20 ಕೋಟಿಗೂ ಮೀರಿ ಹಣ ದುರುಪಯೋಗ ಬ್ರಷ್ಟಾಚಾರದ ಬಗ್ಗೆ ಶೀಘ್ರದಲ್ಲಿ ಕ್ರಮ ವಹಿಸಬೇಕೆಂದು ಶ್ರೀ ಶಿವಲಿಂಗ ಸ್ವಾಮಿ ನೇತೃತ್ವದಲ್ಲಿ ಪತ್ರಿಕಾ ಗೋಷ್ಟಿ
20 ಕೋಟಿಗೂ ಮೀರಿ ಹಣ ದುರುಪಯೋಗ ಬ್ರಷ್ಟಾಚಾರದ ಬಗ್ಗೆ ಶೀಘ್ರದಲ್ಲಿ ಕ್ರಮ ವಹಿಸಬೇಕೆಂದು ಶ್ರೀ ಶಿವಲಿಂಗ ಸ್ವಾಮಿ ನೇತೃತ್ವದಲ್ಲಿ ಪತ್ರಿಕಾ ಗೋಷ್ಟಿ
ಕಲಬುರಗಿ: ಶ್ರೀ ಪ್ರೀಯಾಂಕ ಖರ್ಗೆ ಚಿತ್ತಾಪೂರ ಮತಕ್ಷೇತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇವರ ಕ್ಷೇತ್ರದ ಬಿ.ಇ.ಓ ಕವೇರಿಯಲ್ಲಿ 20 ಕೋಟಿ ಬ್ರಷ್ಟಾಚಾರ ಹಾಗೂ ಶ್ರೀ ಶರಣಪ್ರಕಾಶ ಪಾಟೀಲ ಸೇಡಂ ಹಾಗೂ ಉಸ್ತುವಾರಿ ಸಚಿವರು ರಾಯಚೂರು ಇವರ ಕ್ಷೇತ್ರ ಸೇಡಂ ಮತ್ತು ರಾಯಚೂರು ಸಿಟಿ ಬಿಇಓ ಕಛೇರಿಯಲ್ಲಿ 20 ಕೋಟಿಗೂ ಮೀರಿ ಹಣ ದುರುಪಯೋಗ ಬ್ರಷ್ಟಾಚಾರದ ಬಗ್ಗೆ ಶೀಘ್ರದಲ್ಲಿ ಕ್ರಮ ವಹಿಸಬೇಕೆಂದು ಶ್ರೀ ಶಿವಯೋಗಿ ಸ್ವಾಮಿ ಸ್ಮಾರಕ ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷರು ಹಾಗೂ ಜಿಲ್ಲಾ ಜನತಾದಳದ ಹಿರಿಯ ಉಪಾಧ್ಯಕ್ಷ ಶ್ರೀ ಶಿವಲಿಂಗ ಸ್ವಾಮಿ ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಶ್ರೀ ಶಿವಯೋಗಿ ಸ್ವಾಮಿ ಸ್ಮಾರಕ ವಿದ್ಯಾವರ್ಧಕ ಸಂಸ್ಥೆ ಕೋಡ್ಲಾ ತಾ: ಸೇಡಂ ಜಿಲ್ಲಾ ಕಲಬುರಗಿ ಇದರ ಬಗ್ಗೆ ಮಾನ್ಯ ಸಿವಿಲ್ ನ್ಯಾಯಾಲಯ ಹಾಗೂ ಮಾನ್ಯ ಉಚ್ಚ ನ್ಯಾಯಾಲಯ ಕಲಬುರಗಿ ಇವರು ಆದೇಶಗಳನ್ನು ಮಾಡಿದ್ದು, ಅವುಗಳನ್ನು ಒಪ್ಪಿಕೊಂಡು ಮಾನ್ಯ ನಿರ್ದೇಶಕರು, ಉಪ ನಿರ್ದೇಶಕರು, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇಡಂ ಮತ್ತು ಚಿತ್ತಾಪೂರ ಇವರು ಒಪ್ಪಿಕೊಂಡು ಪತ್ರ ನೀಡಿ ಅದರಂತೆ ವ್ಯವಹರಿಸಲಾರದ ಬಗ್ಗೆ ಮತ್ತು ಈ ಸಂಸ್ಥೆಗೆ ಸಂಬAಧವಿಲ್ಲದವರು, ಸುಮಾರು 20 ಜನ ಸಿಬ್ಬಂದಿಯನ್ನು ನೇಮಕಾತಿ ಮಾಡಿ ಅನುಮೋದನೆ ಷರತ್ತು 3 ಮತ್ತು 14 ಕೆಲವು ಆದೇಶಗಳಲ್ಲಿ 6 ಮತ್ತು 10 ಹಾಗೂ ಎಜುಕೇಶನ ಆಯಕ್ಟ 91 ಮತ್ತು 100 ಹಾಗೂ ಸರಕಾರಿ ಸೇವಾ ನಿಯಮ ಉಲ್ಲಂಘನೆ ಮಾಡಿದ ಬಗ್ಗೆ ಮೇಲೆ ತಿಳಿಸಿದ ಅಧಿಕಾರಿಗಳನ್ನು ವಿಚಾರಣೆ ಮಾಡಿ ಕ್ರಮ ತೆಗೆದುಕೊಳ್ಳುವಂತೆ ದಿನಾಂಕ 25-9- 2023 2 7-3-2024 ? ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರೆಗೆ ನೀವು ಯಾವದೇ ಕ್ರಮ ತೆಗೆದುಕೊಳ್ಳದೆ ಮೌನವಾಗಿದ್ದೀರಿ. (ಎ) ಈ ಮೊದಲು ಸಹ ಮಾನ್ಯ ಉಚ್ಚ ನ್ಯಾಯಾಲಯ ಕಲಬುರಗಿ
ಇವರು ಡಬ್ಲ್ಯುಪಿ 40558/2008 ದಿನಾಂಕ 1-12-2009 ರಂದು ಜಿಲ್ಲಾ ನೋಂದಣಾಧಿಕಾರಿಗಳ ಆದೇಶ ಸಂಬAಧ ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಹಾಗೂ ಸಧ್ಯದಲ್ಲಿ ಇದೇ ಉಚ್ಚ ನ್ಯಾಯಾಲಯ ರೀಟ್ ಅರ್ಜಿ ಸಂಖ್ಯೆ 201487/2024 ದಿನಾಂಕ 27-6-2024 ರಂದು ಜಿಲ್ಲಾ ನೋಂದಣಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ಕೊಟ್ಟಿದ್ದಾರೆ. ಇದನ್ನು ಸಹ ದಿನಾಂಕ 2-7-2024 ರಂದು ಮಾನ್ಯ ಅಪರ ಆಯುಕ್ತರ ಕಾರ್ಯಾಲಯ ಕಲಬುರಗಿ ಮತ್ತು ಉಪ ನಿರ್ದೇಶಕರು ಸಾಶಿಇ ಕಲಬುರಗಿ ಮತ್ತು ರಾಯಚೂರು ಹಾಗೂ ಬಿ.ಇಓ ಸೇಡಂ, ಚಿತ್ತಾಪೂರ ಹಾಗೂ ರಾಯಚೂರು ಸಿಟಿ ಇವರಿಗೆ ಕೊಡಲಾಗಿದೆ. ಇಲ್ಲಿಯವರೆಗೂ ಸಹ ಈ ಅಧಿಕಾರಿಗಳು ಯಾವದೇ ಕ್ರಮ ತೆಗೆದುಕೊಂಡಿರುವುದಿಲ್ಲ.
ಪೊಲೀಸ ಇಲಾಖೆಯಲ್ಲೂ ಸಹ ಮಾನ್ಯ ಉಚ್ಚ ನ್ಯಾಯಾಲಯದ ಆದೇಶ ಮಾನ್ಯ ಗೃಹ ಮಂತ್ರಿಗಳ ಆದೇಶ ಹಾಗೂ ಮಹಾ ನಿರ್ದೇಶಕರ ಆದೇಶ ದಿನಾಂಕ 27-10-2023, ಪಾಲಿಸಲಾರದೆ ನಮಗೆ ನ್ಯಾಯಾಲಯದ ಆದೇಶದ ಪ್ರಕಾರ ರಕ್ಷಣೆ ಕೊಡದೆ ಮೋಸ ಮಾಡುತ್ತಾ ಬ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಇದರಿಂದ ಸರ್ಕಾರದ ಹಣ ವಿದ್ಯಾ ಇಲಾಖೆಯಲ್ಲಿ ಸುಮಾರು 40 ಕೋಟಿಗೂ ಮೀರಿ 2007 80 ಇಲ್ಲಿಯವರೆಗೆ ದುರುಪಯೋಗವಾಗಿರುತ್ತದೆ. ಇದರ ಬಗ್ಗೆ ಮಾನ್ಯ ಪ್ರಿಯಾಂಕ್ ಖರ್ಗೆಯವರು ಚಿತ್ತಾಪೂರ ಮತಕ್ಷೇತ್ರ ಉಸ್ತುವಾರಿ ಮಂತ್ರಿಗಳು ಹಾಗೂ ಮಾನ್ಯ ಶ್ರೀ ಶರಣ ಪ್ರಕಾಶ ಪಾಟೀಲ ರವರು ಸೇಡಂ ಕ್ಷೇತ್ರ ಹಾಗೂ ಉಸ್ತುವಾರಿ ಮಂತ್ರಿಗಳು ರಾಯಚೂರು ಇವರುಗಳು ಸಾರ್ವಜನಿಕ ಮಂತ್ರಿಯಾಗಿ ಸರ್ಕಾರದ ಹಣ ದುರುಪಯೋಗ ಹಾಗೂ ಮಾನ್ಯ ನ್ಯಾಯಾಲಯದ ಆದೇಶಗಳು ಉಲ್ಲಂಘನೆ ಕೆಲಸದಲ್ಲಿ ಅಲಕ್ಷತೆ ಹಾಗೂ ಸಂವಿಧಾನವನ್ನು ನಂಬಿರುವ ನೀವು ಸಂವಿಧಾನದ 141 ಕಲಂ ನ್ನು ಮರೆತು ಮೌನವಾಗಿ ಬ್ರಷ್ಟಾಚಾರಕ್ಕೆ ಕಾರಣರಾಗಿರುವ ಅಧಿಕಾರಿಗಳ ಬಗ್ಗೆ ಒಂದು ವಾರದಲ್ಲಿ ವಿಚಾರಣೆ ಮಾಡಿ ಕ್ರಮ ತೆಗೆದುಕೊಳ್ಳಿ ಇಲ್ಲವಾದರೆ ಈಗಾಗಲೇ ಈ ವಿದ್ಯಾ ಇಲಾಖೆಯ ಅಧಿಕಾರಿಗಳ ಬಗ್ಗೆ ಲೋಕಾಯುಕ್ತಕ್ಕೆ ಪಿರ್ಯಾದಿ ಸಲ್ಲಿಸಲಾಗಿದೆ. ನೀವು ಕ್ರಮ ತೆಗೆದುಕೊಳ್ಳದಿದ್ದರೆ ನಿಮ್ಮ ವಿರುದ್ಧವು ಸಹ ಲೋಕಾಯುಕ್ತಕ್ಕೆ ಪಿರ್ಯಾದಿ ಸಲ್ಲಿಸಲಾಗುವದು. ಯಾವದಕ್ಕೂ ಈ ಪತ್ರಿಕೆ ಪ್ರಕಟಣೆಯ ಒಂದು ವಾರದಲ್ಲಿ ಉತ್ತರಿಸುವಂತೆ ಪತ್ರಿಕಾ ಗೋಷ್ಟಿ ಮೂಲಕ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಾ.ಸಿದ್ದಣ್ಣ ಎಸ್.ಪಾಟೀಲ, ಸಂಜುಕುಮಾರ ಮಡಕಿ, ಸುನೀಲ ಗಾಜರೆ ಸೇರಿದಂತೆ ಪಕ್ಷದ ಮುಖಂಡರು ಇದ್ದರು
.