ವಾಡಿಯಲ್ಲಿ ವಾರದಿಂದ ನೀರಿಲ್ಲದೆ ಜನರ ಪರದಾಟ

ವಾಡಿಯಲ್ಲಿ ವಾರದಿಂದ ನೀರಿಲ್ಲದೆ ಜನರ ಪರದಾಟ

ವಾಡಿಯಲ್ಲಿ ವಾರದಿಂದ ನೀರಿಲ್ಲದೆ ಜನರ ಪರದಾಟ

ವಾಡಿ ಪಟ್ಟಣದ ಕೆಲ ವಾರ್ಡ್ ಗಳಲ್ಲಿ ಸುಮಾರು ಎಂಟತ್ತು ದಿನಗಳಿಂದ ನೀರಿಲ್ಲದೆ ಜನರು ಹನಿ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ರೀತಿ ನಮ್ಮನ್ನು ಯಾಕೆ ಗೋಳಾಡಿಸುತ್ತಿದ್ದಿರಿ ಎಂದು ತಮ್ಮ ಅಳಲನ್ನು ಹೇಳಲು ಪುರಸಭೆ ಕಛೇರಿಗೆ,ಖಾಲಿ ಕೊಡಗಳ ಜೊತೆಗೆ ಆಗಮಿಸಿದ ಮಹಿಳೆಯರೊಂದಿಗೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ ಅವರಿಗೆ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಪಕ್ಕದಲ್ಲಿ ಎರಡು ನದಿಗಳಿದ್ದರೂ,ಪುರಸಭೆ ಅನುದಾನದಲ್ಲಿ ಅನೇಕ ಬೋರವೆಲ್ ಳನ್ನು ರಿಪೇರಿಗೊಳಿಸಿ ಹೊಸ ಬೋರ್ವೆಲ್ ಗಳನ್ನು ಹಾಕಿಸಿದ್ದೇವೆ ಅಂತ ನೀವು ಹೇಳುತ್ತಿರಿ ಅವು ಎಲ್ಲಿವೆ.

ಈ ಚಳಿಗಾಲದಲ್ಲೇ ಈ ರೀತಿ ಸಮಸ್ಯೆ ಆದರೆ ಮುಂದೆ ಏನು ಗತಿ, ಈ ರೀತಿ ನೀರಿನ ಸಮಸ್ಯೆ ಮೋಟರ್ ರಿಪೇರಿ ಪಂಪ್ ರಿಪೇರಿ ವಿದ್ಯುತ್ ಸಮಸ್ಯೆ

ಆದರೆ ಅದಕ್ಕೆ ಪರ್ಯಾಯವಾಗಿ 50 ಲಕ್ಷ ರೂಪಾಯಿ ವೆಚ್ಚದ ಪೈಪ್ ಲೈನ್ ವ್ಯವಸ್ಥೆ ಮಾಡಿದರು ಯಾಕೆ ಜನರಿಗೆ ತೊಂದರೆ ಕೊಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿಯ ಯಂಕಮ್ಮ ಗೌಡಗಾಂವ,ರಮೇಶ ಜಾಧವ,ಭರತ ರಾಠೋಡ

ಹಾಗು ವಾರ್ಡ್‌ ಸಂಖ್ಯೆ 02ರ ದೇವಲಿ ಬಾಯಿ ರಾಠೋಡ,ಲಕ್ಷ್ಮೀ ಬಾಯಿ ಕೋಲಿ,ಪಾರ್ವತಿ ಕೊಲಿ,,ಅನಿತಾ ಗಂಟ್ಯಾಳ,ವಸಂತಾ ಮಾರಬಾಯಿ,ಜಾಹಿದಾ ಬೇಗಮ್,ರುಕಸಾನಾ ಬೇಗಮ್,ಹರ್ಷಾ ಬೇಗಮ್,ಮೈತಾಬಿ ಬೆಗಮ್,ರಿಜ್ವಾನಾ ಬೆಗಮ್,ಮಾಲನಬಿ ಬೆಗಮ್,ಕಮಲಾ ರಾಠೋಡ,

ನೀಲಮ್ಮ ಬನಸೋಡೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.