ಆಳಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘ ವತಿಯಿಂದ 68ನೇ ಮಹಾಪರಿನಿರ್ವಾಣ ದಿನ ಆಚರಣೆ

ಆಳಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘ  ವತಿಯಿಂದ  68ನೇ ಮಹಾಪರಿನಿರ್ವಾಣ ದಿನ  ಆಚರಣೆ

ಆಳಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘ ವತಿಯಿಂದ 68ನೇ ಮಹಾಪರಿನಿರ್ವಾಣ ದಿನ ಆಚರಣೆ

 ಆಳಂದ: ಡಾ.ಬಿ ಆರ್ .ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಆಚರಿಸಲಾಯಿತು.

ತಾಲೂಕಾಧ್ಯಕ್ಷರಾದಂತ ಬಾಲಾಜಿ ಘೋಡಕೆ ಮತ್ತು ಜೈ ಕರ್ನಾಟಕ ಸಂಘಟನೆ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದಂತ ಮಲ್ಲಿಕಾರ್ಜುನ ಸಾರ್ವಡ ಮಾತನಾಡಿ ವಿಶ್ವದ ಶ್ರೇಷ್ಠ ಏಕೈಕ ಸಂವಿಧಾನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ್ದು ಎಲ್ಲರಿಗೂ ಸಮಾನತೆ ನೀಡಿದ್ದಾರೆ ಎಂದರು .

ಬಾಬುರಾವ ಅರುಣೋದಯ ಮಾತನಾಡಿ ಬಾಬಾ ಸಾಹೇಬರು ಈ ದೇಶದಲ್ಲಿ ಕಟ್ಟಕಡೆಯ ವ್ಯಕ್ತಿಗೆ ಮತದಾನ ಹಕ್ಕು ಕೊಟ್ಟಿ, ಸಮಾನತೆ ಸಾರಿದ ಧೀಮಂತ ನಾಯಕ ಅಂತ ಹೇಳಿದರು ಸುನಿಲ ಹಿರೋಳಿಕರ ಮಾತನಾಡಿ ಮಹಿಳೆಯರಿಗೆ ಸಮಾನತೆ ನೀಡಿದ ಭಾರತದ ಭಾಗ್ಯವಿಧಾತ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ನುಡಿದರು

 ಶ್ರೀಶೈಲ್ ನಾಯ್ಕೋಡಿ ದೇವಂತಗಿ ಮಾತನಾಡಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹುಟ್ಟದಿದ್ದರೆ ಬಾಬಾ ಸಾಹೇಬರು ಸಂವಿಧಾನ ಬರೆಯದಿದ್ದರೆ ಕುರುಬರು ಕುರಿ ಕಾಯ್ಬೇಕಾಗಿತ್ತು ಕುಂಬಾರರು ಕುಂಬಾರಕಿ ಮಾಡಬೇಕಾಗಿತ್ತು ಹೂಗಾರರು ಹೂವ ಮಾರಬೇಕಾಗಿತ್ತು ಆದರೆ ಬಾಬಾ ಸಾಹೇಬ್ ಅವರು ಹುಟ್ಟಿದ ಸಲುವಾಗಿ ಬಾಬಾ ಸಾಹೇಬರು ಸಂವಿಧಾನ ಬರೆದ ಸಲುವಾಗಿ ಕುರುಬರು ಕುಂಬಾರರು ಹೂಗಾರ ದಲಿತರು ಮಡಿವಾಳ ಸಮಾಜದವರು ಇವತ್ತಿನ ದಿನ ಮುಖ್ಯಮಂತ್ರಿ ಪ್ರಧಾನಮಂತ್ರಿ ರಾಷ್ಟ್ರಪತಿ ಜಿಲ್ಲಾಧಿಕಾರಿ ದೊಡ್ಡ ದೊಡ್ಡ ಹುದ್ದೆಗಳಿಗೆ ಹೋಗಿ ಎಲ್ಲರೂ ಸಮಾನವಾಗಿ ಗೌರವದಿಂದ ಬದುಕುವುದಕ್ಕೆ ಕಾರಣ ಏಕೈಕ ವ್ಯಕ್ತಿ ವಿಶ್ವಜ್ಞಾನಿ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್. ಬಾಬಾ ಸಾಹೇಬರು ಹಿಂದುಳಿದವರಿಗೆ ಆರ್ಟಿಕಲ್ 340 ಮುಖಾಂತರ ಮೀಸಲಾತಿ ನೀಡಿ ಪರಿಶಿಷ್ಟ ಜಾತಿ ದವರಿಗೆ 341 ಆರ್ಟಿಕಲ್ ಮುಖಾಂತರ ಪರಿಶಿಷ್ಟ ಪಂಗಡದವರಿಗೆ 342 ಆರ್ಟಿಕಲ್ ಮುಖಾಂತರ ಶೈಕ್ಷಣಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಉದ್ಯೋಗಿಕವಾಗಿ ಮೀಸಲಾತಿ ನೀಡಿ ಸಮಾನತೆ ಸಾರಿದ ಧೀಮಂತ ನಾಯಕ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಹಿಂದುಳಿದ ವರ್ಗದವರ ಮತ್ತು ಮಹಿಳೆಯರ ಸ್ವತಂತ್ರಕ್ಕಾಗಿ ಮಹಿಳೆಯರ ಹಕ್ಕಿಗಾಗಿ ದೇಶದ ಪ್ರಜೆಗಳಿಗಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಂತ ಪ್ರಥಮ ವ್ಯಕ್ತಿ ಕೊನೆಯ ವ್ಯಕ್ತಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಇಂತಹ ವ್ಯಕ್ತಿ ಈ ವಿಶ್ವದಲ್ಲಿ ಕೂಡ ಸಿಗುವುದಕ್ಕೆ ಸಾಧ್ಯವಿಲ್ಲ ಅಂತ ಹೇಳಿದರು ಕಾರ್ಯಕ್ರಮದಲ್ಲಿ ಶಿವಕುಮಾರ ಚಿಂಚೋಳಿ ಉಮೇಶ ಪೂಜಾರಿ ಮಾಳಪ್ಪ ಕಾಚಾಪುರೆ ಧರ್ಮರಾಜ ಶಶಿಕಾಂತ ಸಾಗರ ಸಿದ್ದರಾಮ ಮಂಜು ಪೂಜಾರಿ ಶಿವಲಿಂಗಪ್ಪ ಚನಗುಂಡ ಯಲ್ಲಾಲಿಂಗ ಮುಂತಾದವರು ಉಪಸ್ಥಿತರಿದ್ದರು