ಬಿಳವಾರ ಗ್ರಾಮದ ಮಹಾತ್ಮ ಸದ್ಗುರು ಅಯ್ಯಣ್ಣ ಮುತ್ಯಾನವರ ಜಾತ್ರಾ ಮಹೋತ್ಸವ
ಬಿಳವಾರ ಗ್ರಾಮದ ಮಹಾತ್ಮ ಸದ್ಗುರು ಅಯ್ಯಣ್ಣ ಮುತ್ಯಾನವರ ಜಾತ್ರಾ ಮಹೋತ್ಸವ
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಮಹಾತ್ಮ ಸದ್ಗುರು ಅಯ್ಯಣ್ಣ ಮುತ್ಯಾನವರ ಜಾತ್ರಾ ಕಾರ್ಯಕ್ರಮವು ದಿನಾಂಕ14/12/2024 ರಂದು ಶನಿವಾರ ಸಾಯಂಕಾಲ ನಂದಾದೀಪದೊಂದಿಗೆ ಸಕಲವಾದ್ಯ ಬಾಜಿ ಭಜಂತ್ರಿ ಡೊಳ್ಳಿನ ಮೆಳದೊಂದಿಗೆ ಜಾತ್ರೆ ಪ್ರಾರಂಭವಾಗುವುದು
15/12/2024 ರಂದು ರವಿವಾರ ಮಧ್ಯಾಹ್ನ 2 ಗಂಟೆಗೆ ಭಕ್ತರ ಸಮ್ಮುಖದಲ್ಲಿ ದೇವರ ಗಂಗಾಸ್ನಾನ ಕಾರ್ಯಕ್ರಮ ನೆರವೇರಿದ ಮೇಲೆ ಅಯ್ಯಣ್ಣ ಮುತ್ಯಾ ದೆವರ ಆರಾಧಕರಾದ ಶ್ರೀ ಬೀರಪ್ಪ ಪೂಜಾರಿ ಕಂಬಳಿ ಅವರಿಂದ ಸರಪಳಿ ಪವಾಡ ಕಾರ್ಯಕ್ರಮ ಜರುಗಲಿದೆ.
ದಿನಾಂಕ16/12/2024 ರಂದು ಸೋಮವಾರ ಜಂಗಿ ಪೈಲ್ವಾನರ ಕುಸ್ತಿ ಕಾರ್ಯಕ್ರಮ ಜರುಗಲಿದೆ ಬಲಾಡ್ಯ ಪೈಲ್ವಾನರಿಗೆ ಬೆಳ್ಳಿ ಕಡಗವನ್ನು ಬಹುಮಾನವಾಗಿ ಕೊಡಲಾಗುವುದು ಜಾತ್ರೆಗೆ ಬಂದಂತಹ ಭಕ್ತಾದಿಗಳಿಗೆ ಶ್ರೀ ಅಯ್ಯಣ್ಣ ಮುತ್ಯ ದೇವಸ್ಥಾನದ ಮಂಡಳಿಯ ವತಿಯಿಂದ ಉಚಿತ ಅನ್ನದಾಸೋಹ ಪ್ರಸಾದದ ವ್ಯವಸ್ಥೆ ಇರುತ್ತದೆ. ಹಾಗೂ ಜಾತ್ರಾ ವಿಶೇಷದ ಕಾರ್ಯಕ್ರಮದಲ್ಲಿ ಶ್ರೀ ಗುರುಲಿಂಗೇಶ್ವರ ನಾಟ್ಯ ಸಂಘದ ವತಿಯಿಂದ ಸಾಮಾಜಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 15 -12-2024 ರಂದು ರಾತ್ರಿ 10 ಗಂಟೆಗೆ ರತ್ನಮಾಂಗಲ್ಯ ಎಂಬ ಸಾಮಾಜಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಅದೇ ರೀತಿಯಾಗಿ ದಿನಾಂಕ 17-12-2024 ರಂದು ಮಂಗಳವಾರ ರಾತ್ರಿ ಹತ್ತು ಗಂಟೆಗೆ ಬಿದ್ದಿತ್ತು ಮೌನ ಗೆದ್ದಿತ್ತು ಎಂಬ ಸಾಮಾಜಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಸ್ಥರಾದ ಬಾಪುಗೌಡ ಎಂ ಕೊಡಮನಹಳ್ಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ