ಬೆಳಗಾವಿ ಸುವರ್ಣ ಸೌಧದಲ್ಲಿ ಈಡಿಗ ಬಿಲ್ಲವರ ಧರಣಿ : ಬೇಡಿಕೆ ಈಡೇರಿಕೆಗೆ ಶೀಘ್ರ ಮುಖ್ಯಮಂತ್ರಿ ಬಳಿ ನಿಯೋಗ : ಡಾ. ಶರಣ ಪ್ರಕಾಶ ಪಾಟೀಲ್
ಬೆಳಗಾವಿ ಸುವರ್ಣ ಸೌಧದಲ್ಲಿ ಈಡಿಗ ಬಿಲ್ಲವರ ಧರಣಿ :
ಬೇಡಿಕೆ ಈಡೇರಿಕೆಗೆ ಶೀಘ್ರ ಮುಖ್ಯಮಂತ್ರಿ ಬಳಿ ನಿಯೋಗ : ಡಾ. ಶರಣ ಪ್ರಕಾಶ ಪಾಟೀಲ್
ಬೆಳಗಾವಿ : ರಾಜ್ಯದ ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ ನಿಗಮಕ್ಕೆ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಶೀಘ್ರದಲ್ಲೇ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕೊಂಡಯ್ಯುವುದು ಮತ್ತು ಬೇಡಿಕೆ ಇತ್ಯರ್ಥಕ್ಕೆ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವೈದ್ಯಕೀಯ ಶಿಕ್ಷಣ ಖಾತೆಯ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದರು.
ಬೆಳಗಾವಿಯ ಸುವರ್ಣ ಸೌಧ ಮುಂಭಾಗದಲ್ಲಿ ಡಾ. ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಧರಣಿ ಸ್ಥಳಕ್ಕೆ ಡಿಸೆಂಬರ್ 19 ರಂದು ಗುರುವಾರ ಆಗಮಿಸಿದ ಸಚಿವ ಡಾ.ಕ ಶರಣಪ್ರಕಾಶ್ ಪಾಟೀಲ್ ಸೇಡಂ ಅವರು ಮನವಿ ಸ್ವೀಕರಿಸಿ ಸ್ವಾಮೀಜಿಯವರ ಜೊತೆ ಚರ್ಚಿಸಿ ಶೀಘ್ರದಲ್ಲಿ ಸಮುದಾಯದ ಬೇಡಿಕೆಗಳ ಕುರಿತಾಗಿ ಮತ್ತು ಅನುದಾನ ಬಿಡುಗಡೆಯ ಬಗ್ಗೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕೊಂಡೊಯ್ಯಲು ಸಚಿವ ಪ್ರಿಯಾಂಕ ಖರ್ಗೆ ಅವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಅನುದಾನ ಬಿಡುಗಡೆ ಮತ್ತು ವಿವಿಧ ಬೇಡಿಕೆಗಳು ನ್ಯಾಯೋಚಿತವಾಗಿದ್ದು ರಾಜ್ಯದಲ್ಲಿರುವ ಈಡಿಗ ಬಿಲ್ಲವ ನಾಮಧರಿಸಿರಿದಂತೆ 26 ಪಂಗಡಗಳ ಅಭ್ಯುದಯಕ್ಕೆ ಸರಕಾರವು ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಮುಂದಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಅನುದಾನ ಬಿಡುಗಡೆ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ. ಈಡಿಗ ನಾಮಧಾರಿ ಬಿಲ್ಲವ ಸಮುದಾಯವು ಮುಖ್ಯಮಂತ್ರಿಗಳ ಬಳಿ ನಿಯೋಗ ಕೊಂಡೊಯ್ಯು ಅವರಿಗೆ ಯಾವುದೇ ಹೋರಾಟವನ್ನು ಕೈಗೊಳ್ಳಬಾರದಾಗಿ ಸಚಿವರು ಮನವಿ ಮಾಡಿದರು. ಧರಣಿ ಸ್ಥಳದಲ್ಲಿ ಡಾ. ಪ್ರಣವಾನಂದ ಸ್ವಾಮೀಜಿಯವರು ಸಚಿವರ ಜೊತೆ ಚರ್ಚಿಸಿ ಈ ಹಿಂದಿನ ಹೋರಾಟಗಳ ಸಂದರ್ಭಗಳಲ್ಲಿ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ಸಿನ ಲ್ಲಿರುವ ತಾವು ಸೇರಿದಂತೆ ಅನೇಕ ಸಚಿವರು ಹಾಗೂ ಗಣ್ಯರು ಕಾಂಗ್ರೆಸ್ ಸರಕಾರ ರಚನೆಯಾದಲ್ಲಿ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿ ಎರಡು ವರ್ಷ ಕಳೆದರೂ ಯಾವುದೇ ರೀತಿಯಲ್ಲಿ ಸ್ಪಂದನೆ ಮಾಡಿ ಮಾಡದಿರುವುದು ಖಂಡನೀಯ. ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದುಕೊಂಡು ಹೋಗಿ ಮಾತುಕತೆ ಏನಾದ್ರೂ ಮಾಡುವ ಸೌಜನ್ಯವನ್ನು ಕೂಡ ತೋರಲಿಲ್ಲ ಆದುದರಿಂದ ಈ ಬಾರಿ ಮುಖ್ಯಮಂತ್ರಿಗಳ ಬಳಿ ಚರ್ಚಿಸಲು ಮತ್ತು ಸ್ಪಷ್ಟ ಭರವಸೆಯೊಂದಿಗೆ ಅನುದಾನ ಬಿಡುಗಡೆ, ಬೇಡಿಕೆ ಈಡೇರಿಕೆ ಮಾಡದಿದ್ದರೆ ಸುಮಾರು 50,000 ಸಮುದಾಯದ ಜನರು ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಸರಕಾರವು ಈ ಬಗ್ಗೆ ಕೂಡಲೇ ಸ್ಪಂದನೆ ನೀಡಬೇಕು ಎಂದು ಹೇಳಿದರು. ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಐನೂರು ಕೋಟಿ ರೂಪಾಯಿ ಅನುದಾನ ಬಿಡುಗಡೆ, ಕುಲ ಕಸುಬು ಸೇಂದಿ ನಿಷೇಧದಿಂದಾಗಿ ಬೀದಿಗೆ ಬಿದ್ದ ಈಡಿಗ ಬಿಲ್ಲವ ಜನಾಂಗದವರಿಗೆ ಪುನರ್ವಸತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು ಸಮುದಾಯದ ಕೋಟಾದಿಂದ ಸಚಿವರಾದ ಮಧು ಬಂಗಾರಪ್ಪ ಅವರು ಕೂಡ ಸಮುದಾಯದ ಬಗ್ಗೆ ಮೌನ ವಹಿಸಿರುವುದು ದುಃಖಕರ. ಸಮಾಜಕ್ಕಾಗಿ ಯಾವುದೇ ಕೆಲಸ ಕಾರ್ಯವನ್ನು ಮಾಡದೆ ಬೇಡಿಕೆ ಈಡೇರಿಕೆಗೂ ಸ್ಪಂದಿಸದೆ ನಿರ್ಲಕ್ಷಿಸಿರುವುದರಿಂದ ಅವರು ಕೂಡಲೇ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೊಬ್ಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಡಾ. ಪ್ರಣವಾನಂದ ಸ್ವಾಮೀಜಿಯವರು ಒತ್ತಾಯಿಸಿದರು
ಸ್ವರ್ಣ ಸೌಧದ ಮುಂಭಾಗದ ಧರಣಿ ಸ್ಥಳದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಪ್ರಾರಂಭವಾದ ಸತ್ಯಾಗ್ರಹವನ್ನು ಸಂಜೆ 5:00 ವರೆಗೆ ನಡೆಸಲಾಯಿತು. ರಾಜ್ಯದ ಭಾಗಗಳಿಂದ ಆಗಮಿಸಿದ ಸಮುದಾಯದ ಬಾಂಧವರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರುಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ರಾಜ್ಯ ಅಧ್ಯಕ್ಷರಾದ ಬಿ ಎಚ್ ಮಂಚೇಗೌಡ, ಉಪಾಧ್ಯಕ್ಷರಾದ ನಾಗರಾಜ ನಾಯಕ ಸಾಗರ, ಬೆಳಗಾವಿ ಬಿಲ್ಲವ ಸಮುದಾಯದ ಮುಖಂಡರಾದ ಸುಜನ್ ಪೂಜಾರಿ, ಸಮುದಾಯದ ಮುಂದಾಳುಗಳಾದ ಮಂಜುಳಾ ನಾಯಕ್ ಗೋಕಾಕ ಪರಶುರಾಮ ಇಲಿಗೆ ಯಶೋಧಮ್ಮ ದಾವಣಗೆರೆ ಪ್ರಕಾಶ್ ಬೊಮ್ಮನಹಳ್ಳಿ ಗದಗ, ಜೋಗಮ್ಮ ಹುಲಗೂರು, ತಿಪ್ಪೇಸ್ವಾಮಿ ಚಿತ್ರದುರ್ಗ ಚಂದ್ರಶೇಖರ್ ಕಾಪು, ನವೀನ್ ಸುರತ್ಕಲ್ ಮತ್ತಿತರರು ಹಾಜರಿದ್ದರು.