ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ರೈತ ಪರ ಹೋರಾಟಕ್ಕೆ KYF ಬೆಂಬಲ

ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ರೈತ ಪರ ಹೋರಾಟಕ್ಕೆ KYF ಬೆಂಬಲ

ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ರೈತ ಪರ ಹೋರಾಟಕ್ಕೆ KYF ಬೆಂಬಲ

ಕಲಬುರಗಿ: 13-ಅ. ಮಧ್ಯಾಹ್ನ 4 ಗಂಟೆಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಡಿಯಲ್ಲಿ ಕಲಬುರಗಿಯಲ್ಲಿ ನಡೆದ ರೈತ ಪರ ಹೋರಾಟದಲ್ಲಿ ಕರ್ನಾಟಕ ಯುವಜನ ಓಕ್ಕೂಟ (KYF) ರಾಜ್ಯ ಸಂಚಾಲಕ ನ್ಯಾಯವಾದಿ ಜೇ.ಎಸ್. ವಿನೋದ ಕುಮಾರ ನೇತೃತ್ವದಲ್ಲಿ ಸಂಘಟನೆಯ ತಂಡ ಭಾಗವಹಿಸಿ ಬೆಂಬಲ ಸೂಚಿಸಿತು.

ಕಾರ್ಯಕ್ರಮದ ಆರಂಭದಲ್ಲಿ ದಯಾನಂದ ಪಾಟೀಲ ಅವರು ಸಂಘಟನೆಯ ಪರವಾಗಿ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ನಂತರ KYF ಜಿಲ್ಲಾ ಅಧ್ಯಕ್ಷ ಅನಂತ ಗುಡಿ ಮಾತನಾಡಿ, “ನಾನು ಕೂಡಾ ಒಬ್ಬ ರೈತಕುಟುಂಬದವನಾಗಿದ್ದು, ನಮ್ಮ ತಾತ-ತಂದೆಯವರು ಕಾರ್ಮಿಕ ಹೋರಾಟಗಾರರಾಗಿದ್ದರು. ರೈತರ ಹೋರಾಟವು ನಮ್ಮ ಹಕ್ಕಿನ ಹೋರಾಟ. ಈ ಭಾಗದ ಹೋರಾಟಗಳಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯ,” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ನ್ಯಾಯವಾದಿ ಹಾಗೂ KYF ರಾಜ್ಯ ಸಂಚಾಲಕ ವಿನೋದ ಕುಮಾರ ಅವರು, “ರೈತ ಹೋರಾಟಕ್ಕೆ ನಮ್ಮ ಸಂಘಟನೆಯಿಂದ ಸಂಪೂರ್ಣ ಬೆಂಬಲ ಇದೆ. ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೆ ನಾವು ರೈತ ಸಹೋದರರ ಜೊತೆಯಲ್ಲಿದ್ದೇವೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಅನೇಕ ಪದಾಧಿಕಾರಿಗಳು ಹಾಗೂ ರೈತ ನಾಯಕರು ಉಪಸ್ಥಿತರಿದ್ದರು.