ಬೆಳೆ ಪರಿಹಾರದಲ್ಲಿ ತಾರತಮ್ಯ ಬೇಡ - ಶರಣಬಸಪ್ಪ ಹೊಸೂರ

ಬೆಳೆ ಪರಿಹಾರದಲ್ಲಿ ತಾರತಮ್ಯ ಬೇಡ - ಶರಣಬಸಪ್ಪ ಹೊಸೂರ

ಬೆಳೆ ಪರಿಹಾರದಲ್ಲಿ ತಾರತಮ್ಯ ಬೇಡ - ಶರಣಬಸಪ್ಪ ಹೊಸೂರ

ಶಹಾಪುರ : ಇತ್ತೀಚಿಗೆ ಸುರಿದ ಧಾರಾಕಾರ ಮಳೆಯಿಂದ ರೈತ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದ್ದು,ಸರಕಾರ ಈಗಾಗಲೇ ಪರಿಹಾರ ಘೋಷಣೆ ಮಾಡಿದೆ,ಬೆಳೆ ಪರಿಹಾರ ನೀಡುವ ವಿಷಯದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದು ಶರಣಬಸಪ್ಪ ಹೊಸೂರು ಎಚ್ಚರಿಕೆ ನೀಡಿದ್ದಾರೆ

ರೈತ ಬೆಳೆದ ಬೆಳೆ ನೀರಲ್ಲಿ ನಿಂತು ಸಂಪೂರ್ಣ ಹಾಳಾಗಿ ಹೋಗಿದೆ,ರೈತನ ಬದುಕು ದುಷ್ಥಿತಿಗೆ ತಲುಪಿದೆ,ಅಲ್ಲದೆ ಮಳೆಯಿಂದ ಬೆಳೆ ಮತ್ತು ಮನೆ ಕಳೆದುಕೊಂಡ ಕುಟುಂಬಗಳಿಗೆ ಸಮಾನವಾಗಿ ಪರಿಗಣಿಸಿ ಎಲ್ಲರಿಗೂ ಸೂಕ್ತ ಪರಿವಾರ ಪರಿಹಾರವನ್ನು ಒದಗಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶ ಕೊಡದೆ,ಪಾರದರ್ಶಕತಿಯಿಂದ ನಡೆಯಬೇಕು,ಜೊತೆಗೆ ಪ್ರಾಣ ಹಾಗೂ ಮನೆ,ಬೆಳೆ,ಕಳೆದುಕೊಂಡ ವ್ಯಕ್ತಿಯ ಜಾತಿ,ಧರ್ಮ,ಹಿನ್ನೆಲೆ ಸ್ಥಾನಮಾನಗಳನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನ ಪರಿಹಾರ ಒದಗಿಸಬೇಕು ಎಂಬುದೇ ನಮ್ಮ ಒತ್ತಾಸೆಯಾಗಿದೆ ಎಂದರು.