ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವೂ ಮುಖ್ಯ : ಸಿದ್ದಲಿಂಗ ಶ್ರೀ

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವೂ ಮುಖ್ಯ : ಸಿದ್ದಲಿಂಗ ಶ್ರೀ

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವೂ ಮುಖ್ಯ : ಸಿದ್ದಲಿಂಗ ಶ್ರೀ 

ಸಮಾಜದಲ್ಲಿ ಇಂದು ವಿದ್ಯಾವಂತರಿಗಿಂತ ಹೃದಯವಂತರ ಸಂಖ್ಯೆ ಹೆಚ್ಚಾಗಬೇಕಿದೆ. ಶಿಕ್ಷಣದ ಜೊತೆಗೆ ಸಂಸ್ಕಾರವೂ ಮಕ್ಕಳಿಗೆ ಕೊಡಬೇಕಿದೆ ಎಂದು ಹೇಳಿದರು. ಅವರು ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಮಕ್ಕಳ ಪಾಲಕರಿಗಾಗಿ ಹಮ್ಮಿಕೋoಡಿದ್ದ ಪಾಲಕರ ಸಮಾಲೋಚನಾ ಸಭೆಯ ಉದ್ದೇಶಿಸಿ ಮಾತನಾಡಿದರು. ಮನೆಯೇ ಮೊದಲ ಪಾಠಶಾಲೆ ಜನನಿತಾನೆ ಮೊದಲ ಗುರು ಎನ್ನುವಂತೆ ಮನೆಯಲ್ಲಿ ತಂದೆ ತಾಯಿಗಳು ಉತ್ತಮ ಸಂಸ್ಕಾರ ಕೊಡಬೇಕು. ಶಾಲೆಯಲ್ಲಿ ಶಿಕ್ಷಕರಾದವರು ಶಿಕ್ಷಣ, ಶಿಸ್ತಿನ ಜೊತೆಗೆ ಮಕ್ಕಳಲ್ಲಿ ಪರಿಪೂರ್ಣತೆಯನ್ನು ತುಂಬುತ್ತಾರೆ. ಆದಷ್ಟು ಮಕ್ಕಳನ್ನು ಮೊಬೈಲ್ ನಿಂದ ದೂರವಿಡಿ, ಅನಗತ್ಯವಾಗಿ ನಿಮ್ಮ ಮಕ್ಕಳು ಶಾಲೆ ತಪ್ಪಿಸದಂತೆ ನೋಡಿಕೊಳ್ಳಿ, ಉತ್ತಮ ಫಲಿತಾಂಶ ಬರಬೇಕಾದರೆ ನಿರoತರ ಅಧ್ಯಯನ ಮತ್ತು ಪ್ರಯತ್ನದಿಂದ ಸಾಧ್ಯ. ಮುಂದೆ ಗುರಿಯಿರಲಿ ಹಿಂದೆ ಗುರುವಿರಲಿ ಆ ಮೂಲಕ ನೀವು ಸಾಧನೆ ಮಾಡುವಂತಾಗಲಿ ಎಂದು ಕಿವಿಮಾತು ಹೇಳಿದರು.

ಶಿಕ್ಷಕ ಸಿದ್ದಲಿಂಗ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ನಿಯಮಗಳು, ಮುಂದಿನ ಯೋಜನೆಗಳು, ಪಾಲಕರು ಮಾಡಬೇಕಾದ ಕರ್ತವ್ಯಗಳನ್ನು ವಿವರಿಸಿ ಹೇಳಿದರು. 

ಅನೇಕ ಪಾಲಕರು ಶಾಲೆ ಹಾಗೂ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು.

ಪೂಜ್ಯರು ಹಾಗೂ ಪಾಲಕರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಸಂಸ್ಥೆಯ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಸದಸ್ಯ ಸಿದ್ದಲಿಂಗೇಶ ಜ್ಯೋತಿ ಪ್ರೌಢ ಶಾಲೆ ಮುಖ್ಯಗುರು ವಿದ್ಯಾಧರ ಖಂಡಾಳ ಉಪಸ್ಥಿತರಿದ್ದರು.

ಶಿಕ್ಷಕರಾದ ಈಶ್ವರಗೌಡ ಪಾಟೀಲ್, ಶಿವಕುಮಾರ ಸರಡಗಿ, ರವಿ ಕಣೆಕರ್, ಬಸವರಾಜ ರಾಠೋಡ, ಸುಗುಣಾ ಕೊಳಕೂರ, ರಾಧಾ ರಾಠೋಡ, ಭುವನೇಶ್ವರಿ ಎಂ, ಭಾರತಿ ಪರಿಟ್, ಗೀತಾ ಜಮಾದಾರ