ಯು ಎ ಇ ಯು ವಿಶ್ವ ಪ್ರಸಿದ್ಧ ಸೆರಾಮಿಕ್ ರಾಕ್ಸ ಕಂಪನಿಯಿಂದ ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿನಲ್ಲ ಕ್ಯಾಂಪಸ್ ಸಂದರ್ಶನ

ಯು ಎ ಇ ಯು ವಿಶ್ವ ಪ್ರಸಿದ್ಧ ಸೆರಾಮಿಕ್ ರಾಕ್ಸ ಕಂಪನಿಯಿಂದ ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿನಲ್ಲ ಕ್ಯಾಂಪಸ್ ಸಂದರ್ಶನ

ಯು ಎ ಇ ಯು ವಿಶ್ವ ಪ್ರಸಿದ್ಧ ಸೆರಾಮಿಕ್ ರಾಕ್ಸ ಕಂಪನಿಯಿಂದ ಪಿ ಡಿ ಎ ಇಂಜಿನಿಯರಿಂಗ್ ಕಾಲೇಜಿನಲ್ಲ ಕ್ಯಾಂಪಸ್ ಸಂದರ್ಶನ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಸ್ ಅಲ್ ಖೈಮಾ ಕಂಪನಿಯ ರಾಕ್ಸ ಸೆರಾಮಿಕ್ಸ ಮತ್ತು ಕ್ಲೂಡಿ ರಾಕ್ಸ್ ವತಿಯಿಂದ ಕ್ಯಾಂಪಸ್ ಸಂದರ್ಶನ ನಡೆಯಿತು 

ರಾಕ್ ಸೆರಾಮಿಕ್ ಕಂಪನಿಯು ಸೆರಾಮಿಕ್ಸ್ ಉದ್ಯಮದಲ್ಲಿ ಅತ್ಯಂತ ಪ್ರಮುಖ ಸಂಸ್ಥೆಯಾಗಿದ್ದು ಯುವ ಪ್ರತಿಭಾವಂತ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಅವರನ್ನು ಪ್ರೋತ್ಸಾಹಿಸಲು ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ನಡೆಸುತ್ತಿದೆ.ಸೆರಾಮಿಕ್ ಮತ್ತು ಪಿಂಗಾಣಿ ಗೋಡೆ ಮತ್ತು ನೆಲದ ಅಂಚುಗಳನ್ನು, ನೈರ್ಮಲ್ಯದ ಸೇರಾಮಿಕ್ ವಸ್ತುಗಳು, ನಳಗಳು ಮತ್ತು ಟೇಬಲ್ ವೇರಗಳಲ್ಲಿ ಪರಿಣಿತಿ ಹೊಂದಿರುವ ವಿಶ್ವದ ಅತಿದೊಡ್ಡ ಸೆರಾಮಿಕ್ ಕಂಪನಿ ಇದಾಗಿದೆ.ಇದು 118 ಮಿಲಿಯನ್ ಚದುರ ಮೀಟರ್ ಟೈಲ್ಸ್,5.7 ಮಿಲಿಯನ್ ಸ್ಯಾನಿಟರಿವೇರ್ ತುಂಡುಗಳು,26 ಮಿಲಿಯನ್ ಪಿಂಗಾಣಿ ತುಂಡುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಕಂಪನಿ ಇದಾಗಿದೆ.ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಾದ್ಯಂತ ಈ ಕಂಪನಿಯ ಸೆರಾಮಿಕ್ ವಸ್ತುಗಳು ಪ್ರಸಿದ್ಧಿ ಪಡೆದಿವೆ.ಈ ಕಂಪನಿ ಭಾರತದಲ್ಲಿ 1989 ರಲ್ಲಿ ಸ್ಥಾಪನೆಯಾಯಿತು.150 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ.ವರ್ಷಕ್ಕೆ ವಿವಿಧ ದೇಶಗಳಿಂದ ಸುಮಾರು 12000 ಸಿಬ್ಬಂದಿಗಳನ್ನು ನೇಮಿಸಿಕೊಳ್ಳುತ್ತಿದೆ.

ಸೆರಾಮಿಕ್ಸ್ ಕಂಪನಿಯಿಂದ ದಿನಾಂಕ 18, 19 ಡಿಸೆಂಬರ್ 2 ದಿನಗಳ ಕಾಲ ಕ್ಯಾಂಪಸ್ ಸಂದರ್ಶನ ನಡೆಯಿತು ಈ ಕ್ಯಾಂಪಸ್ ಸಂದರ್ಶನದಲ್ಲಿ ಐಟಿಐ, ಡಿಪ್ಲೋಮಾ, ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮೆಕ್ಯಾನಿಕಲ್ ಮತ್ತು ಎಲೆಕ್ಟ್ರೀಕಲ್ ಇಂಜಿನಿಯರಿಂಗ್ ನಲ್ಲಿ ಪರಿಣಿತಿ ಹೊಂದಿರುವ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಈಗಾಗಲೇ ಉತ್ತಿರ್ಣರಾದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ,ಎಚ್ ಕೆ ಇ ಸೊಸೈಟಿ ಪಾಲಿಟೆಕ್ನಿಕ್, ಚೈನ್ನೈನ ಅಣ್ಣಾ ವಿವಿಯ ಅಲ್ ಟೆಕ್ ಬಿ ಟೆಕ್ , ಶ್ರೀ ಜಯಚಾಮರಾಜೆಂದ್ರ ಸರ್ಕಾರಿ ಪಾಲಿಟೆಕ್ನಿಕ್ ಬೆಂಗಳೂರು, ಮುರುಡೇಶ್ವರ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್, ಹೊಸಪೇಟೆಯ ಟಿ ಎಂ ಎ ಈ ಎಸ್ ಪಾಲಿಟೆಕ್ನಿಕ್ ನ ಸುಮಾರು 110 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ಕ್ಯಾಂಪಸ್ ಸಂದರ್ಶನದಲ್ಲಿ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ತರಬೇತಿ ಮತ್ತು ನಿಯೋಜನೆ ಕೋಶದ ಮುಖ್ಯಸ್ಥರಾದ ಡಾ ಎಸ್ ಬಿ ಪಾಟೀಲ್, ಹೆಚ್ಚುವರಿ ತರಬೇತಿ ಮತ್ತು ನಿಯೋಜನೆ ಅಧಿಕಾರಿ ಡಾ ನಾಗೇಶ್ ಸಾಲಿಮಠ, ಪಾಲಿಟೆಕ್ನಿಕ್ ತರಬೇತಿ ನಿಯೋಜನೆ ಅಧಿಕಾರಿ ರೋಹಿತ್ ಪಟ್ಟಣಶೆಟ್ಟಿ, ಸತೀಶ್ ಹೀರೆಮಠ ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್, ಉಪಪ್ರಾಚರಾದ ಡಾ ಎಸ್ ಆರ್ ಹೊಟ್ಟಿ ಉಪಸ್ಥಿತರಿದ್ದರು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಐ ಕೆ ಪಾಟೀಲ್ ತಿಳಿಸಿದರು.