ಕಮಲನಗರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ, ವಿಜ್ಞಾನದಿಂದ ಹೊಸ ಅರಿವು : ಎಂ.ಎಸ್.ಹಿರೇಮಠ
ಕಮಲನಗರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ,
ವಿಜ್ಞಾನದಿಂದ ಹೊಸ ಅರಿವು : ಎಂ.ಎಸ್.ಹಿರೇಮಠ
ಕಮಲನಗರ: ಹೊಸ ಅರಿವನ್ನು ಉಂಟು ಮಾಡುವ ಜ್ಞಾನವೇ ವಿಜ್ಞಾನ ಎಂದು ಮುಖ್ಯಶಿಕ್ಷಕ ಎಂ.ಎಸ್.ಹಿರೇಮಠ ಹೇಳಿದರು.
ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನದ ಕಾರ್ಯಕ್ರಮದಲ್ಲಿ ಸಿ.ವಿ.ರಾಮನ್ ಫೋಟೊಗೆ ನಮನ ಸಲ್ಲಿಸುವ ಮೂಲಕ ನಂತರ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿದರು.
ವಿಜ್ಞಾನ ಸದಾ ಕ್ರೀಯಾಶೀಲ ಹಾಗೂ ಚಲನಶೀಲವಾದುದು. ಎಲ್ಲ ಪ್ರಮುಖ ಗ್ರಂಥಗಳಲ್ಲೂ ವಿಜ್ಞಾನ ಇದೆ. ಆಯುರ್ವೇದಲ್ಲೂ ಇದೆ. ಮಾನವ ಕಲ್ಯಾಣ ವಿಜ್ಞಾನ ಎಲ್ಲೆಡೆ ಬೆಳಗಬೇಕು ಎಂದು ಆಶಿಸಿದರು.
ವಿವೇಕಾನಂದ ಟ್ರಸ್ಟ್ ಸಂಸ್ಥಾಪಕ ಸಂಗಮೇಶ ಬಿರಾದಾರ ಮಾತನಾಡಿ, ವಿಜ್ಞಾನ ಎಂದರೆ ಸತ್ಯ ಅನ್ವೇಷಣೆ. ನೀರಾವರಿ ಮತ್ತು ಕೃಷಿಯಲ್ಲಿ ಅಭಿವೃದ್ಧಿಗೆ ಇದು ಕಾರಣವಾಗಿದೆ. ತಂತ್ರಜ್ಞಾನ ಒಳ್ಳೆಯದಾದರೂ ನಿರುದ್ಯೋಗವನ್ನು ಸೃಷ್ಟಿಸುತ್ತಿದೆ. ಮಕ್ಕಳು ಮೊಬೈಲ್ ಪೋನ್, ಟ್ಯಾಬ್ಲೆಟ್, ಐಪ್ಯಾಡ್ ಬಳಸುವುದರಿಂದ ಅವರ ಆಸಕ್ತಿ ಕುಂಠಿತಗೊಳ್ಳುತ್ತದೆ. ವಿಜ್ಞಾನ ಖುಷಿಯೊಂದಿಗೆ ಅಘಾತವನ್ನು ಉಚಿಟು ಮಾಡುತ್ತಿದೆ ಎಂದರು.
ಆನಂದ ಕಂಪ್ಯೂಟರ್ ಸೆಂಟರ್ ಸಂಚಾಲಕ ಮಾತನಾಡಿ, ವ್ಶೆಜಾರಿಕ ಮನೋಭಾವ ಬೆಳೆಸಿಕೊಂಡು ವ್ಶೆಜ್ಞಾನಿಕವಾಗಿ ಯೋಜಿಸಬೇಕು ಎಂದು ಹೇಳಿದರು.
ಶಿಕ್ಷಕ ಅರವಿಂದ ವೈಜನಾಥ, ಮಲ್ಲಿಕಾರ್ಜುನ ಮೇತ್ರೆ, ಶ್ರೀದೇವಿ ಸೋನಕಾಂಬಳೆ, ದೀಪಮಾಲಾ, ಸಂಗೀತಾ ಕಾಂಬಳೆ, ರಾಜಶ್ರೀ ಸಿರಗಿರೆ, ಅಂಬಿಕಾ ಗಾಐಕವಾಡ್, ವಾಣೀಶ್ರೀ ಸಿಂಧೆ, ಹಾಗೂ ಮಕ್ಕಳು ಇದ್ದರು.
