ಎಲ್.ಬಿ.ಕೆ. ಅಲ್ದಾಳ್ (l.b.k. aldala)
ಎನ್ ಬಿ ಕೆ ಅಲ್ದಾಳ್ (l.b.k.aldala)
ಜೀವನಾನುಭವದ ಉತ್ಕಟ ದ್ರವ್ಯ ಸಾಕು ಎಂಬುದಕ್ಕೆ ಜನಪದ ಸಾಹಿತ್ಯವನ್ನು ನಮ್ಮ ಬೆನ್ನಿಗಿರುವ ಹಾಗೆ ಹೈದರಾಬಾದ ಕರ್ನಾಟಕದಂಥ ನಿರ್ಲಕ್ಷಿತ ಪ್ರದೇಶದಲ್ಲಿ ಶ್ರೀ. ಎಲ್.ಬಿ.ಕೆ ಅಲ್ದಾಳ ಅವರಂಥ ಶ್ರೇಷ್ಠ ನಾಟಕಕಾರರು ಬಡ ಕುಟುಂಬದಲ್ಲಿ ಹುಟ್ಟಿ ಕೇವಲ ಏಳನೇ ತರಗತಿಯವರೆಗೆ ಓದಿ ನಾಟಕ ರಚನೆ, ನಿರ್ದೇಶನ, ನಟನೆ, ಮೈಗೂಡಿಸಿಕೊಂಡು ಜೀವನವನ್ನು ಸವಾಲಾಗಿ ಸ್ವೀಕರಿಸಿ ವೃತ್ತಿರಂಗಭೂಮಿಯನ್ನು ಒಪ್ಪಿಕೊಂಡು, ಪರಿಸರದ ಕಥನಗಳಿಗೆ ಸಾಹಿತ್ಯದ ಜೀವಾಳವಾಗಿಸಿಕೊಂಡು ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳು ಹೊರಬರಲು ಸಾಧ್ಯಾವಾಯಿತು. ನಾಟಕದ ವಸ್ತುವಿಗೆ ಎಲ್ಲಾ ಗಡಿಯನ್ನು ಮೀರಿ ನಿಂತು ಹಿಂದೂ ತತ್ವಜ್ಞಾನ, ಶರಣ ಸಾಹಿತ್ಯ, ಸಂಸ್ಕೃತಿ ಅವರ ವಿಶಾಲ ತೆಕ್ಕೆಗೆ ಒಲಿದು ಬಂದವು.
ಸತ್ವಭರಿತ ಕೃತಿಗಳನ್ನು ನೀಡಿರುವ ಆಳ್ವಾಳರವರು ನಾಟಕದಾಚೆ ತತ್ವಪದ, ಜೀವನ ಚರಿತ್ರೆ, ಪುರಾಣ ಇತ್ಯಾದಿ ರಚನೆಗಳಲ್ಲಿ ಪರಿಶ್ರಮ ತೋರಿರುವ ಅವರಿಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಮತ್ತು ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಸರಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಇಂತಹ ಮೇರು ವ್ಯಕ್ತಿತ್ವ ಹೊಂದಿರುವ ಎಲ್.ಬಿ.ಕೆ.ಆಲ್ದಾಳರವರ ಬದುಕು ಬರಹ ಕುರಿತು ಸಂಶೋಧನೆ ಮಾಡಿದಂತಹ ಡಾ. ಕರುಣಾ ಅ. ಜಮದರಖಾನಿ ಅವರು ಈಗ ಆಲ್ದಾಳರ ಕುರಿತು ಕೃತಿಯನ್ನು ಹೊರ ತರುತ್ತಿರುವುದು ಸಂತಸದ ವಿಷಯ ಇವರ 'ರಂಗ ದಿಗ್ಗಜ ಎಲ್.ಬಿ.ಕೆ. ಆಲ್ದಾಳ' ಎಂಬ ಕೃತಿಯ ಶೀರ್ಷಿಕೆ ಬಹಳ ಔಚಿತ್ಯಪೂರ್ಣವಾದದ್ದು.
ಕಮಲಾಪುರ ತಾಲೂಕಿನ ದೊಂಗರಗಾಂವ ಗ್ರಾಮದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ 2022 ರಲ್ಲಿ ಪ್ರಕಟವಾದ ಈ ಕೃತಿಯು 288 ಪುಟಗಳು ಹೊಂದಿದ್ದು 300 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.