ಕಲಬುರಗಿ: ಹೊಸ ಬಜಾಜ್ ಶೋರೂಂ ಉದ್ಘಾಟನೆ
ಕಲಬುರಗಿ: ಹೊಸ ಬಜಾಜ್ ಶೋರೂಂ ಉದ್ಘಾಟನೆ
ನಗರದ ಸೆಂಟ್ರಲ್ ಬಸ್‌ಸ್ಟ್ಯಾಂಡ್ ಹತ್ತಿರ ಸ್ಥಾಪಿತಗೊಂಡಿರುವ ನೂತನ ಶ್ರೀ ಕಲ್ಯಾಣ ಬಜಾಜ್ ಶೋರೂಂನ್ನು ರಾಜ್ಯದ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರು ಶನಿವಾರ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ವಾಹನ ಮಾರುಕಟ್ಟೆ ವೇಗವಾಗಿ ವಿಸ್ತಾರವಾಗುತ್ತಿದ್ದು, ಹೊಸ ಶೋರೂಂ ತೆರೆಯುವುದರಿಂದ ಸಾರ್ವಜನಿಕರಿಗೆ ಗುಣಮಟ್ಟದ ವಾಹನಗಳು ಹಾಗೂ ಉತ್ತಮ ಸೇವೆಗಳು ಲಭ್ಯವಾಗಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮೇಯರ್ ವರ್ಷಾ ರಾಜೀವ ಜಾನೆ, ಶೋರೂಂ ಮಾಲಕರಾದ ಅರುಣ ವ್ಹೀ. ಭಟ್, ಸತ್ಯನಾಥ ಶೆಟ್ಟಿ, ವಿದ್ಯಾಧರ ಭಟ್ ಸೇರಿದಂತೆ ಶೋರೂಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
