ಹೈದರ ಅಲಿ ಚೌಕ್ನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಭಕ್ತಿ ಭಾವದಿಂದ ಆಚರಣೆ

ಹೈದರ ಅಲಿ ಚೌಕ್ನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಭಕ್ತಿ ಭಾವದಿಂದ ಆಚರಣೆ

ಹೈದರ ಅಲಿ ಚೌಕ್ನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಭಕ್ತಿ ಭಾವದಿಂದ ಆಚರಣೆ 

ಆಳಂದ: ಪಟ್ಟಣದ ಹೈದರ ಅಲಿ ಚೌಕ್ನಲ್ಲಿ ಟಿಪ್ಪು ಸುಲ್ತಾನ್ ಅವರ 275ನೇ ಜಯಂತಿಯನ್ನು ಟಿಪ್ಪು ಸುಲ್ತಾನ್ ಜಯಂತಿ ಆಚರಣಾ ಸಮಿತಿ ವತಿಯಿಂದ ಗುರುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಸಾಮಾಜಿಕ ಕಾರ್ಯಕರ್ತ ದಿಲೀಪ ಕ್ಷೀರಸಾಗರ ಮಾತನಾಡಿ, “ಟಿಪ್ಪು ಸುಲ್ತಾನ್ ಭಾರತದ ಮಣ್ಣಿನ ಮಗ. ಬ್ರಿಟಿಷರ ವಿರುದ್ಧ ಎದೆಗೊಂಡು ನಿಂತ ಮೊದಲ ಸ್ವಾತಂತ್ರ‍್ಯ ಸೈನಿಕ. ಆಧುನಿಕ ರಾಕೆಟ್ ತಂತ್ರಜ್ಞಾನದ ಪಿತಾಮಹ, ರೇಷ್ಮೆ ಉದ್ಯಮದ ಪ್ರವರ್ತಕ, ರೈತರ ಹಿತೈಷಿ, ಧರ್ಮನಿರಪೇಕ್ಷತೆಯ ದೀಪಸ್ತಂಭ. ಇಂದು ಕೆಲವರು ರಾಜಕೀಯ ಲಾಭಕ್ಕಾಗಿ ಟಿಪ್ಪುವನ್ನು ದ್ವೇಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಆಳಂದದ ಜನತೆ ಟಿಪ್ಪುವನ್ನು ಮನಸಾರೆ ಪ್ರೀತಿಸುತ್ತಾರೆ. ಹೈದರ ಅಲಿ ಮತ್ತು ಟಿಪ್ಪು ಸುಲ್ತಾನ್ ಆಳಂದಕ್ಕೆ ಕೊಟ್ಟ ಕೊಡುಗೆಗಳನ್ನು ಯಾರೂ ಮರೆಯಲಾರರು. ಈ ಚೌಕ ಇಂದಿಗೂ ಆ ನೆನಪನ್ನು ಜೀವಂತವಾಗಿಟ್ಟಿದೆ. ಟಿಪ್ಪುವಿನ ಆದರ್ಶಗಳಾದ ಧೈರ್ಯ, ನ್ಯಾಯ, ಸಾಮರಸ್ಯ ಇದನ್ನು ನಾವು ಎಲ್ಲಾ ಯುವಕರು ಎತ್ತಿಹಿಡಿಯಬೇಕು. ಟಿಪ್ಪು ಜೀವಂತವಾಗಿರುವ ತನಕ ಆಳಂದದಲ್ಲಿ ಒಡೆದಾಡಿಸುವ ಶಕ್ತಿಗಳು ಯಶಸ್ವಿಯಾಗುವುದಿಲ್ಲ ಎಂದು ನಾನು ದೃಢವಾಗಿ ಹೇಳುತ್ತೇವೆ ಎಂದು ಅವರು ಹೇಳಿದರು. 

ಕಾರ್ಯಕ್ರಮವನ್ನು ಸಮಿತಿಯ ಅಧ್ಯಕ್ಷ ಸೈಯದ್ ಯೂನುಸ್ ಖಾಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಮದ ಇಸ್ಮಾಯಿಲ ಪಟೇಲ, ಕಾರ್ಯದರ್ಶಿ ಲಾಡ್ಲೆಸಾಬ ಚೌಸ್, ಉಪಾಧ್ಯಕ್ಷ ಅಬ್ದುಲ ಖಾದರ್, ಪ್ರಧಾನ ಕಾರ್ಯದರ್ಶಿ ತಾಹೇರ್ ಚಿಂಚೋಳಿ, ಅಲ್ತಾಫ್ ಶೇಖ, ಅಬ್ದುಲ್ ಹಮೀದ್ ಶೇಖ, ಹುಮಾಯತ್ ಜಮಾದಾರ, ನಬಿಸಾಬ ಜಮಾದಾರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು ಹಾಗೂ ಸಾಮೂಹಿಕವಾಗಿ ಟಿಪ್ಪು ಜಿಂದಾಬಾದ್ ಘೋಷಣೆಗಳು ಮೊಳಗಿದವು

.