ಎಚ್ ಕೆ ಇ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯ ನೇತ್ರ ತಜ್ಞ ವೈದ್ಯರಾದ ಡಾ ನಾಗವೇಣಿ ಗುಬ್ಬೇವಾಡರವರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ

ಎಚ್ ಕೆ ಇ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯ ನೇತ್ರ  ತಜ್ಞ ವೈದ್ಯರಾದ ಡಾ ನಾಗವೇಣಿ ಗುಬ್ಬೇವಾಡರವರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ

ಎಚ್ ಕೆ ಇ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯ ನೇತ್ರ ತಜ್ಞ ವೈದ್ಯರಾದ ಡಾ ನಾಗವೇಣಿ ಗುಬ್ಬೇವಾಡರವರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ

 ನಾಯಿ ಕಡಿತದಿಂದ ತೀವ್ರವಾಗಿ ಕಣ್ಣಿಗೆ ಗಾಯವಾಗಿ ಶಾಶ್ವತವಾಗಿ ಕಣ್ಣು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಶಹಾಬಾದ್ ನಗರದ ಅತ್ಯಂತ ಬಡ ಕುಟುಂಬದ 7 ವರ್ಷದ ಬಾಲಕಿ ದೀಪಾಲಿ ಕಲಬುರ್ಗಿ ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರತಿಷ್ಠಿತ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗುತ್ತಾಳೆ. ದಾಖಲಾದ ಬಾಲಕಿಯನ್ನು ಆಸ್ಪತ್ರೆಯ ತಜ್ಞ ನೇತ್ರ ವೈದ್ಯರಾದ ಡಾ ನಾಗವೇಣಿ ಗುಬ್ಬೇವಾಡರವರು ಪರೀಕ್ಷಿಸಿ ತಿವ್ರವಾಗಿ ಗಾಯಗೊಂಡು ಶಾಶ್ವತವಾಗಿ ಕಣ್ಣು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಆ 7 ವರ್ಷದ ಬಾಲಕಿಯ ಕಣ್ಣಿಗೆ ಯಾವುದೇ ತೊಂದರೆಯಾಗಬಾರದು ಎಂದು ನಿರ್ಧರಿಸಿ ಅತ್ಯಂತ ಸೂಕ್ಷ್ಮ ರೀತಿಯ ಶಸ್ತ್ರಚಿಕಿತ್ಸೆ ಮುಂದಾಗಿ ಚಿಕಿತ್ಸೆ ಆರಂಭಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿ ಬಾಲಕಿಯ ಕಣ್ಣಿಗೆ ಯಾವುದೇ ತೊಂದರೆಯಾಗದಂತೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ. ಸಂಸ್ಥೆಯ ಮೆಚ್ಚುಗೆಗಳಿಸಿದ್ದಾರೆ ಇವರ ಕಾರ್ಯಕ್ಕೆ ಬಾಲಕಿಯ ತಂದೆ ತಾಯಿ ಅತ್ಯಂತ ಖುಷಿಯಿಂದ ವೈದ್ಯರನ್ನು ಹರಿಸಿ ಕೊಂಡಿದ್ದಾರೆ 

ಇವರ ಯಶಸ್ವಿ ಶಸ್ತ್ರಚಿಕಿತ್ಸೆಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ ನಮೋಶಿ ಹಾಗೂ ಉಪಾಧ್ಯಕ್ಷರಾದ ಶ್ರೀ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಶ್ರೀ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಡೀನ್ ಡಾ ಶರಣಗೌಡ ಪಾಟೀಲ್ ಶ್ಲಾಘಿಸಿದ್ದಾರೆ

ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ಶರಣಬಸಪ್ಪ ಅವಂತಿಯವರು ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರೆಗೆ ಕಣ್ಣು ಮತ್ತು ಕಣ್ಣಿಗೆ ಸಂಬಂಧಿಸಿದ ಸಣ್ಣ ಪುಟ್ಟ ಗಾಯ, ತಿವ್ರ ಗಾಯ,ಸುಟ್ಟ ಗಾಯ,ನಾಯಿಯಂತ ಪ್ರಾಣಿಗಳಿಂದಾದ ಕಡಿತದಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗದಂತೆ ಸೂಕ್ಷ್ಮ ಜೀವಿರಹಿತ ( ಸೂಕ್ಷ್ಮ ಜೀವಿಗಳಿಂದ ಮುಕ್ತವಾದ/sterility) ಗಳನ್ನೋಳಗೊಂಡ ಆಧುನಿಕ ಸಾಕ್ಷಿ ಆಧಾರಿತ(evidence based) ಶಸ್ತ್ರ ಚಿಕಿತ್ಸೆ ಗಳನ್ನು ಡಾ ರೇಣುಕಾ ಗುಬ್ಬೆವಾಡ ಸತತವಾಗಿ ಸೇವೆ ನೀಡುತ್ತಾ ಬಂದಿದ್ದಾರೆ. ಇಂತಹ ಸೂಕ್ಷ್ಮ ರೀತಿಯ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಬಸವೇಶ್ವರ ಆಸ್ಪತ್ರೆಯ ಮುಂಚೂಣಿಯಲ್ಲಿ ಇದೆ ಎಂದು ಹೇಳಿದ್ದಾರೆ

dr nagaveni gubbevad