ಟೊಮೆಟೊ ಬೆಳೆಯಲ್ಲಿ ಗಣಪತಿ ಪ್ರತ್ಯಕ್ಷ!

ಟೊಮೆಟೊ ಬೆಳೆಯಲ್ಲಿ ಗಣಪತಿ ಪ್ರತ್ಯಕ್ಷ!

ಟೊಮೆಟೊ ಬೆಳೆಯಲ್ಲಿ ಗಣಪತಿ ಪ್ರತ್ಯಕ್ಷ!

ಕಲಬುರಗಿ: ಅಳಂದ ಪಟ್ಟಣ ಸಮೀಪದ ಟೊಮೆಟೊ ಬೆಳೆದ ರೈತರೊಬ್ಬರ ತೋಟದಲ್ಲಿ ಗಣಪತಿ ಆಕಾರದ ಟೊಮೆಟೊ ಬೆಳೆದು ಅಚ್ಚರಿ ಮೂಡಿಸಿದೆ! 

  ಅಳಂದದ ಕೃಷಿಕರಾದ ಕುಪೇಂದ್ರ ಯಲ್ಲಯ್ಯ ಗುತ್ತೇದಾರ್ ನಾಗೂರು ಅವರ ತೋಟದಲ್ಲಿ ಗಣಪತಿ ಆಕಾರದ ಟೊಮೇಟೊ ಒಂದು ಪ್ರತ್ಯಕ್ಷವಾಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸಹಜವಾಗಿ ಗಣೇಶನ ಸೊಂಡಿಲು ಆಕಾರದಲ್ಲಿರುವ ಟೊಮೆಟೊ ಕೆಂಪು ಬಣ್ಣದಿಂದ ಅತ್ಯಂತ ಆಕರ್ಷಕವಾಗಿ ಎಲ್ಲರ ಗಮನ ಸೆಳೆದಿದೆ. ಇದನ್ನು ನೋಡಲು ಆಗಮಿಸಿದ ಆಸಕ್ತರು ಇದೊಂದು ಶುಭ ಸೂಚನೆ ಸಂಕೇತ. ಗಣಪತಿ ಆಕಾರದ ಟೊಮೊಟೊವನ್ನು ಕೈಯಲ್ಲಿ ಹಿಡಿದು ನಮಸ್ಕರಿಸಿದ್ದು ಉಂಟು. ಕಳೆದ ಎರಡು ಮೂರು ವರ್ಷಗಳಿಂದ ಟೊಮೆಟೊ ಬೆಳೆಯುತ್ತಿದ್ದು ಇದೇ ಮೊದಲ ಬಾರಿಗೆ ಸೊಂಡಿಲು ಹೊಂದಿದ ರೂಪದ ಟೊಮೆಟೊ ಕಂಡು ಬಂದಿದೆ ಎಂದು ಕುಪೇಂದ್ರ ಗುತ್ತೇದಾರ್ ತಿಳಿಸಿದರು. ಟೊಮೆಟೊ ಬೆಳೆಯಲ್ಲಿ ಗಣೇಶ ಪ್ರತ್ಯಕ್ಷವಾದರೂ ಟೊಮೆಟೊ ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿದ್ದು ರೈತರೂ ಕಂಗೆಟ್ಟಿದ್ದಾರೆ ಎಂದು ಹೇಳಿದರು. 

ಒಂದು ಬಾಕ್ಸ್ (ಕ್ಯಾನ್) 24 ಕೆ.ಜಿ ತೂಗುತ್ತಿದ್ದು ಅದಕ್ಕೆ ಕೇವಲ 125 ರಿಂದ 150ತ ರೂ.ಗೆ ರೈತರಿಂದ ಖರೀದಿಸಲಾಗುತ್ತಿದೆ. ಹೈದರಾಬಾದ್, ಬೆಂಗಳೂರು ಹಾಗೂ ಕಲಬುರಗಿಯ ಮಾರುಕಟ್ಟೆಗಳಿಗೆ ಟೊಮೆಟೊ ಮಾರಾಟವಾಗುತ್ತಿದ್ದು ಆದರೆ ಬೆಳೆದ ರೈತರಿಗೆ ಬೆಲೆ ಕೈ ಕೊಟ್ಟಿದೆ. ಟೊಮೆಟೊ ಬೆಳೆದ ತೋಟದಲ್ಲಿ ಗಣಪತಿ ಪ್ರತ್ಯಕ್ಷವಾಗಿ ಆಶೀರ್ವಾದ ರೂಪದಲ್ಲಿ ಕಂಡು ಬಂದಿರುವುದರಿಂದ ಮುಂದಿನ ದಿನಗಳಲ್ಲಿ ರೈತ ಬೆಳೆದ ಟೊಮೆಟೊಗೆ ಒಳ್ಳೆಯ ಬೆಲೆ ಸಿಗಲಿ ಎಂದು ಕುಪೇಂದ್ರ ಗುತ್ತೇದಾರ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.