ಮುಲ್ಲಾಮಾರಿ ಏತ ನೀರಾವರಿ ಅಭಿವೃದ್ಧಿ ಸಮಿತಿ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ
ಮುಲ್ಲಾಮಾರಿ ಏತ ನೀರಾವರಿ ಅಭಿವೃದ್ಧಿ ಸಮಿತಿ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ
ಐನಾಪೂರ ಏತ ನಿರಾವರಿ ಕಾಮಗಾರಿಗೆ ಚಾಲನೆ ನೀಡಿ, ಇಲ್ಲ ವಿಷಪ್ರಾಸನ ಕುತ್ತಿಗೆಯ ಕುಣಿಕೆಗೆ ಆಜ್ಞೆ ಕೊಡಿ.
ಕಲಬುರಗಿ ಮತ್ತು ಬೀದರ ಜಿಲ್ಲಾ ಉಸ್ತುವಾರ ಸಚಿವರು ಸೇರಿದಂತೆ, ಕೆಕೆಆರ್ ಡಿಬಿ ಅಧ್ಯಕ್ಷರಿಗೂ ಖಾರದ ನುಡಿಗಳ ಮನವಿ ಸಲ್ಲಿಕೆ
ಚಿಂಚೋಳಿ : ಕಳೆದ ಎರಡು ದಶಕಗಳಿಂದ ನಡೆಸುತ್ತಿರುವ ಐನಾಪೂರ ಏತ ನಿರಾವರಿ ಯೋಜನೆಗೆ ಇದೇ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶವನದಲ್ಲಿ ಕಾಮಗಾರಿಗೆ ಚಾಲನೆ ನೀಡಬೇಕು. ನೀಡದಿದ್ದಲ್ಲಿ ಸರಕಾರದಿಂದಲ್ಲೇ ಅನುಮೋದಿಸಿ ರೈತರಿಗೆ ವಿಷಪ್ರಾಸನ ಕುತ್ತಿಗೆಯ ಕುಣಿಕೆಗೆ ಅವಕಾಶ ಮಾಡಿಕೊಡಬೇಕೆಂದು ಮುಲ್ಲಾಮಾರಿ ಏತ ನೀರಾವರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಾನಂದ ಮಾಲಿ ಪಾಟೀಲ ಅವರು ಚಿಂಚೋಳಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರುಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಎರಡು ದಶಕಗಳ ಬಡ ರೈತರ ಬಹುದಿನಗಳ ಬೇಡಿಕೆಯ ಕನಸಾದ ಐನಾಪೂರ ಏತ ನೀರಾವರಿ ಯೋಜನೆಯು ಕಾಯಕಲ್ಪ ಘಟಕ್ಕೆ ಬಂದು ನಿಂತಿದ್ದು, ಸರಕಾರ ತಗಲುವ ಅನುದಾನ ಬಿಡುಗಡೆಗೊಳಿಸಿ, ಬೆಸಿಗೆಯ ಪ್ರಾರಂಭದಲ್ಲಿಯೇ ಯೋಜನೆಗೆ ಅಡಿಗಲ್ಲು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಬೇಕು. ಒಂದು ವೇಳೆ ಕಾಮಗಾರಿ ಚಾಲನೆ ನೀಡದಿದ್ದಲ್ಲಿ ಸರಕಾರದಿಂದಲೇ ಅನುಮೋದಿಸಿ ರೈತರಿಗೆ ವಿಷಪ್ರಾಸನ ಕುತ್ತಿಗೆಯ ಕುಣಿಕೆಗೆ ಅವಕಾಶ ಮಾಡಿಕೊಡಬೇಕೆಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ನೀರಾವರಿ ಸಚಿವರಿಗೆ ಹಾಗೂ ಕಲಬುರಗಿ ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸವರುಗಳಿಗೆ, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರಿಗೆ ಮತ್ತು ವಿಧಾನ ಪರಿಷತ್ತ್ ಸದಸ್ಯರುಗಳಿಗೆ ಸಲ್ಲಿಸಿದ ಮನವಿಯಲ್ಲಿ ಖಾರವಾದ ನುಡಿಗಳ ಮೂಲಕ ಮನವಿ ಮಾಡಿಕೊಂಡು ತಿಳಿಸಿದ್ದಾರೆ.