ಮಧ್ಯಮ ಮಾರ್ಗ

ಮಧ್ಯಮ ಮಾರ್ಗ

ಮಧ್ಯಮ ಮಾರ್ಗ

ಡಾ. ಸದಾನಂದ ಪೆರ್ಲಾರವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿ, ಕಲಬುರಗಿ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯದುದ್ದಗಲಕ್ಕೂ ತಮ್ಮ ಸೇವಾ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡ ಅನುಪಮ ಸಾಧಕರಾಗಿದ್ದಾರೆ. ಅವರು ಹಲವಾರು ಸಾರ್ವಜನಿಕ, ಸಾಮಾಜಿಕ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡವರು, ತಮ್ಮ ನಿರ್ವ್ಯಾಜ ಸೇವೆಯ ಮೂಲಕ ಹೆಸರುವಾಸಿಯಾದವರು.

ಭಾರತ ಸರಕಾರದ ಪ್ರಸಾರ ಭಾರತಿಯಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದವರು. ಸರಕಾರಿ ಸೇವೆಯಿಂದ ಅವರು ನಿವೃತ್ತರಾದ ಮೇಲೆ ಸುಮ್ಮನೇ ವಿಶ್ರಾಂತ ಜೀವನ ನಡೆಸದೇ, ವಿವಿಧ ಸಂಘ-ಸಂಸ್ಥೆಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಅವಿಶ್ರಾಂತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಡುವಿನ ಸಮಯದಲ್ಲಿ ಆಗಾಗ ಬರೆದ ಲೇಖನಗಳನ್ನು ಒಂದೆಡೆ ಸೇರಿಸಿ 'ಮಧ್ಯಮ ಮಾರ್ಗ' ಎನ್ನುವ ಪುಸ್ತಕ ಹೋರತರುತ್ತಿದ್ದು ಇದರಲ್ಲಿ ಒಟ್ಟು ೧೬ ಲೇಖನಗಳಿದ್ದು, ಬುದ್ಧನು ಸಾರಿದ ಏಕತೆ', ಬಸವಣ್ಣನು ಪ್ರತಿಪಾದಿಸಿದ 'ಲೇಸು', ಅಂಬೇಡ್ಕರ್ ಬೋಧಿಸಿದ ಸಂಘಟನೆ ಹಾಗೂ ನಾರಾಯಣ ಗುರುಗಳ 'ಸಂಘಟನೆಯಿಂದ ಬಲಯುತರಾಗಿ'ಎಂಬ ಸಂದೇಶಗಳು ಸಮುದಾಯದ ಏಳಿಗೆ ಅಥವಾ ಕಲ್ಯಾಣದ ಪರಿಕಲ್ಪನೆ (Welfare State) ಒಳಗೊಂಡಿದೆ. ಒಂದು ಸಮುದಾಯದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ ಮುನ್ನಡೆಗೆ ಸಂಘಟನೆಯು ಮಹತ್ವದ ವೇದಿಕೆಯನ್ನು ಹುಟ್ಟುಹಾಕುವಲ್ಲಿ ತ್ಯಾಗ, ವಿಶಾಲ ದೃಷ್ಟಿಕೋನ, ಕಲ್ಯಾಣದ ಪರಿಕಲ್ಪನೆ, ಕೂಡಾ ಅತ್ಯಂತ ಪ್ರಮುಖ ವಿಷಯಗಳು. ಅರಿವಿನಿಂದ ಆಚಾರ ಬೆಳಗಿದಾಗ ಸಮಾಜ ಪ್ರಗತಿಯ ಹೆಜ್ಜೆಗಳನ್ನಿಡಲು ಸಹಕಾರಿಯಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಎಂಬುದನ್ನು ಈ ಪುಸ್ತಕದ ಮೂಲಕ ಮನದಟ್ಟು ಮಾಡಿಕೊಟ್ಟಿದ್ದಾರೆ.

 ಡಾ. ಶರಣಬಸಪ್ಪ ವಡ್ಡನಕೇರಿ