ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತಸಿಂಗ್

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತಸಿಂಗ್

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತಸಿಂಗ್ 

ಕಲಬುರಗಿ: ಭಗತಸಿಂಗ್ ಅವರು ಬ್ರಿಟೀಷರನ್ನು ಭಾರತದಿಂದ ಹೊಡೆದೋಡಿಸಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ವನ್ನು ನೀಡುವಲ್ಲಿ ಸಾಕಷ್ಟು ಪ್ರಯತ್ನಿಸಿದ್ದಾರೆ.ಅದಕ್ಕಾಗಿ ಬಾಲ್ಯದಲ್ಲಿಯೇ ನೇಣುಗಂಬ ಏರಿದ ಭಗತಸಿಂಗ್ ಅವರ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.  

    ನಗರದ ಗಂಗಾ ನಗರದಲ್ಲಿರುವ ‘ಶ್ರೀ ವಿವೇಕಾನಂದ ಪ್ರಾಥಮಿಕ ಮತ್ತು ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ಹುತಾತ್ಮ ಭಗತಸಿಂಗ್ ಅವರ 117ನೇ ಜನ್ಮದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.  

    ಬ್ರಿಟಿಷರಿಗೆ ಸಿಂಹ ಸ್ವಪ್ನರಾಗಿ ಕಾಡಿದ್ದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತಸಿಂಗ್. ನಾಲ್ಕನೇಯ ತರಗತಿಯಲ್ಲಿದ್ದಾಗಲೇ ಮನೆಯಲ್ಲಿದ್ದ ಸುಮಾರು 50 ಪುಸ್ತಕಗಳನ್ನು ಅಧ್ಯಯನ ಮಾಡಿದರು. ಇದರಿಂದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾಹಿತಿ ದೊರೆಯಿತು. 1919ರ ಜಲಿಯನ ವಾಲಾಬಾಗ್ ಘಟನೆ ಭಗತಸಿಂಗ್ ಅವರು ಕೇವಲ 12 ವರ್ಷದ ಬಾಲಕರಿರುವಾಗಲೇ ಬ್ರಿಟೀಷರ ವಿರುದ್ಧ ಹೋರಾಟದ ಕಿಚ್ಚು ಹೆಚ್ಚಿಸುವಂತಾಯಿತು ಎಂದರು.

  ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಮಳ್ಳಿ, ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಗುಡಬಾ, ಶಿಕ್ಷಕಿಯರಾದ ರಾಜೇಶ್ವರಿ ಡಾಂಗೆ, ರೂಪಾ ಎಸ್.ಚಂಗಟಿ, ಅರ್ಚನಾ ಕುಲಕರ್ಣಿ, ನಿಖಿತಾ ಎಸ್., ಮೌನಿಕಾ, ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಕಾವೇರಿ, ಪ್ರತಿಭಾ, ವಿಶಾಲಾಕ್ಷಿ, ಭಾಗ್ಯಶ್ರೀ, ಶೃತಿ, ಕಮಲಾ ಹಾಗೂ ವಿದ್ಯಾರ್ಥಿಗಳಿದ್ದರು