ಪಂಚಮಸಾಲಿ ಲಿಂಗಾಯತರ ಮೇಲೆ ಪೊಲೀಸರ ಲಾಠಿ ಚಾರ್ಜ್ ಖಂಡಿಸಿ, ಲಿಂಗಾಯತ ಮಹಾಸಭಾ ಪ್ರತಿಭಟನೆ

ಪಂಚಮಸಾಲಿ ಲಿಂಗಾಯತರ ಮೇಲೆ ಪೊಲೀಸರ ಲಾಠಿ ಚಾರ್ಜ್ ಖಂಡಿಸಿ, ಲಿಂಗಾಯತ ಮಹಾಸಭಾ ಪ್ರತಿಭಟನೆ 

ದೌರ್ಜನ್ಯ ವೆಸಗಿದ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಕೆ 

ಚಿಂಚೋಳಿ : ಡಿ.10 ರಂದು ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಶಾಂತಿ ರೀತಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಲಿಂಗಾಯತ ಸಮುದಾಯದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ, ಸರಕಾರ ವಿರುದ್ಧ ಚಿಂಚೋಳಿ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಘಟಕದ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ ಅವರ ನೇತೃತ್ವದಲ್ಲಿ ತಹಸೀಲ್ ಕಾರ್ಯಾಲಯದ ಎದುರುಗಡೆ ಪ್ರತಿಭಟನೆ ನಡೆಸಲಾಯಿತು.

ಬಳಿಕ ಪ್ರತಿಭಟನೆಕಾರರು ಮಾತನಾಡಿ, ಪಂಚಮಸಾಲಿ ಲಿಂಗಾಯತ 2ಎ ಮೀಸಲಾತಿಗಾಗಿ ಶಾಂತ ರೀತಿ ನಡೆದ ಹೋರಾಟದಲ್ಲಿ ಭಾಗವಹಿಸಿದ ಲಿಂಗಾಯತ ಸಮುದಾಯದ ಪೂಜ್ಯರ ಹಾಗು ಲಿಂಗಾಯತ ರಾಜಕೀಯ ನಾಯಕರ ಮತ್ತು ಪಂಚಮಸಾಲಿ ಲಿಂಗಾಯತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಲಾಗಿದೆ.  

ಸಮುದಾಯದವರ ಮೇಲೆ ಹಲ್ಲೆ, ದೌರ್ಜನ್ಯ ವೆಸಗಿದ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳಬೇಕೆಂದು ಆಗ್ರಹಿಸಿ, ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ಕೊಡಬೇಕೆನ್ನುವ ಬೇಡಿಕೆ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ ವೆಂಕಟೇಶ ದುಗ್ಗನ್ ಅವರ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿ ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಪಾಲಮೂರ್, ಬಸವರಾಜ ಮಸ್ತಾರ, ರಾಜಶೇಖರ ಹಿತ್ತಲ್, ಸಂತೋಷ ಕಶೆಟ್ಟಿ, ಮಲ್ಲಿಕಾರ್ಜುನ್ ಭೂಶೆಟ್ಟಿ, ಆನಂದ ಹಿತ್ತಲ್, ಶಿವಕುಮಾರ ಸ್ವಾಮಿ, ಶಂಕರ ಶಿವಪೂರಿ, ರಾಜು ಮುಸ್ತರಿ, ಸೂರ್ಯಕಾಂತ ಹುಲಿ, ರಮೇಶ ಜೋನಲ್, ಜಗನ್ನಾಥ ಇದ್ಲಾಯಿ, ಸೇರಿ ಸಮುದಾಯದ ಅನೇಕ ಮುಖಂಡರು ಉಪಸ್ಥಿತರಿದರು.