ಗಾಂಧೀಜಿಯವರ ಕನಸು ನನಸಾಗಬೇಕಾದರೆ ಗ್ರಾಮ ಸ್ವರಾಜ ಅವಶ್ಯಕತೆಯಿದೆ: ರೈತ ಮುಖಂಡ ದಯಾನಂದ ಪಾಟೀಲರ ಅಶಯ"

ಗಾಂಧೀಜಿಯವರ ಕನಸು ನನಸಾಗಬೇಕಾದರೆ ಗ್ರಾಮ ಸ್ವರಾಜ ಅವಶ್ಯಕತೆಯಿದೆ: ರೈತ ಮುಖಂಡ ದಯಾನಂದ ಪಾಟೀಲರ ಅಶಯ"

ಗಾಂಧೀಜಿಯವರ ಕನಸು ನನಸಾಗಬೇಕಾದರೆ ಗ್ರಾಮ ಸ್ವರಾಜ ಅವಶ್ಯಕತೆಯಿದೆ: ರೈತ ಮುಖಂಡ ದಯಾನಂದ ಪಾಟೀಲರ ಅಶಯ"

ಆಳಂದ್ ತಾಲೂಕಿನ ಖಜೂರಿ ಗ್ರಾಮದಲ್ಲಿ ಅ.೨ ರಂದು ಗಾಂಧಿ ಜಯಂತಿ ಅಂಗವಾಗಿ ಗ್ರಾಮ ಸ್ವರಾಜ್ ಕ್ರಿಯಾ ಅಭಿಯಾನ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು

 ಮಹಾತ್ಮ ಗಾಂಧೀಜಿ ಅವರ ಇಚ್ಛೆಯಂತೆ ಗ್ರಾಮ ಸ್ವರಾಜ್ ಸಂಪೂರ್ಣ ಅನುಷ್ಠಾನ ವಾಗಲಿ ಗ್ರಾಮ ಪಂಚಾಯಿತಿಗಳು ರಾಜ್ಯ ಸರ್ಕಾರದಂತೆ ಕಾರ್ಯನಿರ್ವಹಿಸಲಿ. ಅಧ್ಯಕ್ಷರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮದ ಮುಖಂಡರ ಸಲಹೆ ಸೂಚನೆ ಮೇರೆಗೆ ಗ್ರಾಮಗಳ ಸಂಪೂರ್ಣ ಅಭಿವೃದ್ಧಿಗೆ ಮುಂದಾಗಬೇಕು. ಗ್ರಾಮಕ್ಕೆ ಬೇಕಾಗುವ ಮೂಲ ಸೌಕರ್ಯ ಗ್ರಂಥಾಲಯ ,ಗ್ರಾಮ ಸ್ವಚ್ಛತೆ, ಕುಡಿಯುವ ನೀರು ಸರಬರಾಜು ಆರೋಗ್ಯ ಶಿಕ್ಷಣ ಬಡವರಿಗೆ ಮನೆ ನಿರ್ಮಾಣ ಮೊದಲಾದ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರದ ಹತ್ತಾರು ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಮಾಡುವ ಮೂಲಕ ಕೇಂದ್ರ ರಾಜ್ಯ ಸರ್ಕಾರಗಳಂತೆ ಗ್ರಾಮ ಪಂಚಾಯಿತಿಯು ಕೆಲಸ ಮಾಡಿ ಗಾಂಧಿಜೀ ಯವರ ಕಂಡ ಗ್ರಾಮ ಸ್ವರಾಜ್ ಅಭಿವೃದ್ಧಿಗೆ ಮುಂದಾದಾಗ ಮಹಾತ್ಮ ಗಾಂಧೀಜಿ ಅವರ ಇಚ್ಛೆಯಂತೆ ಹಳ್ಳಿ ಹಳ್ಳಿಗಳಲ್ಲಿ ನವ ಕರ್ನಾಟಕ ರೈತ ಸಂಘ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದೇವೆ.

ಇಂದು ಮಹಾತ್ಮ ಗಾಂಧಿಯವರ 155 ನೇ ಜನ್ಮದಿನದ ನಿಮಿತ್ತ ಗಾಂಧೀಜಿ ಕಂಡು ಕನಸು ನನಸಾಗಲು ರೈತ ಸಂಘವು ಬ್ರಹತ್ ಗ್ರಾಮ ಸ್ವರಾಜ್ಯ ಪರಿಪೂರ್ಣ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ವೈಜನಾಥ ತಡಕಲ್, ರಾಜಶೇಖರ್ ಹರಿಹರ,ಭಿಮರಾವ ಢಗೆ, ಅಶೋಕ್ ಸವಳೇಶ್ವರ್, ಸಂಜು ಕುಮಾರ್, ಶ್ರೀಮಂತ, ಗ್ರಾಮದ ಹಿರಿಯರು ರೈತ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾದರು.