ಶಾದಿಪೂರ್ ಭಾಗದ ರೈತರ ಬೆಳೆ ನಷ್ಟಕ್ಕೆ ಪ್ರಕೃತಿವಷ್ಟೇ ಕಾರಣ ಅಲ್ಲ. ಮಾಜಿ ಶಾಸಕ ಡಾ. ಉಮೇಶ ಜಾಧವ್ ಹಾಗೂ ಹಾಲಿ ಶಾಸಕ ಡಾ. ಅವಿನಾಶ ಜಾಧವ ಕಾರಣ : ಸುಭಾಷ ರಾಠೋಡ ಆರೋಪ
ಶಾದಿಪೂರ್ ಭಾಗದ ರೈತರ ಬೆಳೆ ನಷ್ಟಕ್ಕೆ ಪ್ರಕೃತಿವಷ್ಟೇ ಕಾರಣ ಅಲ್ಲ. ಮಾಜಿ ಶಾಸಕ ಡಾ. ಉಮೇಶ ಜಾಧವ್ ಹಾಗೂ ಹಾಲಿ ಶಾಸಕ ಡಾ. ಅವಿನಾಶ ಜಾಧವ ಕಾರಣ : ಸುಭಾಷ ರಾಠೋಡ ಆರೋಪ
ಚಿಂಚೋಳಿ : ಅತಿ ಹೆಚ್ಚು ಬೆಳೆ ನಷ್ಟ ಶಾದಿಪೂರ್ ಭಾಗದ ರೈತರದಾಗಿದೆ. ಬೆಳೆ ನಷ್ಟ ಆಗಲು ಪ್ರಕೃತಿ ವಿಕೋಪ ಅಷ್ಟೇ ಕಾರಣ ಅಲ್ಲ. ಮಾಜಿ ಶಾಸಕ ಡಾ. ಉಮೇಶ ಜಾಧವ್ ಮತ್ತು ಹಾಲಿ ಶಾಸಕ ಡಾ.ಅವಿನಾಶ ಜಾಧವ್ ಅವರ ಆಡಳಿತ ಕಾರಣ ಎಂದು ಸುಭಾಷ ರಾಠೋಡ್ ಆರೋಪಿಸಿದರು.
ಅವರು ಅತಿವೃಷ್ಟಿಯಿಂದ ಹಾನಿಗೊಂಡಿರುವ ತಾಲೂಕಿನ ಶಾದಿಪೂರ್, ಬೋನಸಪೂರ್, ಮೊಗದಂಪೂರ್, ಕಲ್ಲೂರ್ ರೋಡ್, ಮಿರಿಯಾಣ ಹಾಗೂ ಕಿಷ್ಟಾಪೂರ್, ಭೈರಂಪಳ್ಳಿ ಗ್ರಾಮಗಳಿಗೆ ಭೇಟಿ, ನೀಡಿ ಪರಿಶೀಲನೆ ನಡಿಸಿ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು.
ಶಾದಿಪೂರ್ ಕೆರೆ ಒಡೆದು ಮೂರು ವರ್ಷ ಗಳಾಗಿವೆ. ಕೆರೆ ದುರಸ್ತಿ ಕಾರ್ಯ ನಡೆಸದೆ ಇರುವ ಕಾರಣಕ್ಕೆ ಶಾದಿಪೂರ್ ಭಾಗದ ರೈತರು ಬೆಳೆದ ಕಬ್ಬು, ತೊಗರಿ, ಸೋಯಾ, ಕೌಳಿ ಸೇರಿ 6೦೦ಕ್ಕೂ ಹೆಚ್ಚಿನ ಬೆಳೆ ನಷ್ಟ ವಾಗಲು ಪ್ರಕೃತಿ ವಿಕೋಪವಷ್ಟೇ ಕಾರಣವಲ್ಲ. ಕೆರೆ ದುರಸ್ತಿ ಕಾರ್ಯ ನಡಸದೆ ನಿರ್ಲಕ್ಷ ವಹಿಸಿರುವ ಹಿಂದೆ ಆಡಳಿತ ನಡೆಸಿರುವ ಮಾಜಿ ಶಾಸಕ ಡಾ. ಉಮೇಶ ಜಾಧವ್ ಮತ್ತು ಆಡಳಿತ ನಡೆಸುತ್ತಿರುವ ಹಾಲಿ ಶಾಸಕ ಡಾ. ಅವಿನಾಶ ಜಾಧವ ಅವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ.
ಶಾಸಕರು ಶಾದಿಪೂರ್ ಕೆರೆ ದುರಸ್ತಿ ಕಾರ್ಯ ನಡೆಸಿದರೆ, ಇಂದು 600 ಎಕರೆಯ ರೈತರ ನಷ್ಟದ ಬೆಳೆಗಳ ಹಾನಿ ತಡೆಯಬಹುದಾಗಿತ್ತು.
ಹಾಗಾಗಿ ಶಾದಿಪೂರ್ ಭಾಗದ ರೈತರು ಕಣ್ಣೀರು ಹಾಕುತ್ತಿರುವುದಕ್ಕೆ ಪ್ರಕೃತಿ ವಿಕೋಪ ಕಾರಣ ಅಷ್ಟೇ ಅಲ್ಲ. ಶಾಸಕರ ನಿರ್ಲಕ್ಷ ಧೋರಣೆಯೇ ಇದಕ್ಕೆ ನೇರ ಕಾರಣ. ರೈತರ ನಷ್ಟಕ್ಕೆ ಶಾಸಕರೇ ಹೊಣೆಗಾರರು ಎಂದು ಆರೋಪಿಸಿದರು.
ಸರಕಾರದಿಂದ ಒದಗಿಸಿರುವ ಮೂಲಭೂತ ಸೌಲಭ್ಯಕ್ಕೆ ಮತ್ತು ರೈತರ ಬೆಳೆಗೆ ಹಿಂದೆ ಎಂದು ಕಂಡರಿಯದಂತಹ ನಷ್ಟ ಚಿಂಚೋಳಿ ತಾಲೂಕಿನಲ್ಲಿ ಆಗಿದೆ. ಹೀಗಾಗಿ ಆಗಸ್ಟ್ ನಲ್ಲಿ ನಡೆದಂತಹ ಸಮೀಕ್ಷೆ ಗಿಂತ 10 ರಷ್ಟು ಹೆಚ್ಚು ನಷ್ಟ ಈಗ ಸುರಿದಿರುವ ಮಳೆಯಿಂದಾಗಿದೆ. ಅಂದಾಜು 60 ಕೋಟಿ ರೂಪಾಯಿಗೂ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಆಗಿದ್ದು, ಮೇಲ್ನೋಟಕ್ಕೆ ಕಾಣಿಸಿಗುತ್ತಿದೆ. ಮಳೆ ಕಡಿಮೆ ಆದ ಬಳಿಕ ಅಧಿಕಾರಿಗಳ ಸಂಪೂರ್ಣ ಸಮೀಕ್ಷೆಯ ವರದಿಸಿಗಲಿದೆ. ಕ್ಷೇತ್ರಕ್ಕೆ ಅನುದಾನ ನೀಡಲು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೂ ಪ್ರಕೃತಿ ವಿಕೋಪ ಹಾನಿಯ ಬಗ್ಗೆ ಮಾಹಿತಿ ನೀಡಿ ಅನುದಾನ ಬಿಡುಗಡೆಗೆ ಕೋರಲಾಗುವುದು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಬಸವರಾಜ ಮಲಿ, ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ್, ಅಬ್ದುಲ್ ಬಾಶೀದ್, ಲಕ್ಷ್ಮಣ ಆವಂಟಿ, ನಾಗೇಶ ಗುಣಾಜಿ, ಅಬ್ದುಲ್ ರೌಫ್ ಮಿರಿಯಾಣ, ಜಗನ್ನಾಥ ಕಟ್ಟಿ, ಅನಿಲಕುಮಾರ ಹುಡದಳ್ಳಿ, ಆರ್ ಗಣಪತರಾವ ರಾಮುಲು, ನರಸಿಮುಲು ಕುಂಬಾರ, ನರಸಿಮುಲು ಸವಾರಿ, ಸುರೇಶ ಭಂಟ ಅವರು ಇದ್ದರು.