ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ
ಕಲಬುರಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಬೆಂಗಳೂರು, ಕಲಬುರಗಿ ರಾಜ್ಯ ಸಂಚಾಲಕರಾದ ಅರ್ಜುನ್ ಭದ್ರೆ ಹಾಗೂ ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಕ್ರಾಂತಿ ರವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರಿಗೆ ಸಮಿತಿಯ ನಿಯೋಗದೊಂದಿಗೆ ಗುರುವಾರ ಅವರ ನಿವಾಸ ದಲ್ಲಿ ಭೇಟಿಯಾಗಿ ಸಂವಿಧಾನ ವಿರೋಧಿ ಮಾತನಾಡಿದ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ಅವರ ಮೇಲೆ ಕೇಸ್ ದಾಖಲಿಸಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ ಸಂಘ ಪರಿವಾರದ ಕೆಲ ನಿಷ್ಠ ಮಠಾದೀಶರ ಸಂವಿಧಾನದ ವಿರೋಧ ಅಪಸ್ವರ ತೆಗೆಯ್ತುಲ್ಲಿದ್ದು ಕೋಮುವಾದ ಸಂಘಟನೆಗಳ ಜೊತೆ ಕುರಿತು ಸ್ವಾಮಿಜಿ ಕರ್ನಾಟಕ ಘಟಕ ದಿನಾಂಕ 23-11-2024 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂತ ಸಮಾವೇಶದಲ್ಲಿ ಮಾತಾನಾಡಿದ ಸ್ವಾಮೀಜಿ ಸ್ವತಂತ್ರ ಪೂರ್ವದಲ್ಲಿ ನಮ್ಮ ಭಾರತ ಹಿಂದೂ ರಾಷ್ಟ್ರವಾಗಿತ್ತು. ನಮಗೆ ಗೌರವಿಸುವ ಸಂವಿಧಾನ ಬರಬೇಕಾಗಿತ್ತು ಎಂದು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಪೇಜಾವರ ಸ್ವಾಮೀಜಿ ಬಹಿರಂಗ ಸಭೆಯಲ್ಲಿ ಈ ಸಂವಿಧಾನ ಹೋಗಿ ನಮಗೆ ಗೌರವಿಸುವ ಸಂವಿಧಾನ ಬರಬೇಕು ಎಂದು ಹೇಳಿರುವ ಸ್ವಾಮೀಜಿಗೆ ನಮ್ಮ ವಿರೋಧ ಎಂದರು ಅರ್ಜುನ್ ಭದ್ರೆ. ಇದಕ್ಕೆ ಸ್ವಾಮೀಜಿ ನಾನು ಆತರ ಹೇಳಿಲ್ಲ ನಾನು ಹೇಳಿದ್ದು ಇತರ ಅಂತ ಹೇಳಿದ್ದು ಅಂತ ಹೇಳಿತ್ತಾರೆ ಸ್ವಾಮೀಜಿ ಅವರ ಬಗ್ಗೆ ಪರಿಶೀಲನೆ ಮಾಡಿ ಕಾನೂನು ಕ್ರಮಕೈಗೊಳ್ಳೋಣ ಎಂದು ಮಾನ್ಯ ಮುಖ್ಯಮಂತ್ರಿಗಳು ಹೇಳಿದರು.
ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆಯಲಿರುವ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆ ಸೇಡಂ ಹಾಗೂ ಭಾರತ ವಿಕಾಸ ಸಂಗಮ ಮತ್ತು ವಿಕಾಸ ಅಕಾಡೆಮಿಕ್ ದಿನಾಂಕ29-01-2025 ರಿಂದ 08-02-2025 ವರೆಗೆ ಆಯೋಜಿಸಿರುವ ಆರ್ ಎಸ್ ಎಸ್ ಮತ್ತು ಸಂಘ ಪರಿವಾರದ ಭಾರತೀಯ ಸಂಸ್ಕೃತಿಕ ಉತ್ಸವಕ್ಕೆ ನೀವು ಮತ್ತು ನಿಮ್ಮ ಸಚಿವ ಸಂಪುಟ ಬರಬಾರದು ನೀಯೋಗ ಒತ್ತಾಯಿಸುತ್ತದೆ. ಅದಕ್ಕೆ ಮುಖ್ಯಮಂತ್ರಿಯವರು ನಾವು ಯಾರೂ ಕೂಡ ಬರುವುದಿಲ್ಲ ನನಗೆ ಕೇಳದೆ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಗಮನಕ್ಕೆ ತರದೇ ಹೆಸರು ಹಾಕಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖನ್ನಾ, ಅಜೀಜ್ ಐಕೂರ್, ಸೂರ್ಯಕಾಂತ ಅಜಾದಪುರ್, ಮಹೇಶ ಕೋಕಿಲೆ ವರವಿ, ವೀರಭದ್ರ ತಳವರಗೇರಾ, ಪರಶುರಾಮ್ ರಾಜಾಪುರ, ಬಸವರಾಜ್ ಬೊಮ್ಮನಹಳ್ಳಿ, ಮಲ್ಲಿಕಾರ್ಜುನ ತಳ್ಳಳ್ಳಿ ಕಾಳಿಂಗ ಕಲ್ಲದೇವನಹಳ್ಳಿ, ಹುಲಿಗೆಪ್ಪ ಬೈಲಕುಂಟೆ, ಮುತ್ತುರಾಜ್ ಹುಲಿಕೆರೆ, ಅಪ್ಪಾರಾಯ ಗವನಹಳ್ಳಿ ಇತರರು ಇದ್ದರು.