ಧಮ್ಮ ಚಕ್ರ ಪವರ್ತನ ದಿನದ ಪ್ರಯುಕ್ತ ವೃದ್ದಾಶ್ರಮದಲ್ಲಿ ನಿರಾಶ್ರಿಗೆ ಅನ್ನ ಸಂತರ್ಪಣೆ
ಧಮ್ಮ ಚಕ್ರ ಪವರ್ತನ ದಿನದ ಪ್ರಯುಕ್ತ ವೃದ್ದಾಶ್ರಮದಲ್ಲಿ ನಿರಾಶ್ರಿಗೆ ಅನ್ನ ಸಂತರ್ಪಣೆ
ಕಲಬುರಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) (ನಾಗವಾರ ಬಣ್ಣ) ನೇತೃತ್ವದಲ್ಲಿ ನಗರದ ಹೈಕೋರ್ಟ್ ಬಳಿ ಇರುವ ಬಿದ್ದಾಪುರ ಕಾಲೋನಿಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಅನ್ನ ಸಂತರ್ಪಣೆ ಮಾಡುವ ಮೂಲಕ ೬೮ನೇ ವರ್ಷದ ಧಮ್ಮ ಚಕ್ರ ಪರಿವರ್ತನಾ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಬಸವರಾಜ್ ಬಾಡಿಯಾಳ್ ಗಾಜಿಪೂರ, ಜಿಲ್ಲಾ ಸಂಘಟನಾ ಸಂಚಾಲಕರಾದ ಆನಂದ ಹೆಚ್. ಹರ್ತಗಿ, ಷಣ್ಮುಖ ತೆಲೂರ್, ಮುಖಂಡರಾದ ಮಹಾಂತೇಶ ಜಹಾಪುರ್, ಶರಣು ಖಾನಾಪುರ್, ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷ ಮಲ್ಲೇಶಪ್ಪ ಮೇಗಡೆ, ವೀರೇಶ ಶಹಾಪೂರ್, ರಾಕೇಶ್ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.