ಕನಕಪೂರ ಗ್ರಾಮಸ್ಥರಿಗೆ ಕುಡಿಯಲು ಶುದ್ಧ ನೀರು ಕೋಡಿ : ದಲಿತ ಸೇನೆ

ಕನಕಪೂರ ಗ್ರಾಮಸ್ಥರಿಗೆ ಕುಡಿಯಲು ಶುದ್ಧ ನೀರು ಕೋಡಿ  : ದಲಿತ ಸೇನೆ

ಕನಕಪೂರ ಗ್ರಾಮಸ್ಥರಿಗೆ ಕುಡಿಯಲು ಶುದ್ಧ ನೀರು ಕೋಡಿ : ದಲಿತ ಸೇನೆ 

ಚಿಂಚೋಳಿ : ತಾಲೂಕಿನ ಕನಕಪೂರ ಗ್ರಾಮ ಪಂಚಾಯತಿ ನಿವಾಸಿಗಳಿಗೆ ಕುಡಿಯಲು ಯೋಗ್ಯವಾದ ನೀರು ಸಿಗುತ್ತಿಲ್ಲ. ಕುಡಿಯಲು ಶುದ್ಧವಾದ ನೀರು ಒದಗಿಸಿಕೋಡಿ ಎಂದು ದಲಿತ ಸೇನೆಯ ತಾಲೂಕ ಘಟಕ ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿ ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಳವಡಿಸಿರುವ ನಲ್ಲಿಯಿಂದ ಕುಡಿಯಲು ಯೋಗ್ಯವಲ್ಲದ ಕಲುಸಿತ ನೀರು ಸೋಸುತ್ತಿದೆ.

ಗ್ರಾಮಸ್ಥರು ನೀರು ಕುಡಿದರೆ ಸಾಂಕ್ರಮಿಕ ರೋಗಕ್ಕೆ ತುತ್ತಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಚಿಂಚೋಳಿ ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ಅಧಿಕಾರಿಗಳು ಕಚೇರಿಯಲ್ಲಿ ಸಿಗುವುದಿಲ್ಲ ಮತ್ತು ಫೋನ್ ಕರೆ ಸ್ವೀಕರಿಸುತ್ತಿಲ್ಲ. ಮೇ 17 ರಂದು ಫೋನ್ ಇನ್ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ಗಮನ ಸೆಳೆಯಲಾಗಿತ್ತು. ಆದರೂ ಇಲ್ಲಿಯವರೆಗೆ ಸಮಸ್ಯೆಗೆ ಸ್ಪಂದನೆ ಸಿಕ್ಕಲ್ಲ ಎಂದು ದಲಿತ ಸೇನೆ ಗುಡುಗಿದೆ. ಆದಷ್ಟು ಬೇಗ ಅಧಿಕಾರಿಗಳು ಕನಕಪೂರ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿ, ಜನರ ಆರೋಗ್ಯ ಕಾಪಾಡಬೇಕೆಂದು ಆಗ್ರಹಿಸಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೇನೆ ಮನವಿ ಮಾಡಿದೆ. 

ಈ ಸಂದರ್ಭದಲ್ಲಿ ದಲಿತ ಸಂಘಟನೆಯ ಹಿರಿಯ ಮುಖಂಡ ಕಾಶಿನ್ನಾಥ ಶಿಂಧೆ, ಅಧ್ಯಕ್ಷ ರಾಘವೇಂದ್ರ ಎಸ್ ಹೂವಿನಬಾವಿ, ಬಲವಂತ, ರಾಜಕುಮಾರ ಅವರು ಉಪಸ್ಥಿತರಿದ್ದರು.