ಕರ್ನಾಟಕ ರಾಜ್ಯ ಹಟಗಾರ ಸಮಾಜ (ರಿ.), ಬೆಂಗಳೂರು ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಮಹಾಸಭೆ – 2025

ಕರ್ನಾಟಕ ರಾಜ್ಯ ಹಟಗಾರ ಸಮಾಜ (ರಿ.), ಬೆಂಗಳೂರು
ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಮಹಾಸಭೆ – 2025
ಕರ್ನಾಟಕ ರಾಜ್ಯ ಹಟಗಾರ ಸಮಾಜ (ರಿ), ಬೆಂಗಳೂರು ಇದರ ವಾರ್ಷಿಕ ಸರ್ವ ಸಾಮಾನ್ಯ ಮಹಾಸಭೆಯನ್ನು ದಿನಾಂಕ 18-05-2025 (ರವಿವಾರ) ಬೆಳಿಗ್ಗೆ 11 ಗಂಟೆಗೆ, ಕಲಬುರ್ಗಿ ಮಹಾನಗರದ ಡಾಫ್ರಾಬಾದ್‌ನಲ್ಲಿ ಇರುವ ಶ್ರೀ ದೇವರ ದಾಸಿಮಯ್ಯ ಸಿದ್ಧಾರೂಢ ಮಠದಲ್ಲಿ (ಜಾಫ್ರಾಬಾದ್ ಗ್ರಾಮದಿಂದ ಸಿಂದಗಿ ಕಡೆ ಹೋಗುವ ಮಾರ್ಗ ಮಧ್ಯ ರೈಲ್ವೆ ಟ್ರಾಕ್ ಬಲಗಡೆ) ಹಮ್ಮಿಕೊಳ್ಳಲಾಗಿದೆ.
ರಾಜ್ಯ ಸಂಘದ ಎಲ್ಲಾ ಆಜೀವ ಸದಸ್ಯರು ಈ ಮಹತ್ವದ ಮಹಾಸಭೆಗೆ ತಪ್ಪದೆ ಹಾಜರಾಗಬೇಕೆಂದು ಕೋರಲಾಗಿದೆ.
ಕಾರ್ಯಸೂಚಿಗಳು:
1. ಕಳೆದ ಸಾಲಿನ ವರದಿ ಮಂಡನೆ.
2. ಧರ್ಮಗುರು ಶ್ರೀ ದೇವರ ದಾಸಿಮಯ್ಯ ಮುದನೂರ ಜನ್ಮಸ್ಥಳ ಅಭಿವೃದ್ಧಿಯಲ್ಲಿ ಎದುರಾಗಿರುವ ತೊಂದರೆಗಳ ಕುರಿತು ಚರ್ಚೆ.
3. ನೂತನ ಪದಾಧಿಕಾರಿಗಳ ಆಯ್ಕೆ.
4. ಮುಂಬರುವ ಕೇಂದ್ರ ಸರ್ಕಾರದ ಜಾತಿ ಗಣತಿ ಸಮೀಕ್ಷೆ ಬಗ್ಗೆ ವಿಶೇಷ ಚರ್ಚೆ ಹಾಗೂ ಸಂಸ್ಥೆಯ ಒಪ್ಪಿಗೆ.
5. ಮುದನೂರಲ್ಲಿ ಧರ್ಮಗುರು ದೇವರ ದಾಸಿಮಯ್ಯ ಗುರುಪೀಠ ಸ್ಥಾಪನೆ ಕುರಿತು ಹಾಗೂ ನೂತನ ಪೀಠಾಧಿಕಾರಿಗಳ ಆಯ್ಕೆ ಕುರಿತು ಚರ್ಚೆ.
ಈ ಮಹಾಸಭೆಗೆ ರಾಜ್ಯದ ಎಲ್ಲಾ ಸ್ವಜಾತಿ ಹಟಗಾರ ಸಮಾಜದ ಗುರುಗಳು (ಸ್ವಾಮಿಜಿ)ರನ್ನು ಆಹ್ವಾನಿಸಲಾಗಿದೆ. ಸಭೆಯಲ್ಲಿ ಸಪ್ತ ಗುರುಗಳು, ಆಜೀವ ಸದಸ್ಯರು ಹಾಗೂ ಸಮುದಾಯದ ಹಿರಿಯರ ಅಭಿಪ್ರಾಯದ ಆಧಾರದ ಮೇಲೆ ಗುರುಪೀಠಕ್ಕೆ ನೂತನ ಪೀಠಾಧಿಕಾರಿಯನ್ನು ಆಯ್ಕೆಗೊಳಿಸಲಾಗುವುದು.
ಸ್ಥಾಪಕ ಅಧ್ಯಕ್ಷರು ಶ್ರೀ ಆರ್.ಸಿ. ಘಾಳೆ ಅವರು ಈ ಕುರಿತಂತೆ ಪತ್ರಿಕಾ ಪ್ರಕಟಣೆಯ ಮೂಲಕ ಈ ಮಾಹಿತಿ ನೀಡಿದ್ದಾರೆ.