ರಾಜ್ಯ ಬಜೆಟ್ ಕಣ್ಣೋರೆಸುವ ಬಜೆಟ್ ಆಗದೆ ಜಾರಿಗೆ ಬರಲಿ:ಸಿರಗಾಪೂರ ಆಗ್ರಹ

ರಾಜ್ಯ ಬಜೆಟ್ ಕಣ್ಣೋರೆಸುವ ಬಜೆಟ್ ಆಗದೆ ಜಾರಿಗೆ ಬರಲಿ:ಸಿರಗಾಪೂರ ಆಗ್ರಹ
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನಲ್ಲಿ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ರೈತರ ಕಲ್ಯಾಣಕ್ಕಾಗಿ 50 ಸಾವಿರ ಸಹಾಯಧನ, ರೈತರ ಸಂಕಷ್ಟ ನಿವಾರಣೆಗೆ ಅನುಗ್ರಹ ಯೋಜನೆ ಜಾರಿ,ಕಲಬುರ್ಗಿಯಲ್ಲಿ ನಿಮ್ಮಾನ್ಸ್ ಆಸ್ಪತ್ರೆ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿರುವುದು ಸಮಾಧಾನ.ಆದರೆ ಈ ಬಾರಿಯೂ ತೊಗರಿ ಅಭಿವೃದ್ಧಿ ಮಂಡಳಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಏತ ನೀರಾವರಿ ಯೋಜನೆಗಳನ್ನು ಪುನಃಶ್ಚೇತನ ಗೊಳಿಸುವುದು ಹಾಗೂ ಕೆರೆಗಳನ್ನು ತುಂಬಿಸುವ ಘೋಷಣೆ ಮಾಡಿಲ್ಲ. ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗಳ ಪುನಃಶ್ಚೇತನದ ಕುರಿತು ಪ್ರಸ್ತಾಪಿಸದೇ ಇರುವುದು ಅಸಮಾಧಾನ ಮೂಡಿಸಿದೆ. ಪ್ರಾದೇಶಿಕ ಅಸಮತೋಲನ ಹೊಗಲಾಡಿಸಲು 371 ಜೇ ಕಲಂ ಜಾರಿಗೆ ಬಂದಿದೆ.ಆದರೆ ಇದು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ.ಇದರ ಸಂಪೂರ್ಣ ಲಾಭ ಇನ್ನು ಸಿಕ್ಕಿಲ್ಲ.ಇಲ್ಲಿಯ ಜನರಿಗೆ ಸವಲತ್ತುಗಳು ಸಿಗುತ್ತಿಲ್ಲ.ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಕಚೇರಿ ಇನ್ನು ಅಸ್ತಿತ್ವಕ್ಕೆ ಬಂದಿಲ್ಲ.371ನೇ ಜೇ ಕಲಂ ಕೇವಲ ರಾಜಕೀಯ ಲಾಭ ಪಡೆಯಲಷ್ಟೇ ಸೀಮಿತವಾಗಿದೆ.
.ಸಮರ್ಪಕ ಜಾರಿಗೆಗಾಗಿ ಅನೇಕ ಬಾರಿ ಪ್ರತಿಭಟನೆ ನಡೆಸಿದರು ಮುಖ್ಯಮಂತ್ರಿಗಳು ಕ್ಯಾರೇ ಅನ್ನುತ್ತಿಲ್ಲ.ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಗುತ್ತಿರುವ ಯೋಜನೆಗಳು ಉತ್ತರ ಕರ್ನಾಟಕದವರ ಪಾಲಾಗುತ್ತಿರುವುದು ನೋಡಿದರೆ ಮುಖ್ಯಮಂತ್ರಿಗಳು ನಮ್ಮ ಭಾಗಕ್ಕೆ ಮತ್ತೋಮ್ಮೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಅನೇಕ ಭರವಸೆಗಳನ್ನು ನೀಡಿದ್ದರು.ನಂತರ ದಿನಗಳಲ್ಲಿ ಕೇವಲ ಸುಳ್ಳು ಭರವಸೆಯಾಗಿ ಉಳಿದಿದ್ದು ಇಲ್ಲಿನ ಜನರಿಗೆ ನಿರಾಸೆ ಮೂಡಿಸಿದೆ.ಈ ಬಾರಿಯಾದರೂ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಕೊಡುಗೆಗಳನ್ನು ನೀಡಬಹುದು ಎಂಬ ಊಹೆ ಹುಸಿಯಾಗಿದೆ.ಅತಿವೃಷ್ಟಿಯಿಂದ ರೈತರ ಬೆಳೆಗಳು ನಷ್ಟವಾಗಿದೆ.ನೆಟೆ ರೋಗಕ್ಕೆ ತುತ್ತಾಗಿ ಹಾಳಾಗಿರುವ ತೊಗರಿಗೆ ಪರಿಹಾರ ನೀಡುವ ಕುರಿತು ಬಜೆಟ್ ನಲ್ಲಿ ಪ್ರಸ್ತಾಪ ಆಗಿಲ್ಲ.ಕೂಡಲೇ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು.ಬಜೆಟ್ ನಲ್ಲಿನ ಘೋಷಣೆ ಜಾರಿಗೆ ಬರಬೇಕು ಎಂದು ಅವರು ತಿಳಿಸಿದ್ದಾರೆ
.