ಸೇವಾಲಾಲ್ ಮಹಾರಾಜರ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ – ನ್ಯಾಯಾಧೀಶ ಶ್ರೀನಿವಾಸ ನವಲೆ ಕರೆ
ಸೇವಾಲಾಲ್ ಮಹಾರಾಜರ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ – ನ್ಯಾಯಾಧೀಶ ಶ್ರೀನಿವಾಸ ನವಲೆ ಕರೆ
ಕಲಬುರಗಿ : ಸೇವಾಲಾಲ್ ಮಹಾರಾಜರ ಮಹತ್ವದ ತತ್ತ್ವಗಳು ಮತ್ತು ಉಪದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನ್ಯಾಯಾಧೀಶರಾದ ಶ್ರೀನಿವಾಸ ನವಲೆ ಅವರು ಹೇಳಿದರು. ಸೇವಾಲಾಲ್ ಮಹಾರಾಜ ಅವರ ಮಾರ್ಗದಲ್ಲಿ ನಡೆಯುವುದು ಸಮಾಜದ ಒಳಿತಿಗೆ ದಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಲಬುರಗಿ ಜಿಲ್ಲಾ ಕೋರ್ಟ್ ಆವರಣದಲ್ಲಿ, ಗುಲ್ಬರ್ಗಾ ನ್ಯಾಯವಾದಿಗಳ ಸಂಘ ಕಲಬುರಗಿ ಅವರು ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸುಳ್ಳು ಹೇಳುವುದನ್ನು ತ್ಯಜಿಸಿ, ಸದಾ ನಾಲ್ವರಿಗೆ ಒಳ್ಳೆಯದನ್ನು ಬಯಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯಾರಿಗೂ ಕೆಟ್ಟದ್ದನ್ನು ಮಾಡಬಾರದು ಎಂಬ ಸೇವಾಲಾಲ್ ಮಹಾರಾಜರ ಸಂದೇಶವೇ ಮಾನವೀಯತೆಯ ಮೂಲ ಸಿದ್ಧಾಂತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಗೀರಿಶ್, ಎಸ್.ಎನ್. ಪಸಾರ್, ಸಿದ್ದಾರಾಮ ವಾಡಿ, ಆರತಿ ರಾಠೋಡ, ಭೀಮಾಶಂಕರ ಪೂಜಾರಿ, ಭಾಗೀರಥಿ ಆರ್.ಎಸ್., ಸಂಗೀತಾ ಪೂಜಾರಿ,
ನ್ಯಾಯವಾದಿ ಬಾಬುರಾವ್ ಜಾಧವ್, ರಾಜು ಕೊರಳ್ಳಿ, ಹೀರಾಲಾಲ್ ಚೌವ್ಹಾಣ್, ಕಮಲಕರ್ ರಾಠೋಡ, ಸೀತಾರಾಮ ರಾಠೋಡ, ಮೋಹನ್ ರಾಠೋಡ, ವಿಜಯಕುಮಾರ ರಾಠೋಡ, ಇಂದುದರ್ ಜಾದವ್, ವಾಲೋಜಿ ರಾಠೋಡ ಹಾಗೂ ಜಗನ್ನಾಥ ರಾಠೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
