ಅಮಿತ ಶಾ ರಾಜೀನಾಮೆ ನೀಡಬೇಕೆಂದು ಮಹಾನಾಯಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಅಮಿತ ಶಾ  ರಾಜೀನಾಮೆ ನೀಡಬೇಕೆಂದು ಮಹಾನಾಯಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಅಮಿತ ಶಾ ರಾಜೀನಾಮೆ ನೀಡಬೇಕೆಂದು ಮಹಾನಾಯಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿ: ಕೇಂದ್ರ ಗ್ರಹ ಮಂತ್ರಿಗಳಾದ ಅಮಿತ ಶಾ ಅವರು ಡಾ. ಬಿ. ಆರ್ ಅಂಬೇಡ್ಕರ ಅವರ ಬಗ್ಗೆ ಹಗುರವಾಗಿ ಮತ್ತು ಅಪಮಾನಕಾರವಾದ ಹೇಳಿಕೆ ನೀಡಿರುವುದನ್ನು ಖಂಡಿಸಬೇಕೆಂದು ಮಹಾನಾಯಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಲೋಕಸಭಾ ಅಧಿವೇಶನದಲ್ಲಿ ಡಾ| ಬಿ.ಆರ್ ಅಂಬೇಡ್ಕರ ರವರ ಬಗ್ಗೆ ಮಾತಾನಾಡುತ್ತಾ "ಅಂಬೇಡ್ಕರ ರವರ ಹೆಸರನ್ನು ಪದೆ ಪದೆ ಬಳಿಸುವುದು ಶೋಕಿಯಾಗಿದೆ ಅವರ ಹೆಸರು ಬದಲಿಗೆ ದೇವರ ಹೆಸರನ್ನು ಹೇಳಿದರೆ ಏಳು ಜನ್ಮದ ವರೆಗೂ ಸ್ವರ್ಗ ಲಭ್ಯವಾಗುತ್ತಿತು" ಎಂಬ ಕೇಂದ್ರ ಗ್ರಹ ಸಚಿವ ಅಮಿತ ಶಾ ಅವರ ಹೇಳಿಕೆಯು ಅಂಬೇಡ್ಕರ ವಿರೋಧಿ ಮನೋಭಾವ ಎದ್ದು ಕಾಣುತ್ತದೆ. ಇಂತಹ ಅಸೂಕ್ಷ್ಮ ಮತ್ತು ಅಭದ್ರ ಹೇಳಿಕೆ ಇಡೀ ದೇಶದ ಶೋಷಿತ ಸಮುದಾಯಗಳ ಸಂಕಷ್ಟ ಮತ್ತು ಅವಮಾನವನ್ನು ಪುನಃ ಒತ್ತಿ ಹೇಳುತ್ತದೆ. ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಆದಕಾರಣ ಅಮಿತ ಶಾ ಅವರಂತಹ ವ್ಯಕ್ತಿಗಳು ಇಂತಹ ಹೀನ ಹೇಳಿಕೆಗಳಿಂದ ದೇಶದ ಜನತೆ ಮುಂದೆ ಕ್ಷಮೆಯಾಚಿಸಬೇಕು ಮತ್ತು ತಮ್ಮ ಸಚಿವ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಒಂದು ವೇಳೆ ರಾಜೀನಾಮೆ ನೀಡದೆ ಇದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಕೈಗೊಳುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ವೇದಿಕೆಯ ಜಿಲ್ಲಾಧ್ಯಕ್ಷ ಮಹೇಶ ವಟವಟಿ, ನಗರಾಧ್ಯಕ್ಷ ಶಿವಾ ಎಸ್.ಬೇಲ್ಲೂರ, ಕಾಳಗಿ ಅಧ್ಯಕ್ಷ ನಾಗರಾಜ ಜೀವಣಗಿ, ಅಫಜಲಪೂರ ಅಧ್ಯಕ್ಷ ಪ್ರಕಾಶ ಚವ್ಹಾಣ ಸೇರಿದಂತೆ ಇತರರು ಇದ್ದರು.