ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ

ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ

ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ

ಕಮಲನಗರ: ತಾಲೂಕಿನ ಸೋನಾಳ ಗ್ರಾಮ ಪಂಚಾಯತನಲ್ಲಿ 2024-25 ಸಾಲಿನ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆ ನಡೆಯಲಾಗಿತು. 

 ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಬಾಬುರಾವ್ ಸಂಗಮಕರ ಇವರು ಸ್ವಾಗತಿಸಿದರು.

ಗ್ರಾಮಸಭೆಯನ್ನು ಹಿರಿಯನಾಗರಿಕರಾದ ಶ್ರೀ ವಿಜಯಕುಮಾರ್ ಶರಣಪ್ಪಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಈ ಸಭೆಯಲ್ಲಿ ಶ್ರೀ ಆನಂದ ಎಸ್‌ ಹೆಚ್ ಇವರು ನರೇಗಾ ಯೋಜನೆಯಡಿ ಅನೇಕ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು. ದನದ ಕೊಟ್ಟಿಗೆ, ಕುರಿ, ಕೋಳಿ, ಹಂದಿ ಶೆಡ್ ನಿರ್ಮಾಣದ ಜೊತೆಗೆ ತೆರೆದ ಬಾವಿ, ಕ್ಷೇತ್ರ ಬದು, ಕೃಷಿಹೊಂಡ ಸೇರಿದಂತೆ ಅನೇಕಾ ಕಾಮಗಾರಿಗಳಿವೆ. ಈ ಎಲ್ಲ ಕಾಮಗಾರಿಗಳಿಗೆ ಸಹಾಯಧನ ಸಿಗುತ್ತದೆ. ಈ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಿ ಹಾಗೂ

ಸಾಮಾಜಿಕ ಪರಿಶೊಧನೆ ಯಾಗಿದೆ ಇಲಾಖೆವಾರು ಸಹ ಕಾಮಗಾರಿಗಳನ್ನು ಓದಿ ಹೇಳಿದರು.

ನಮ್ಮ ಹಣ ನಮ್ಮ ಹಕ್ಕು ನಮ್ಮ ಹೊಣೆಗಾರಿಕೆ ನರೇಗಾ ಯೋಜನೆಯಲ್ಲಿ ಮತ್ತು 15 ನೇ ಹಣಕಾಸು ಆಯೋಗದ ಬಗ್ಗೆ ವಿವರವಾಗಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಆನಂದ ಎಸ್ ಎಚ್ ನುಡಿದರು.

ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ದೀರ್ಘಕಾಲಿಕ ಬಾಳಿಕೆ ಬರುವಂತಹ ಕಾಮಗಾರಿಗಳನ್ನು ಮಾಡಿಕೊಳ್ಳಿ ಎಂದು ವರದಿ ಮಂಡಿಸಿದರು.

ಸಭೆಯಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ ಅದ್ಯಕ್ಷರು, ಸದಸ್ಯರು, ಟಿಎ ಶ್ರೀಮತಿ ಸಂಗೀತಾ ಬಿರಾದರ, ಕಾರ್ಯದರ್ಶಿ , ಗ್ರಾಮದ ಗ್ರಾಮಸ್ಥರು ಮತ್ತು ಹಿರಿಯ ನಾಗರಿಕರು, ಗ್ರಾಮದ ಸಂಪನ್ಮೂಲ ವ್ಯಕ್ತಿಗಳು ಹಾಜರಿದು ಗ್ರಾಮಸ್ಥರು ಉಪಸ್ಥಿತಿಯಲ್ಲಿದ್ದರು.

 ಸೋನಾಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಬಾಬುರಾವ್ ಸಂಗಮಕರ ‌ವಂದಿಸಿದರು.