'ಹರ್ ಘರ್ ತಿರಂಗಾ ಯಶಸ್ವಿಗೊಳಿಸಿ': ಮರತೂರಕರ

'ಹರ್ ಘರ್ ತಿರಂಗಾ ಯಶಸ್ವಿಗೊಳಿಸಿ': ಮರತೂರಕರ
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟಿರುವಂತೆ ಸ್ವಾತಂತ್ರೋಷದ ರ ಸಂಭ್ರಮಾಚರಣೆ ನಿಮಿತ್ಯ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮೇಲೆ, ಅಂಗಡಿ ಮುಂಗಟ್ಟುಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿ, ಹರ್ ಫರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ದೇಶದೆಲ್ಲೆಡೆ ಹರ್ ಘರ ತಿರಂಗಾ ಅಭಿಯಾನದಡಿ 13 ರಿಂದ 15ನೇ ಆಗಸ್ಟವರೆಗೆ ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ ಸ್ವಾತಂತ್ರೋತ್ಸವವನ್ನು ಹಬ್ಬದಂತೆ ಆಚರಿಸಲು ದೇಶದೆಲ್ಲೆಡೆ ಜನರು ಈಗಾಗಲೇ ಸಿದ್ಧತೆಗಳು ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಪ್ರೇರಿತರಾಗಿ ಎಲ್ಲರೂ ತಮ್ಮ ತಮ್ಮ ಮನೆ ಮೇಲೆ ಈ ಮೂರು ದಿನಗಳು ರಾಷ್ಟ್ರಧ್ವಜ ಹಾರಿಸಿ, ಈ ವರ್ಷದ ಸ್ವಾತಂತ್ರ್ಯ ತ್ತವನ್ನು ಯಶಸ್ವಿಯಾಗಿ ಆಚರಿಸಿ, ದೇಶಕ್ಕೆ ಮಾದರಿಯಾಗಬೇಕೆಂದು ಅವರು ಜನತೆಯಲ್ಲಿ ವಿನಂತಿಸಿದ್ದಾರೆ.
ಧ್ವಜವನ್ನು ಹಾರಿಸುವಾಗ ಕೇಸರಿ ಮೇಲೆ ಇರುವಂತೆ ನೋಡಿಕೊಳ್ಳುವುದು, ಧ್ವಜವು ಕೊಳೆಯಾಗಿರಬಾರದು, ಹರದಿರಬಾರದು ಮತ್ತು ರಾಷ್ಟ್ರಧ್ವಜವನ್ನು ಏರಿಸುವಾಗ ಮತ್ತು ಇಳಿಸುವಾಗ ಧ್ವಜವು ನೆಲಕ್ಕೆ ತಾಕಬಾರದು, ಪ್ರತಿಯೊಬ್ಬರು ಈ 3 ಅಂಶಗಳು ಗಮನದಲ್ಲಿಟ್ಟುಕೊಂಡು ರಾಷ್ಟ್ರಧ್ವಜವನ್ನು ಹಾರಿಸಬೇಕೆಂದು ಸಲಹೆ ನೀಡಿದ್ದಾರೆ.
ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ರಾಷ್ಟ್ರ ಧ್ವಜದೊಂದಿಗೆ ಸೆಲ್ಪಿ ಅಥವಾ ಪೋಟೋವನ್ನು ತೆಗೆದುಕೊಂಡು harghartiranga.com ನಲ್ಲಿ ಅಪ್ ಲೋಡ್ ಮಾಡಬೇಕು ಎಂದು ಅವರು ಕೋರಿದ್ದರು. ಮೂರು ದಿನಗಳಲ್ಲಿ ತಮ್ಮ ತಮ್ಮ ಊರುಗಳಲ್ಲಿ ಓಣಿಗಳಲ್ಲಿ ಶಾಲೆ ಮಕ್ಕಳಿಂದ ಅಥವಾ ಯುವಕರ ತಂಡಗಳು ರಚಿಸಿ, ದೇಶಭಕ್ತಿ ಸಾರುವಂತ ಸಾಂಸ್ಕೃತಿಕ ಚಟುವಟಿಕೆಗಳು, ನಾಟಕಗಳು ಆಯೋಜಿಸಿ ಸ್ಥಾತಂತ್ರ್ಯದ ಮಹತ್ವ ಹಾಗೂ ಸ್ವಾತಂತ್ರಕ್ಕಾಗಿ ದುಡಿದ ಹೋರಾಟಗಾರರ ಬಗ್ಗೆ ತಿಳಿಹೇಳುವ ಕೆಲಸ ಮಾಡಬೇಕೆಂದು ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.