ಆಳಂದ 2A ಮೀಸಲಾತಿಗಾಗಿ ಪೂರ್ವಭಾವಿ ಸಭೆ

ಆಳಂದ 2A ಮೀಸಲಾತಿಗಾಗಿ ಪೂರ್ವಭಾವಿ ಸಭೆ

ಆಳಂದ 2A ಮೀಸಲಾತಿಗಾಗಿ ಪೂರ್ವಭಾವಿ ಸಭೆ

ಆಳಂದ:ಆದಿ ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕೆಂದು ಪೂರ್ವಭಾವಿ ಸಭೆ ಆಳಂದ ಪ್ರವಾಸಿ ಮಂದಿರದಲ್ಲಿ ಶಿವಕುಮಾರ ಚಿಂಚೋಳಿ ದೇವಂತಗಿ ನೇತೃತ್ವದಲ್ಲಿ ನಡೆಯಿತು ಈ ಸಭೆ ಉದ್ದೇಶಿಸಿ ಆದಿ ಬಣಜಿಗ ಸಮಾಜದ ಅಧ್ಯಕ್ಷರಾದ ಶ್ರೀಮಂತ ರಾವ ಗೋದೆ ರವರು ಆದಿ ಬಣಜಿಗ ಸಮಾಜಕ್ಕೆ 2A ಮೀಸಲಾತಿ ಸಿಗಬೇಕಾದರೆ ಹೆಚ್ಚಿನ ಜನಸಂಖ್ಯೆಯಲ್ಲಿ ಬೆಳಗಾವಿಯಲ್ಲಿ 19 ರಂದು ಹೋರಾಟದಲ್ಲಿ ಪಾಲ್ಗೊಳ್ಳಬೇಕಂತ ಕರೆಕೊಟ್ಟರು ಅದೇ ರೀತಿಯಾಗಿ ನಾಗರಾಜ ಶೇಖಜೀ ದಂಗಾಪುರ ಮಾತನಾಡಿ ಆದಿ ಬಣಜಿಗ ಸಮಾಜ ಒಗ್ಗಟ್ಟಿನಿಂದ ಕೂಡಿ ಹೋರಾಟ ಮಾಡಿದಾಗ ಮಾತ್ರ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ರಾಜಕೀಯ ಪ್ರಾತಿನಿಧ್ಯ ಸಿಗುತ್ತದೆ ಅಂತ ಹೇಳಿದರು ಅದೇ ರೀತಿ ಮಲ್ಲಿಕಾರ್ಜುನ ಸಾವಳಗಿ ಮಾತನಾಡಿ ನಮ್ಮ ಸಮುದಾಯ ಕೃಷಿ ಮೇಲೆ ಅವಲಂಬಿತವಾಗಿದೆ ಇವತ್ತಿನ ರೈತರ ಸ್ಥಿತಿ ಗಂಭೀರವಾಗಿದೆ ನಮ್ಮ ಸಮುದಾಯ ಎಲ್ಲಾ ರಂಗದಲ್ಲಿ ತುಳಿತಕ್ಕೆ ಒಳಗಾಗಿದೆ ಆದಕಾರಣ ಕರ್ನಾಟಕ ಸರ್ಕಾರ 2ಎ ಮೀಸಲಾತಿ ಕೊಡ್ಬೇಕಂದ್ರೆ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ತಿಳಿಸಿದರು ಅದೇ ರೀತಿಯಾಗಿ ಬಸವರಾಜ ಬಿರಾದಾರ್ ಮಾತನಾಡಿ ನಮ್ಮ ಜನರ ಜೀವನಮಟ್ಟ ಚಿಂತಾ ಜನಕವಾಗಿದೆ ಎಲ್ಲಾ ರಂಗದಲ್ಲಿ ನಮ್ಮ ಜನ ಮುಂದು ಬರಬೇಕಾದರೆ ನಾವೆಲ್ಲರೂ ಕೂಡಿ ಒಗ್ಗಟ್ಟಿನಿಂದ ಇರಬೇಕು ಮತ್ತು ಸಮಾಜದ ಮೇಲೆ ಯಾರೆ ಅನ್ಯಾಯ ಮಾಡಿದರು ಕೂಡ ಸಹಿಸುವುದಿಲ್ಲ ಹೀಗಾಗಿ 2A ಮೀಸಲಾತಿ ಅತಿ ಅವಶ್ಯಕ ವಾಗಿದೆ ಅಂತ ಹೇಳಿದರು ಯುವನಾಯಕ ಶಿವಕುಮಾರ ಚಿಂಚೋಳಿ ದೇವಂತಗಿ ನಾವೆಲ್ಲರೂ ಸೇರಿ 19 ರಂದು 2024ರಂದು ಬೆಳಗಾವಿಹೋರಾಟದಲ್ಲಿ ಭಾಗವಹಿಸೋಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದುಮನವಿ ಮಾಡಿಕೊಂಡರು ನಮ್ಮ ಆದಿ ಬಣಜಿಗ ಸಮಾಜದ ಜನರು ಮತ್ತೊಬ್ಬರ ಹೊಲಗಳಿಗೆ ಕೆಲಸ ಮಾಡಲು ಹೊರಟಿದ್ದಾರೆ ಹಮಾಲಿ ಕೆಲಸ ಮಾಡುತ್ತಾರೆ ಅಂಗಡಿಗಳಲ್ಲಿ ಕೆಲಸ ಮಾಡುತ್ತಾರೆ ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಹಿಂದುಳಿದಾಗ ನಮಗೇಕೆ 2ಎ ಮೀಸಲಾತಿ ಕೊಡುವುದಿಲ್ಲ ಮತ್ತು 2A ಮೀಸಲಾತಿಗಾಗಿ ಪ್ರತಿಯೊಬ್ಬ ಮನೆಯಲ್ಲಿ ಇರುವಂತ ಸ್ವಾಭಿಮಾನಿ ಆದಿ ಬಣಜಿಗ ಸಮಾಜದ ನನ್ನ ಅಣ್ಣ ತಮ್ಮಂದಿರು ನಾವೆಲ್ಲರೂ ಕೂಡ 2A ಮೀಸಲಾತಿಗಾಗಿ ಸೈನಿಕರ ತರ ಕೆಲಸ ಮಾಡೋದು ಅನಿವಾರ್ಯವಾಗಿದೆ ರಕ್ತ ಕೊಟ್ಟೆವು ಮೀಸಲಾತಿ ಬಿಡುವೆವು ಅಂತ ಘೋಷಣೆಯೊಂದಿಗೆ ತಿಳಿಸಿದರು. ಆದಿ ಬಣಜಿಗ ಸಮಾಜದ ಮುಖಂಡರು ಶಾಂತಮಲ್ಲ ಚಿಂಚೋಳಿ ಸಿದ್ದಲಿಂಗ ಚಿತಲಿ ಸುಭಾಷ ಚಿತಲಿ ಸಿದ್ದರಾಮ್ ಬಸ್ತೆ ಶರಣು ಬೆಳಮ ಶಿವಾನಂದ ಚಿಕ್ಕಳ್ಳಿ ಬಸವರಾಜ ವಾಡಿ ಶಿವಕುಮಾರ ವಾಡಿ ಲಕ್ಷ್ಮೀಪುತ್ರ ಕವಲಗಾ ಶರಣು ಕುಮಾರ ದೇವಂತಗಿ ಶಿವಾನಂದ ಪಾಟೀಲ ಹನುಮಂತ ನಗದೆ ಬಸವರಾಜ ನಗದೆ ಮಲ್ಲಿಕಾರ್ಜುನ ಬೆಳಮಗಿ ಬಂಡೆಪ್ಪ ಸರ್ಸಂಬಿ ನಾಗೇಂದ್ರ ಮುಲಗೆ ಚಿದಾನಂದ ಹಿಮಾಜಿ ಶಿವಬಸವ ಶಿವ ಕಿರಣ ಪಡಸಾವಳಿ ಹಲವಾರು ಮುಖಂಡರು ಉಪಸ್ಥಿತರಿದ್ದರು.