ನಾಗರ ಪಂಚಮಿ ಹಬ್ಬದ ಸಂಭ್ರಮ

ನಾಗರ ಪಂಚಮಿ ಹಬ್ಬದ ಸಂಭ್ರಮ

ನಾಗರ ಪಂಚಮಿ ಹಬ್ಬದ ಸಂಭ್ರಮ

ಕಮಲನಗರ :ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ಮಹಿಳೆಯ ಬುಲಾಯಿ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಪಂಚಮಿ ಹಬ್ಬ ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.

ವೈಜೀನಾಥ ಪಾಟೀಲ ಅವರ ಮನೆ ಮುಂದೆ ಮಂಗಳವಾರ ಗ್ರಾಮದ ನೂರಾ ಜನ ಮಹಿಳೆಯ ಜಮಾಯಿಸಿ ಪಂಚಮಿ ಹಬ್ಬದ ಪರಂಪರೆಯಾಗಿ ಬಂದಿರುವ ಬುಲಾಯಿ ಹಾಡುಗಳ ಮೂಲಕ ತವರಿನ ಗುಣಗಾನ, ಊರಿನ ಪರಿಚಯ,ಅಣ್ಣ ತಂಗಿಯರ ಬಾಂಧವ್ಯ, ಹೆಣ್ಣು ಮಕ್ಕಳ ಬದುಕಿನ ಉದ್ದಕ್ಕೂ ಕಷ್ಟ-ಸುಖಗಳ ಬಗ್ಗೆ ಅನೇಕ ಜನ ಪದ ಹಾಡುಗಳ ಪರಿಚಯಿಸುವ ಮೂಲಕ .ಅವು ತ್ಯಾಗ ಬಲಿದಾನ ಗಳೊಂದಿಗೆ *ನಾಗರ ಪಂಚಮಿ ಹಬ್ಬ ನಾರಿಯರಿಗೆ ಏನ ಹಿಗ್ಗ .... ಎಂಬ* ಹಬ್ಬದ ಮಹತ್ವ ಕೊಂಡಾಡಿದ್ದಾರೆ.

ಓಣಿ -ಓಣಿಗಳಲ್ಲಿ ಬೈಸಾಕ್ ಇವರು ಸ್ಥಳದಲ್ಲಿ ಗುಂಪಾಗಿ ಸೇರಿಕೊಂಡು ಕೈ ಕೈ ಹಿಡಿದು ದುಂಡಾಗಿ ನಿಂತು ಕೊಂಡು ಒಂದೊಂದೇ ಹೆಜ್ಜೆಯಿಡುತ್ತಾ ವೃತ್ತಾಕಾರವಾಗಿ ಸುತ್ತುತ್ತಾ ಭುಲಾಯಿ ಹಾಡುವರು.

ಈ ಸಂದರ್ಭದಲ್ಲಿ ನೀಲಮ್ಮ ಬಿರಾದಾರ, ಸುಗಣಾವತಿ ಟೊಣ್ಣೆ, ಪಾರಮ್ಮ ಚಾಂಡೇಶ್ವರೆ, ರತ್ನಬಾಯಿ ರಾಂಪುರೆ, ಮಲ್ಲಮ್ಮ ಬಿರಾದಾರ, ರತ್ತನ್ಮ ಬಿರಾದಾರ, ಚಂದ್ರಮ್ಮ ಶ್ರೀಗಿರೆ, ಸಂಗಮ್ಮ ರಾಂಪುರೆ, ಕಮಲಬಾಯಿ ಮುರ್ಕೆ ಸೇರಿದಂತೆ ಅನೇಕರು ಇದ್ದರು.