ಸದನದಲ್ಲಿ ಒಳ ಮೀಸಲಾತಿ ಚರ್ಚಿಸುವಂತೆ ಶಾಸಕರ ಮನೆಯ ಮುಂದೆ ತಮಟೆ ಚಳವಳಿ ಇಂದು
ಸದನದಲ್ಲಿ ಒಳ ಮೀಸಲಾತಿ ಚರ್ಚಿಸುವಂತೆ ಶಾಸಕರ ಮನೆಯ ಮುಂದೆ ತಮಟೆ ಚಳವಳಿ ಇಂದು
ಆಳಂದ: ಸುಪ್ರೀಂಕೋರ್ಟ್ ತೀರ್ಪುನು ಗೌರವಿಸಿ ಕಾಲಹರಣ ಮಾಡದೇ ಒಳ ಮೀಸಲಾತಿ ಜಾರಿಗೆ ಸದನದಲ್ಲಿ ಚರ್ಚಿಸಲು ಸ್ಥಳೀಯ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜಾರಿಗೆ ತರುವುಂತೆ ಆಗ್ರಹಿಸಿ ಮಾದಿಗ, ಸಮಗಾರ, ಮಚಗಾರ, ಡೊಹರ, ಡಕ್ಕಲಿಗ ಜಾತಿ ಉಪಜಾತಿ ಸಂಘಟನೆಗಳ ಒಕ್ಕೂಟವು ಡಿ. 14ರಂದು ರಾಜ್ಯದ ಎಲ್ಲ ಶಾಸಕರ ಮನೆಯ ಮುಂದೆ ತಮಟೆ ಚಳವಳಿ ನಡೆಸುವಂತೆ ಕರೆ ನೀಡಿದೆ.
ಈ ಕುರಿತು ಸಂಘಟನೆಯ ಕರೆಗೆ ಬೆಂಬಲಿಸಿ ಶುಕ್ರವಾರ ಹೇಳಿಕೆ ನೀಡಿರುವ ಡಾ. ಬಾಬು ಜಗಜೀವನರಾಮ ಅಭಿಮಾನಿಗಳ ಸೈನ್ಯ ಜಿಲ್ಲಾ ಘಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಂಬರಾಯ ಎಂ. ಚಲಗೇರಾ ಹಾಗೂ ಮಾದಗಿ ಸಮಾಜ ಮುಖಂಡ ಸಿದ್ಧು ನಾವದಗಿ ಗ್ರಾಪಂ ಸದಸ್ಯ ಮಹಾದೇವ ಹತ್ತಗಾಳೆ ಅವರು, ಶಾಸಕ ಬಿ.ಆರ್. ಪಾಟೀಲ ಅವರ ಸ್ಥಳೀಯ ಸಂಪರ್ಕ ಕಚೇರಿಯ ಮುಂದೆ ತಮಟೆ ಚಳವಳಿ ನಡೆಸಿ ಮನವಿ ಸಲ್ಲಿಸಲಾಗುವುದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.