ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ 68ನೇ ಮಹಾಪರಿನಿರ್ವಾಣ ದಿನ ಆಚರಣೆ

ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ 68ನೇ ಮಹಾಪರಿನಿರ್ವಾಣ ದಿನ ಆಚರಣೆ

ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ 68ನೇ ಮಹಾಪರಿನಿರ್ವಾಣ ದಿನ ಆಚರಣೆ 

ಆಳಂದ: ಪಟ್ಟಣದ ಭೀಮನಗರದ ಯುವಕರಿಂದ ಕ್ಯಾಂಡಲ್ ಮಾರ್ಚ್ ಹಮ್ಮಿಕೊಳ್ಳಲಾಯಿತು .ಭೀಮ ನಗರದಿಂದ ಹಳೆಯ ತಹಶೀಲ್ ಕಾರ್ಯಾಲಯದ ಮಾರ್ಗವಾಗಿ ಬಸ್ಟ್ಯಾಂಡ್ ದಿಂದ ಮಾರ್ಕೆಟ್ನ ಅಶೋಕ ಸ್ತಂಭದ ಆವರಣದಲ್ಲಿ ಕ್ಯಾಂಡಲ್ ಹಚ್ಚಿ ಮೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪನ್ಯಾಸಕ ಚಿಂತಕ ಅಪ್ಪಟ ಅಂಬೇಡ್ಕರ್ ವಾದಿ ರಮೇಶ್ ಮಾಡಿಯಾಕರ್ ಮಾತನಾಡಿ ಈ ದೇಶದಲ್ಲಿ ಎಲ್ಲರಿಗೂ ಸಮಾನತೆ ನೀಡಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ವಂದೇವರ್ಗಕ್ಕೆ ಸೀಮಿತ ಮಾಡಿದ್ದು ಬಹಳ ದೊಡ್ಡ ದುರಂತ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ಸಮಾನತೆ ಆರ್ಥಿಕ ನ್ಯಾಯ ಸಾಮಾಜಿಕ ನ್ಯಾಯ ರಾಜಕೀಯ ನ್ಯಾಯ ಶಿಕ್ಷಣ ಧಾರ್ಮಿಕ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ ಇಲ್ಲಿ ಯಾವುದೇ ಜಾತಿ ತಾರತಮ್ಯವಿಲ್ಲ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದಲೇ ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿ ಪುರುಷರ ಸರಿಸಮಾನವಾಗಿ ಉದ್ಯೋಗ ಪಡೆದುಕೊಂಡಿದ್ದಾರೆ.ರಾಷ್ಟ್ರಪತಿಗಳಾಗಿದ್ದಾರೆ ಮುಖ್ಯಮಂತ್ರಿಗಳಾಗಿದ್ದಾರೆ ಸಚಿವರಾಗಿದ್ದಾರೆ ಶಾಸಕರಾಗಿದ್ದಾರೆ ಜಿಲ್ಲಾಧಿಕಾರಿಗಳಾಗಿದ್ದಾರೆ ಅದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ ಅದನ್ನು ಮರೆಯಬಾರದು ಮಕ್ಕಳು ಮೊಬೈಲ್ ಗೀಳನ್ನ ಬಿಟ್ಟು ಪುಸ್ತಕಗಳನ್ನ ಓದಬೇಕು ಒಳ್ಳೆಯ ನಾಗರಿಕರಾಗಿ ಸಮಾಜದಲ್ಲಿ ಬೆಳೆಯಬೇಕು ಎಂದು ನುಡಿದರು ಈ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ ಸರಕಾರಿ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿವಿದ್ಯಾರ್ಥಿನಿಯರು ಸಿಬ್ಬಂದಿ ವರ್ಗ ಲಿಂಗಣ್ಣ ವಾರ್ಡನ್ ಆಶಾ ನಸ್ರಿನ್ ವಾರ್ಡನ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು , ಚಂದ್ರು ಜಂಗ್ಲೆ ಕಿಟ್ಟಿ ಸಾಲೇಗಾ ವ ಸಿದ್ದಾರ್ಥ ಸಿಂಗೆ ನಾಗರಾಜ್ ದೇವನೂರ ವಿಶಾಲ್ ದೇವನೂರ ಮುತ್ತಣ್ಣ ಜಂಗಲೆ ಪಿಂಟು ಸಾಲೆಗಾವ್ ಸಚಿನ್ ದೇವನೂರ ಮಲ್ಲಿಕಾರ್ಜುನ್ ಬೋಳಣಿ ರಾಜಶೇಖರ್ ಕಡಗನ್ ಪ್ರವೀಣ್ ಮೊದಲೇ ಶಿವಪ್ಪ ತೋಳೆ ಕೆಂಚಣ್ಣ ಜಳಕಿ ಜೈ ಭೀಮ ದೊಡ್ಮನಿ ಮುಂತಾದ ಅಂಬೇಡ್ಕರ್ ಅಭಿಮಾನಿಗಳು ಉಪಸ್ಥಿತರಿದ್ದರು

ವರದಿಗಾರರು ಡಾ ಅವಿನಾಶ ಎಸ್. ದೇವನೂರ ಆಳಂದ