ಕೆ ಆರ್ ಎಸ್ ಪಕ್ಷದ ರಿಯಾಜ್ ಕೆ ಬಿಳವಾರಗೆ ಸೇವಾ ರತ್ನ ಪ್ರಶಸ್ತಿ
ಕೆ ಆರ್ ಎಸ್ ಪಕ್ಷದ ರಿಯಾಜ್ ಕೆ ಬಿಳವಾರಗೆ ಸೇವಾ ರತ್ನ ಪ್ರಶಸ್ತಿ
ಯಡ್ರಾಮಿ : ಕೆ ಆರ್ ಎಸ್ ಪಕ್ಷದ ಯಡ್ರಾಮಿ ತಾಲೂಕ ಅಧ್ಯಕ್ಷರಾದ ರಿಯಾಜ್ ಕೆ ಬಿಳವಾರ ಅವರಿಗೆ ಜಿಲ್ಲಾ ಮಟ್ಟದ ಸೇವಾ ರತ್ನ ಪ್ರಶಸ್ತಿ ಮುಡಿಗೇರಿದ್ದು ಮೌನೇಶ್ ಪೂಜಾರಿ ಬಿಳವಾರ್ ಅವರು ಹರ್ಷ ವ್ಯಕ್ತಪಡಿಸಿದರು.
ರಿಯಾಜ್ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಅನುಯಾಯಿಯಾಗಿದ್ದು ,ಭ್ರಷ್ಟಾಚಾರ ನಿರ್ಮೂಲನೆಗೆ ಸತತ ಹೋರಾಟ ಮೂಲಕ ಹೆಸರುವಾಸಿಯಾದವರು. ಯಡ್ರಾಮಿ ತಾಲೂಕಿನ ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದಂತ ಕೆಲವು ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕಲೂ ನಿರಂತರ ಹೋರಾಟ ಮಾಡಿದ್ದಾರೆ.
ಧೀಮಂತಹ ಹೋರಾಟಗಾರ ಗ್ರಾಮೀಣ ಭಾಗದ ಯುವ ಚೇತನ ಯಡ್ರಾಮಿ ತಾಲೂಕಿನ ಕೆ ಆರ್ ಎಸ್ ಪಕ್ಷದ ತಾಲೂಕ ಅಧ್ಯಕ್ಷರಾದ ರಿಯಾಜ್ ಕೆ ಬಿಳವಾರ್ ಅವರಿಗೆ ಜೈ ಕನ್ನಡಿಗರ ಸೇನೆ ಯಡ್ರಾಮಿ ವತಿಯಿಂದ ಹಮ್ಮಿಕೊಂಡ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಿದರು.
ಮೌನೇಶ್ ಪೂಜಾರಿ ಬಿಳವಾರ ಸಿದ್ದು ಎಸ್ ಬಿಳವಾರ್ ಅವರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.