ಪ್ರಕಾಶಕರ ಪ್ರಥಮ ಸಮ್ಮೇಳನಾಧ್ಯಕ್ಷರಾದ ಡಾ.ಬಸವರಾಜ ಕೊನೇಕ ಅವರಿಗೆ ಅಧಿಕೃತ ಆಹ್ವಾನ
ಪ್ರಕಾಶಕರ ಪ್ರಥಮ ಸಮ್ಮೇಳನಾಧ್ಯಕ್ಷರಾದ
ಡಾ.ಬಸವರಾಜ ಕೊನೇಕ ಅವರಿಗೆ ಅಧಿಕೃತ ಆಹ್ವಾನ
ಕಲಬುರಗಿ: ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಕಳೆದ ಐದು ದಶಕಗಳಿಂದ ನಿರಂತರವಾದ ಪುರಸ್ಕೃತರು ವ್ಯಾಪಾರ,ಈ ಭಾಗದ ವಿದ್ಯಾರ್ಥಿಗಳು,ಉಪನ್ಯಾಸಕರಿಗೆ,ಪಠ್ಯವನ್ನು ಒದಗಿಸಿ ಉಪಕರಿಸಿದವರು,ಮುಂದೆ ಈ ಪ್ರದೇಶಕ್ಕೆ ಒತ್ತು ನೀಡಿ ಯುವ,ಹಿರಿಯ,ಸಮಕಾಲೀನ ಲೇಖಕ, ಲೇಖಕಿಯರಿಗೆ ಜಾತ್ಯಾತೀತವಾಗಿ ಎಲ್ಲಾ ಪ್ರತಿಭಾನ್ವಿತರ ಗುರುತಿಸಿಇಂದು ಮೂರು ಸಾವಿರದ ಏಳನೂರು ವಿವಿಧ ಪ್ರಕಾರದ ಪುಸ್ತಕ ಪ್ರಕಟಿಸಿದ್ಧು ಸಾಮಾನ್ಯ ಸಂಗತಿಯಲ್ಲ ಅವರೊಬ್ಬ ಪುಸ್ತಕ ಸಂಸ್ಕೃತಿಯ ಭೀಷ್ಮರಾಗಿದ್ದಾರೆಂದು ಹಿರಿಯ ಸಾಹಿತಿ ಮತ್ತು ಸಮ್ಮೇಳನ ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ಶ್ರೀ ಸಿದ್ಧಲಿಂಗೇಶ್ವರ ಬುಕ್ ಮಹಲ್ ದಲ್ಲಿ ಏರ್ಪಡಿಸಿದ
ಹಿರಿಯ ಪುಸ್ತಕೋದ್ಯಮಿ, ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯ ಸಂಸ್ಥಾಪಕರಾದ ಡಾ.ಬಸವರಾಜ ಜಿ.ಕೊನೇಕ ಅವರಿಗೆ ಅಧಿಕೃತ ಆಹ್ವಾನ
ಪತ್ರ ನೀಡಿ ಆಹ್ವಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಇವರ ಪರಂಪರೆಯನ್ನು ಇಬ್ಬರು ಮಕ್ಕಳಾದ ಸಿದ್ಧಲಿಂಗ ಮತ್ತು ಶರಣು ಆ ಪರಂಪರೆಯನ್ನು ಮುಂದುವರಿಸಿದ್ದಾರೆ.
ಅಲ್ಲದೇ ಹಲವಾರ ಲೇಖನ,ಥಾಯ್ ಪ್ರವಾಸಕಥನ,ಕೃತಿ ಪ್ರಕಟಿಸಿದ್ದಾರೆ.ಇವರ ಸೇವೆ ಪರಿಗಣಿಸಿ ಪ್ರಕಾಶಕರ ಪ್ರಥಮ ಸಮ್ಮೇಳನಾಧ್ಯಕ್ಷರ ಆಯ್ಕೆ ಅತ್ಯಂತ ಸೂಕ್ತವಾಗಿದೆ ಎಂದರು.
ಕೊಪ್ಪಳ ಜಿಲ್ಲಾ ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಾಹಿತಿ ವೀರಣ್ಣ ನಿಂಗೋಜಿ ಅವರು ಆಮಂತ್ರಣ ಬಿಡುಗಡೆ ಮಾಡಿ ಮಾತನಾಡಿ ಸಪ್ನಾ ಮಾದರಿಯ ಸಿದ್ಧಲಿಂಗೇಶ್ವರ ಇಂದು ಬಹು ಪ್ರಸಿದ್ದಿ ಹೊಂದಿದೆ. ಸಾವಿರಾರು ಲೇಖಕರು ಇವರಿಂದ ಹೊರಹೊಮ್ಮಿದ್ದಾರೆ ಇವರ ಪ್ರಕಾಶನದ ಕಾರ್ಯದಲ್ಲಿ ತ್ರಿವಿಕ್ರಮನಂತೆ ಕೆಲಸಕ್ಕೆ ತಕ್ಕಂತೆ ಪ್ರಕಾಶಕರ ಸಮ್ಮೇಳನ ಅಧ್ಯಕ್ಷರಾಗಿದ್ದು ಎಲ್ಲರೂ ಗೌವಿಸಿದಂತೆ ಈ ಆಮಂತ್ರಣ ನೋಡಿದರೆ ಎಲ್ಲ ರನ್ನು ಒಳಗೊಂಡಿದ್ದಾರೆ ಇದು ಮುಖ್ಯವೆಂದರು.
ಸಾಹಿತಿ ಪತ್ರಕರ್ತ ಮಾಣಿಕ ಭುರೆ ಬಸವರಾಜ ಕೊನೇಕ ಅವರು ಕಲ್ಯಾಣ ಕರ್ನಾಟಕ ಪ್ರದೇಶದ ಲೇಖಕರಿಗೆ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ ಅವರ ಸೇವೆ ಈ ಭಾಗ ಮರೆಯುವಂತಿಲ್ಲ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ಮಾತನಾಡಿ ಮೊದಲು ಕೊನೇಕ ಅವರು ಮಾನವೀಯತೆ ಮನುಷ್ಯ. ಅವರ ಪುಸ್ತಕ ಸಂಸ್ಕೃತಿ ಪಯಣ ಇಂದಿನದಲ್ಲ.ಅವರು ಪಟ್ಟ ಪರಿಶ್ರಮ,ಪಾಡು ಹಾಡಾಗಿ ಸಿದ್ಧಲಿಂಗೇಶ್ವರ ಮತ್ತು ಶರಣಬಸವೇಶ್ವರರ ಆರಾಧಕರಾಗಿ,ಪುಸ್ತಕ ಲೋಕದ ಆರಾಧಕರಾದವರು.ಅವರು ಬೆಳೆದಂತೆ ದೊಡ್ಡವರಾದಂತೆ ಬಾಗಿದವರು.ಅವರಿಗೆ ಇನ್ನೂ ಸರರ್ಕಾರದ ಉನ್ನತ ಪ್ರಶಸ್ತಿ ಲಭಿಸಲಿ ಎಂದರು.
ಅಧಿಕೃತ ಆಹ್ವಾನ ಸ್ವೀಕರಿಸಿದ ಡಾ.ಬಸವರಾಜ ಕೊನೇಕ ಅವರು ನನಗೆ ನಿಜಕ್ಕೂ ಸಂತಸ ತಂದಿದೆ.ನನ್ನ ಸೇವೆ ಗುರುತಿಸಿದ ಉರಿಲಿಂಗಪೆದ್ದಿ ಮಠಕ್ಕೆ ನಾನು ಚಿರ ಋಣಿ.
ಸಣ್ಣ ಮಠವಾದರು ದೊಡ್ಡ ಕೆಲಸ ಮಾಡಿದೆ.ಇದಕ್ಕೆ ಸಿದ್ಧಲಿಂಗೇಶ್ವರ ಮತ್ತು ಶರಣಬಸವರ ಆಶೀರ್ವಾದ ಎಂದು ಭಾವಿಸಿದ್ದೇನೆ.ಇದು ನನಗೆ ಮಾತ್ರವಲ್ಲ ಕರ್ನಾಟಕ ದ ಸಮಸ್ತ ಪ್ರಕಾಶಕರಿಗೆ ಸಂದ ಗೌರವ ಎಂದು ಭಾವಿಸಿದ್ದೇನೆಂದರು.ಸಿದ್ಧಲಿಂಗ ಕೊನೇಕ,ಜಯದ್ರತ, ಸರೋಜಾ,ಸಾಕ್ಷಿ ಜಿ. ಇತರರು ಉಪಸ್ಥಿತಿ ಇದ್ದರು.
ಡಾ.ರಾಜಕುಮಾರ ಮಾಳಗೆ ಸ್ವಾಗತಿಸಿದರು,ಡಾ.ಸಿದ್ದಪ್ಪ ಹೊಸಮನಿ ನಿರೂಪಿಸಿದರು ಡಾಕಪ್ಪ ಎಂ.ಡಿ ವಂದಿಸಿದರು.
ವರದಿ ಡಾ. ಅವಿನಾಶ .S. ದೇವನೂರ
