ಕಲಬುರಗಿ| 'ಮರತೇನೆಂದ್ರ ಮರೆಯಲಿ ಹೆಂಗ' ಪುಸ್ತಕ ಬಿಡುಗಡೆ
ಕಲಬುರಗಿ| 'ಮರತೇನೆಂದ್ರ ಮರೆಯಲಿ ಹೆಂಗ' ಪುಸ್ತಕ ಬಿಡುಗಡೆ
ಕಲಬುರಗಿ: ನಗರದ ಅನ್ನಪೂರ್ಣೇಶ್ವರಿ ಕ್ರಾಸ್ ಬಳಿಯ ಕಲಾ ಮಂಡಳಿಯಲ್ಲಿ ಸೋಮವಾರ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕಾಡಸಿದ್ದೇಶ್ವರ ಪ್ರಕಾಶನ ಆಶ್ರಯದಲ್ಲಿ ಹಿರಿಯ ಸಾಹಿತಿ ಸಿದ್ದರಾಮ್ ಪೊಲೀಸ್ ಪಾಟೀಲ್ ಅವರು ಸ್ವಾತಂತ್ರ್ಯ ಹೋರಾಟಗಾರ ಶಂಕರ್ ರಾವ್ ಶಿವರಾಯ ಅವರ ಕುರಿತಾಗಿ ರಚಿಸಿರುವ 'ಮರತೇನೆಂದ್ರ ಮರೆಯಲಿ ಹೆಂಗ' ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ್ ಸೇಡಂ, ನಾವು ಮೊದಲು ಮಾತೃಭಾಷೆಗೆ ಆದ್ಯತೆ ನೀಡಬೇಕು, ದೇಶದ ರಕ್ಷಣೆಗಾಗಿ ಪ್ರತಿಯೊಬ್ಬರು ಹೋರಾಡಬೇಕು. ಅಲ್ಲದೆ ದೇಶವನ್ನು ಉಳಿಸಲು ಬದ್ಧರಾಗಬೇಕೆಂದು ತಿಳಿಸಿದರು.
ಪುಸ್ತಕ ಬಿಡುಗಡೆಗೊಳಿಸಿದ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಮಾತನಾಡಿ, ದೇಶದ ರಕ್ಷಣೆಗಾಗಿ ನಾವು ದುಡಿಯಬೇಕಾಗಿದ್ದು, ಉತ್ತಮ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರು ಶ್ರಮಿಸಬೇಕೆಂದು ಕರೆ ನೀಡಿದರು.
ನಿವೃತ್ತ ಇಂಜಿನಿಯರ್ ಶ್ರೀಮಂತ ಆಳಂದ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಾಹಿತಿ ಗಂಗಾಧರ್ ಬಡಿಗೇರ್ ಪುಸ್ತಕ ಪರಿಚಯಿಸಿದರು. ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಗುಪ್ತಲಿಂಗ ಪಾಟೀಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿಎಚ್ ನಿರಗುಡಿ, ಲೇಖಕ ಸಿದ್ಧರಾಮಯ್ಯ ಪೊಲೀಸ್ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಸ್ವಾತಂತ್ರ್ಯ ಹೋರಾಟಗಾರ ದಿ. ಶಂಕರ್ ರಾವ್ ಶಿವರಾಯ ಅವರ ಸ್ಮರಣೆ ಮೂಡಿಸಿದ ಈ ಸಮಾರಂಭವು ಸಂಸ್ಕೃತಿಕ ಪ್ರಾಮುಖ್ಯತೆಯೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ರಾಜಶೇಖರ್ ಮಲಶೆಟ್ಟಿ, ಬಸವರಾಜ್ ಶಂಕರ್ ಮಾಂತಪ್ಪ ಪಾಟೀಲ್ ಅನಂತರಾಜ ಸಾಹು ಸಿದ್ದರಾಮಪ್ಪ ಉಪ್ಪಿನ್ ರಾಜು ಜೈನ್ ವೈಜನಾಥ ಪಾಟೀಲ್ ಡಾ ಆನಂದ ಸಿದ್ದಾಮಣಿ, ರಾಜೇಂದ್ರ ಜಳಕಿ