ಕಮಲನಗರ: ಗಮನ ಸೆಳೆದ, ವಿಜ್ಞಾನ ವಸ್ತು ಪ್ರದರ್ಶನ, ಪ್ರತಿಭೆ ಹೊರ ತರಲು ಸಹಕಾರಿಯಾಗಿದೆ : ಪ್ರಭು ಚವ್ಹಾಣ್
ಕಮಲನಗರ: ಗಮನ ಸೆಳೆದ, ವಿಜ್ಞಾನ ವಸ್ತು ಪ್ರದರ್ಶನ,
ಪ್ರತಿಭೆ ಹೊರ ತರಲು ಸಹಕಾರಿಯಾಗಿದೆ : ಪ್ರಭು ಚವ್ಹಾಣ್
ಕಮಲನಗರ: ಮಕ್ಕಳಲ್ಲಿ ವಿಜ್ಞಾನ ಕುರಿತು ಅರಿವು ಮೂಡಿಸಲು ಮತ್ತು ಅವರಲ್ಲಿನ ಪ್ರತಿಭೆ ಹೊರ ತರಲು ಈ ವಸ್ತು ಪ್ರದರ್ಶನ ಸಹಕಾರಿಯಾಗಿದೆ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಪಟ್ಟಣದಲ್ಲಿ ಡಾ. ಚನ್ನಬಸವ ಪಟ್ಟದ್ದೇವರು ಶಾಖಾ ಮಠದಲ್ಲಿ ಪಟ್ಟದ್ದೇವರ 136ನೇ ಜಯಂತ್ಯುತ್ಸವ-ಕನ್ನಡ ರಥೋತ್ಸವ ಪ್ರಯುಕ್ತ ಗುರುಕಾರುಣ್ಯ ಪಬ್ಲಿಕ್ ಸ್ಕೂಲ್, ಡಾ| ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ ಹಾಗೂ ಗುರುಪ್ಪ ಟೊಣ್ಣೆ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಕೇಟ್ ಉಡಾವಣೆ, ಚಂದ್ರಯಾನ, ಗಾಳಿ ಯಂತ್ರದ ಮೂಲಕ ವಿದ್ಯುತ್ ಉತ್ಪಾದನೆ, ಪರಿಸರ ಸಂರಕ್ಷಣೆ, ತಾಜ್ಯ ವಸ್ತು ನಿರ್ವಹಣೆ ಹಾಗೂ ಕಾಳಜಿ, ಅರಣ್ಯ ಮತ್ತು ಪ್ರಾಣಿಗಳು, ಸೋಲಾರ ಸಿಸ್ಟ, ಗ್ರೀನ್ ಹೌಸ್, ನೀರು ಶುದ್ಧೀಕರಣ, ಕೃಷಿ ಮಾನವನ ದೇಹ, ಸೂರ್ಯನ ಚಲನ ವಲನ, ಆಣೆಕಣ್ಣು ನಿರ್ಮಾಣ, ಭೂಕಂಪ ಎಚ್ಚರಿಕೆ ಘಂಟೆ, ಲೈಟ್ ಹೌಸ್, ವಿಮಾನ ಟರ್ಮಿನಲ್, ಕಾಡು, ಪಕ್ಷಿ ಉದ್ಯಾನವನ ಸೇರಿದಂತೆ ಹಲವು ಮಾದರಿಗಳು ವೀಕ್ಷಿಸಿ, ಮೆಚ್ಚುಗೆ ಪಡಿಸಿದರು.
ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಸಂಸದ ಸಾಗರ ಈಶ್ವರ ಖಂಡ್ರೆ ಅವರುಗಳು ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳ ಪ್ರತಿಭೆಯನ್ನು ಕಂಡು ಈ ಭಾಗದಲ್ಲಿ ವಿಜ್ಞಾನದ ವಿನೂತನ ಪ್ರತಿಭೆ ಬೆಳಸುವ ಕಾರ್ಯ ಈ ಶಾಲೆಯ ಮಕ್ಕಳಿಂದ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉದಗಿರ ಸಹಯೋಗ ಬ್ಯಾಂಕ ಅಧ್ಯಕ್ಷರು, ಉದ್ಯಮಿ ರಮೇಶ ನಾಗಪ್ಪಾ ಅಂಬರಖಾನೆ ಹಾಗೂ ಉದಗಿರನ ಲಿಂಗಾಯತ ಸಮಾಜ ಅಧ್ಯಕ್ಷರು-ಉದ್ಯಮಿಗಳಾಗಿರುವ ಚಂದ್ರಕಾಂತ ಗಣಪತರಾವ ವೈಜಾಪುರೆ, ಶಿವಾನಂದ ವಡ್ಡೆ, ವಿಜ್ಞಾನ ಶಿಕ್ಷಕ ಮಲ್ಲಿನಾಥ ಶಿವಪೂರೆ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷರು ಶಿವಕುಮಾರ ಝುಲ್ಪೆ, ಶಾಲೆಯ ಆಡಳಿತಾಧಿಕಾರಿ ಚನ್ನಬಸವ ಘಾಳೆ, ಭಾಗಿರಥಿ ಪಬ್ಲಿಕ್ ಶಾಲೆ ಆಡಳಿತಾಧಿಕಾರಿ ಮನೋಜಕುಮಾರ ಹಿರೇಮಠ, ಪ್ರಕಾಶ ಟೊಣ್ಣೆ, ಪ್ರವೀಣ ಪಾಟೀಲ, ಸಂತೋಷ ಬಿರಾದಾರ, ವಸಂತ ವಕೀಲ ಸೇರಿದಂತೆ ಶಾಲೆ ಸಿಬ್ಬಂದಿ ವರ್ಗ ಹಾಗೂ ಶಾಲೆಯ ಪ್ರತಿಭಾವಂತ ಮುದ್ದು ಮಕ್ಕಳು ಮತ್ತು ವೀಕ್ಷಕರು ಇದ್ದರು.
