣರ ದೃಷ್ಟಿಯಲ್ಲಿ ಕೃಷಿ, ಜನಪದ ಮಹಾಕಾವ್ಯಗಳಲ್ಲಿ ವಿವಾಹ ಒಂದು ಅವಲೋಕನ, ಶರಣರಲ್ಲಿ ಪ್ರಾಣಿ ದಯೆ ಹಾಗೂ ಆಧುನಿಕ ಪಶುಸಂಗೋಪನೆ, ನವ್ಯ ಸಾಹಿತ್ಯದಲ್ಲಿ ಸ್ತ್ರೀ, ದಲಿತ ಬಂಡಾಯ ಸಾಹಿತ್ಯ ಕಾವ್ಯ, ದಲಿತ-ಬಂಡಾಯ ಸಾಹಿತ್ಯ ಮತ್ತು ಅಂಬೇಡ್ಕರ ವಾದ, ಸಾಮಾಜಿಕ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಪಾತ್ರ, ಸ್ವಚ್ಛತೆಯೆಡೆಗೆ ನಮ್ಮ ನಡಿಗೆ, ಲೇಖನಗಳು ಓದಿಸುತ್ತಾ ಹೋಗುವ ನಿಟ್ಟಿನಲ್ಲಿ ರಚನೆಗೊಂಡಿದ್ದನ್ನು ಗಮನಿಸಬಹುದು. 

 ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾಂವ್‌ ಗ್ರಾಮದ ಮತೊಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ 2022 ರಲ್ಲಿ ಪ್ರಕಟವಾದ ಈ ಕೃತಿಯಲ್ಲಿ 124ಪುಟಗಳಿದ್ದು 140 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

ಡಾ. ಶರಣಬಸಪ್ಪ ವಡ್ಡನಕೇರಿ ಕಲಬುರಗಿ