ಹೊಳೆಸಮುದ್ರ ಗ್ರಾಮದಲ್ಲಿ ಧನ ಲಕ್ಷ್ಮಿ ಹೊಸ ಕೇಂದ್ರ ಉದ್ಘಾಟನೆ
ಹೊಳೆಸಮುದ್ರ ಗ್ರಾಮದಲ್ಲಿ ಧನ ಲಕ್ಷ್ಮಿ ಹೊಸ ಕೇಂದ್ರ ಉದ್ಘಾಟನೆ
ಕಮಲನಗರ:ಕಮಲನಗರ ವಲಯದ ಹೊಳೆಸಮುದ್ರ ಕಾರ್ಯಕ್ಷೇತ್ರದಲ್ಲಿ ಧನಲಕ್ಷ್ಮೀ ಹೊಸ ಕೇಂದ್ರ ಉದ್ಘಾಟನೆ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ(ರಿ) ಔರಾದ (ಬಿ) ತಾಲೂಕು ರಾಜರ್ಷಿ ಪರಮ ಪೂಜ್ಯ ಡಾ.ಡಿ.ವಿರೇಂದ್ರ ಹೆಗ್ಗಡೆಯರ ಹಾಗೂ ಮಾತೋಶ್ರೀ ಡಾ ಹೇಮಲತಾ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಮಹಿಳಾ ಜ್ಞಾನ ವಿಕಾಸ ಕೇಂದ್ರ ಯೋಜನೆಯಡಿಯಲ್ಲಿ ಗ್ರಾಮದ ಬೀರಲಿಂಗೇಶ್ವರ ಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶ್ರೀಮತಿ ನಿರ್ಮಲ ಧನರಾಜ ದನ್ನಾ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪೂಜೆ ನೆರವೇರಿಸಿದರು.
ತಾಲೂಕಿನ ಮಾನ್ಯಶ್ರೀ ಮಲ್ಲಿಕಾರ್ಜುನ ಸರ್ ಜ್ಞಾನ ವಿಕಾಸ ಕಾರ್ಯಕ್ರಮಗಳ ಬಗ್ಗೆ ಹಾಗೂ ಯೋಜನೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಈ ಯೋಜನೆಗಳಿಂದ ಲಾಭ ಪಡೆದು ಸುಂದರ ಬದುಕನ್ನು ಕಟ್ಟಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಕ್ಕಾಗಿ ಮಾತನಾಡಿದರು.
ಮಾನ್ಯ ಯೋಜನಾಧಿಕಾರಿಗಳು ರಾಘವೇಂದ್ರ ಗೌಡ ಮೇಲ್ವಿಚಾರಕರು ಮಲ್ಲಿಕಾರ್ಜುನ ಸರ್ ಲೆಕ್ಕ ಪರಿಶೋಧಕರು ಆದರ್ಶ ಸರ್ ಸಂಪನ್ಮೂಲ ವ್ಯಕ್ತಿ ಸಿದ್ರಾಮಯ್ಯ ಸರ್ ಒಕ್ಕೂಟ ಅಧ್ಯಕ್ಷರು. ಹಾಗೂ ಕೇಂದ್ರದ ಅಧ್ಯಕ್ಷರು ವಲಯದ ಮೇಲ್ವಿಚಾರಕರು ಜ್ಞಾನ ವಿಕಾಸ್ ಸಂಗೀತಾ ಮೇಡಂ ಸೇವಾಪ್ರತಿನಿಧಿ ಕವಿತಾ ಬೀರಾದಾರ ಹಾಗೂ ಸಂಘದ ಸದಸ್ಯರಾದ ಸುಷ್ಮಾ ,ಅನುಷಯಾ, ಶೇಶಿಕಲಾ, ನಿರ್ಮಲಾ,ಸೇರಿ ಅನೇಕರು ಉಪಸ್ಥಿತರಿದ್ದರು.
ಸ್ವಾಗತ ರಾಘವೇಂದ್ರ ಸರ್ ಮಾಡಿದರೆ ಸಂಗೀತಾ ವಂದನಾರ್ಪಣೆ ಮಾಡಿದರು.