ಜಾನಪದ ಗಂಗೋತ್ರಿ.

ಜಾನಪದ ಗಂಗೋತ್ರಿ.

ಜಾನಪದ ಗಂಗೋತ್ರಿ.

ಪುಸ್ತಕ : ಜಾನಪದ ಗಂಗೋತ್ರಿ.

ಲೇಖಕರು :-ಬಸವರಾಜ ಪೋ. ಪಾಟೀಲ ಹಾಗು ಡಾ. ಜಗನಾಥ ಹೆಬ್ಬಾಳೆ.

ಪ್ರಕಟಣೆ :-ಜೂಲೈ -ಸೆಪ್ಟೆಂಬರ್ 2010

ಪ್ರಕಾಶಕರು :-ಬಿ. ಏನ್ ರೆಡ್ಡಿ

(ಅಂದಿನ ಕುಲಸಚಿವರು,:-ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು )

ಜಾನಪದವೆನ್ನುವುದು, ವಿಶ್ವವ್ಯಾಪಕವಾದ, ಅಳಿಸಲಾಗದ ಜ್ನ್ಯಾನಭಂಡಾರ,ಮಾನವ ಜನಾಂಗದ ತಾಯಿ ಬೇರು ಜಾನಪದ.

ಪುರಾತನ ಕಾಲದಿಂದಲೂ ಜಾನಪದ ಕಲೆಗೆ ಅದರದೇ ಆದ ಮೌಲ್ಯವಿದ್ದು.ಇಂದಿನ ಆಧುನಿಕ ಹಾಗು ತಾಂತ್ರಿಕ ಯುಗದ ನಡುವೆ ಜಾನಪದ ಅಳಿಸಿ ಹೋಗುವ ಆತಂಕದ ಕರಿಛಾಯೆಯಲ್ಲಿ ಅನೇಕ ಜಾನಪದ ಕಲಾವಿದರು, ,ಲೇಖಕರು, ಸಾಹಿತಿಗಳು ಜಾನಪದ ಕುರಿತ ಪುಸ್ತಕಗಳಲ್ಲಿ ಹಿಡಿದಿಟ್ಟಿದ್ದಾರೆ.  

ಜಾನಪದ ಗಂಗೋತ್ರಿ ಕೃತಿಯುಲ್ಲಿ ಒಟ್ಟು ಹದಿನಾಲ್ಕು ಲೇಖನಗಳಿಂದ ಒಳಗೊಂಡಿದ್ದ ಕೃತಿಯಾಗಿದ್ದು. ಜಾನಪದ ಸಂಸ್ಕೃತಿ, ಕಲೆ, ಆಚಾರ ವಿಚಾರ ಮತ್ತು ಜಾನಪದವೆನ್ನುವುದು ಮಾನವನ ಬದುಕಿನ ಭಾಗವಾಗಿದ್ದು ಅದರ ಬಗ್ಗೆ ಹಾಗು ಹಬ್ಬ ಹರಿದಿನಗಳಲ್ಲಿ ಜಾನಪದ ಸಂಸ್ಕೃತಿಗಳ ಮಹತ್ವ ಉಳಿಸಿ ಬೆಳೆಸುತ್ತಿದ್ದಾರೆ .ಹನ್ನೆರಡನೇ ಶತಮಾನದಲ್ಲಿ ಶರಣ, ಸಂತರ ಬದುಕಿನ ಕುರಿತು ಜಾನಪದ ಗಂಗೋತ್ರಿ ಪುಸ್ತಕದಲ್ಲಿ ವರ್ಣಿಸಿದ್ದಾರೆ.

 ""ಭಕ್ತಿಚಳುವಳಿ -ತತ್ವಪದಗಳ ಅರಿವಿನ ಜಾಡು ಹಿಡಿದು""

ತಾತ್ವಿಕವಾಗಿ ರಾಜಕೀಯ, ಮತ್ತು ಧಾರ್ಮಿಕ ವಿಚಾರಗಳಲ್ಲಿ ಭಕ್ತಿಗೆ ಬಹು ಪ್ರಾಮುಖ್ಯ ಸ್ಥಾನ ವದಗಿಸಿಕೊಟ್ಟಿದ್ದು ಹಾಗು ಹನ್ನೆರಡನೇ ಶತಮಾನದ ಶರಣರು ಮುಢಾಚಾರ, ಡಂಬಾಚಾರ ಅಳಿಸಿ ಎಲ್ಲರು ಸಮಾನರು ಎನ್ನುವ ಕಾಯಕತತ್ವದ ಕುರಿತು ಮಾಹಿತಿ ವದಗಿಸಿರುವ ಜೊತೆಗೆ ತತ್ವಪಾದಕಾರರು ತತ್ವಪದಗಳ ಮೂಲಕ ಅಂದಶ್ರದ್ದೆಯಲ್ಲಿರುವ ಜನರನ್ನು ಜಾಗ್ರತೆಗೊಳಿಸುವ ಪರಿಯ ಕುರಿತು ಲೇಖಕರು ಈ ಲೇಖನದಮೂಲಕ ಓದುಗರರಿಗೆ ಒದಗಿಸಿರುವರು.

ಬಂಧು ಭಾಂದವರು ಮನೆಯ ಹಿರಿಯರು ಸತ್ತಾಗ ಅಳುವ ಪರಿಯನ್ನು ""ಶೋಕಗೀತೆಗಳು -ಒಂದು ವಿವೇಚನೆ"" ಲೇಖನದಲ್ಲಿ ವಿವರಿಸಿದ್ದಾರೆ.

ಉಧಾರಣೆಗಾಗಿ ಗಂಡನ್ನನ ಕಳೆದುಕೊಂಡ ಹೆಂಡತಿ ದುಃಖದಲ್ಲಿ ಅಳುವ ರೀತಿ ಅವಳ ಭಾವನೆ ಶೋಕ ಗೀತೆಯಾಗಿ ಯಾವರೀತಿ ಹೊರಹೊಮ್ಮುತ್ತದೆಯಂದು ವಿವರಿಸುವ ಪ್ರಯತ್ನ ಲೇಖಕರು ಮಾಡಿದ್ದಾರೆ.

 ""ಜಾನಪದ -ಒಂದು ಚಿಂತನ""ಮಾಲಿಕೆಯಲ್ಲಿ ಬಡವ, ಬಲ್ಲಿದ, ಅಕ್ಷರಸ್ತ -ಅನಕ್ಷರಸ್ತ, ಹೀಗೆ ಮೇಲು ಕೀಳು ಅಲ್ಲದ ಎಲ್ಲರೂ ಸಮನಾಗಿ ಕಾಣುವ ಸೊಗಡೆ ಜಾನಪದವೆಂದು ವಿವರಿಸಿರುವ ಜೊತೆಗೆ ಜಾನಪದ ಕಲೆ ಸಂಸ್ಕೃತಿ ಉಳಿವಿನ ಹಾಗು ಆಚರಣೆ ಕುರಿತು ಸಮಗ್ರ ಚಿತ್ರಣವನ್ನು ತೆರೆಟ್ಟಿದ್ದಾರೆ

 ""ಹೈದ್ರಾಬಾದ-ಕರ್ನಾಟಕ ಜಾನಪದ ಸಾಧಕರು"" ಲೇಖನದ ಮೂಲಕ ಜಾನಪದ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರ ಕುರಿತು ಮಾಹಿತಿ ವದಗಿಸಿರುವುದು ಇಂದಿನ ಕಲ್ಯಾಣ ಕರ್ನಾಟಕಕ್ಕೆ ಕಳಶಪ್ರಾಯವಾಗಿದೆಯಂದು ವಿವರಿಸಿರುವರು.

""ಹೈದ್ರಾಬಾದ ಕರ್ನಾಟಕ ಜಾನಪದ ಕಲೆಗಳು""(ಕಲ್ಯಾಣ ಕರ್ನಾಟಕ )ಕುರಿತು ಪುಸ್ತಕದಲ್ಲಿ ಲೇಖಕರು

ಹಿಡಿದಿಟ್ಟಿದ್ದು ಯುವಪೀಳಿಗೆಗೆ ಉಪಯುಕ್ತವಾದ ಸಮಗ್ರ ಮಾಹಿತಿಯನ್ನು ಒದಗಿಸಿದ್ದಾರೆ.

 ""ಜಾನಪದ ಸಾಹಿತ್ಯದಲ್ಲಿ ದಾಂಪತ್ಯದ ಮಹತ್ವ ಹಾಗು 

ಮದುವೆಯನ್ನುವುದು ಮಾನವ ಜೀವನದಲ್ಲಿ ಪ್ರಮುಖವಾದ ಘಟ್ಟ.

ಅದಕ್ಕಾಗಿ ನಮ್ಮ ಹಿರಿಯರು ವರ ಹಾಗು ವಧುವಿಗೆ ತಕ್ಕ ವರ ಹುಡಕುವ ನಿಟ್ಟಿನ ಕ್ರಮವಾಗಿ ರೂಪಕ್ಕೆ ಆದ್ಯತೆ ಕೊಡದೆ, ಹುಡಗನ, ಹಾಗು ಹುಡುಗಿಯ ಒಳ್ಳೆ ಗುಣಲಕ್ಷಣಗಳಿಗೆ

ನಡತೆಗೆ ಆದ್ಯತೆ ಕೊಡುತ್ತಿರುವುದು ಜಾನಪದ ಹಾಡಿನ ಮೂಲಕ ವ್ಯಕ್ತಪಡಿಸಿರುವದನ್ನು ಲೇಖಕರು ಪುಸ್ತಕದಲ್ಲಿ ಉಲ್ಲೇಖಸಿದ್ದಾರೆ.

ಒಟ್ಟಾಗಿ ಹೇಳಬೇಕೆಂದರೆ ಜಾನಪದ ಗಂಗೋತ್ರಿ ಪುಸ್ತಕ ಓದುಗರಿಗೆ ಜಾನಪದದ ಸೊಗಡು ಹಾಗು ಇನ್ನಿತರ ಎಲ್ಲ ವಿಷಯಗಳ ಮೇಲೆ ಪ್ರಭಾವ ಬೀರಿರುವುದು ಓದುಗರ ಮೆಚ್ಚುಗೆಗೆ ಪಾತ್ರವಾಗುವದರಲ್ಲಿ ಸಂದೇಹವೇ ಇಲ್ಲ ಎನ್ನುವುದು ನನ್ನ ಭಾವನೆ.

ವಿಮರ್ಶಕರು :-

ಓಂಕಾರ ಪಾಟೀಲ 

(ಕಾರ್ಯದರ್ಶಿ :-ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ)