9.ರಂದು ಸುವರ್ಣ ಸೌಧ ಮುತ್ತಿಗೆ

9.ರಂದು ಸುವರ್ಣ ಸೌಧ ಮುತ್ತಿಗೆ

9.ರಂದು ಸುವರ್ಣ ಸೌಧ ಮುತ್ತಿಗೆ

ಕಲಬುರಗಿ: ರೈತರು, ಕೃಷಿಗೆ ಮಾರಕವಾದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೈ ಬಿಡಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ವಕ್ಷ ಬೋರ್ಡ್ ನಲ್ಲಿ ನಮ್ಮ ಜಿಲ್ಲೆಯ ರೈತರಿಗೆ ನ್ಯಾಯ ವೋದಗಿಸುವುದು ಯಡಾಮಿ ತಾಲೂಕಿನ ಮಲ್ಲಾಬಾದ್ ಏತ ನೀರಾವರಿ ಕೆಲಸ ಪ್ರಾರಂಭ ಮಾಡಬೇಕು ಹಾಗೂ ಸೇರಿದಂತೆ ವಿವಿಧಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದಿಂದ ವಾಸುದೇವ ಮೇಟ ನೇತೃತ್ವದಲ್ಲಿ ಡಿ.9ರಂದು ಬೆಳಗಾವಿ ಚಲೋ, ಸುವರ್ಣ ಸೌಧ ಮುತ್ತಿಗೆ ಹಮ್ಮಿಕೊಳ್ಳಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಪ್ರಶಾಂತಗೌಡ ಮಾಲಿಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಹಿರೇಮಠ, ಪತ್ರಿಕಾ ಪ್ರತಿನಿಧಿ ಚಂದ್ರಶೇಖರ್ ಪಾಟೀಲ್, ತಾಲೂಕಾ ಅಧ್ಯಕ್ಷ ಪಂಚಯ್ಯ ಸದಾಶಿವಗೌರ್, ಮಲ್ಲು ಶಿರವಾಳ್, ವಿಜಯಕುಮಾರ್ ಶಿವು ಇದ್ದರು.