ಶರಣರ ತತ್ವ ಅರಿತರೆ ಜನ್ಮ ಸಾರ್ಥಕ

ಶರಣರ ತತ್ವ ಅರಿತರೆ ಜನ್ಮ ಸಾರ್ಥಕ

 ಶರಣರ ತತ್ವ ಅರಿತರೆ ಜನ್ಮ ಸಾರ್ಥಕ

ಕಮಲನಗರ: ಯಾಂತ್ರಿಕತೆ ಒತ್ತಡ ಮತ್ತು ಬದುಕಿನಲ್ಲಿ ಪ್ರವಚನಗಳು ಮಾನಸಿಕ ನೆಮ್ಮದಿ ನೀಡುವ ತಾಣಗಳಾಗಿವೆ. ಪುರಾಣ, ಪುಣ್ಯಕಥೆ ಮತ್ತು ಶರಣ- ತತ್ವಗಳನ್ನು ಅರಿತು ಜನ್ಮ ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಸೋನಾಳ ವಿರಕ್ತ ಮಠದ ಚನ್ನವೀರಸ್ವಾಮಿ ನುಡಿದರು.

 ಕಮಲನಗರ ತಾಲೂಕಿನ ಸೋನಾಳ ಗ್ರಾಮದ ವಿರಕ್ತ ಮಠದಲ್ಲಿ ಸಾಯಂಕಾಲ ಲಿಂಗೈಕ್ಯ ನಿರಂಜನ ಸ್ವಾಮಿಗಳ 15ನೇ ಪುಣ್ಯ ಸ್ಮರಣೋತ್ಸವ ಹಾಗೂ ನೂತನರಥೋತ್ಸವ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಬಸವ ದರ್ಶನ ಪ್ರವಚನಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದರು.

ಆಧುನಿಕ ಯುಗದಲ್ಲಿ ಪ್ರವಚನ ಆಲಿಸಲು ಪುರಸೊತ್ತು ಇಲ್ಲದಂತಾಗಿದೆ. ಬಸವಾದಿ ಶರಣರು ವಚನ ಸಾಹಿತ್ಯದ ಸಾರವನ್ನು ವಿಶ್ವಕ್ಕೆ ಉಣಬಡಿಸಿದ್ದಾರೆ. ಕಾಯಕ. ದಾಸೋಹ ಮತ್ತು ಸಾಮಾಜಿಕ ಮೌಲ್ಯಗಳು ನೀಡಿದ ಶರಣರ ತತ್ವಗಳು ಮನುಕುಲದ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿವೆ ಎಂದರು.

ಪ್ರವಚನಕಾರ ಗವಿಸಿದ್ದೇಶ್ವರ ಶಾಸ್ತ್ರಿ ಅವರು ಪ್ರವಚನ ಆಲಿಸುವಿಕೆಯಿಂದ ಆಗುವ ಪ್ರಯೋಜನೆ ಮತ್ತು ಮಹತ್ವ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಶಾಂತಪ್ಪದೇವಪ್ಪ, ಗ್ರಾಮದ ರಾಜಕುಮಾರ ಅಲವೀದೆ, ಶಿವಯೋಗಿ ಪಟವಾರಿ, ವಿಜಯಕುಮಾರ ಬಿರಾದಾರ, ಶಿವಕುಮಾರ ಕೌಡಗಾವೆ, ಅನೀಲ ಪಾಟೀಲ, ಕಲ್ಯಾಣರಾವ ಬಿರಾದಾರ ಮತ್ತುತಬಲಾ, ಕಲಾವಿದರು ಅನೇಕರು ಉಪಸ್ಥಿತರಿದ್ದರು.