ಬೆಳಗಾವಿ ಅಧಿವೇಶನದಲ್ಲಿ ಚಿಂಚೋಳಿ ರೈತರ ನೀರಾವರಿ ಮತ್ತು ಕ್ಷಿಣಿಸುತ್ತಿರುವ ಶೈಕ್ಷಣಿಕ ಅಭಿವೃದ್ಧಿಗೆ ಧ್ವನಿ ಮೊಳಗಿಸಿದ್ದ ಶಾಸಕ ಡಾ. ಅವಿನಾಶ ಜಾಧವ ಸಮರ್ಪಕ ನೀರಾವರಿಗಾಗಿ ಸಮಿತಿ ರಚನೆಗೆ ಒತ್ತಾಯ

ಬೆಳಗಾವಿ ಅಧಿವೇಶನದಲ್ಲಿ ಚಿಂಚೋಳಿ ರೈತರ ನೀರಾವರಿ ಮತ್ತು ಕ್ಷಿಣಿಸುತ್ತಿರುವ ಶೈಕ್ಷಣಿಕ ಅಭಿವೃದ್ಧಿಗೆ ಧ್ವನಿ ಮೊಳಗಿಸಿದ್ದ ಶಾಸಕ ಡಾ. ಅವಿನಾಶ ಜಾಧವ  ಸಮರ್ಪಕ ನೀರಾವರಿಗಾಗಿ ಸಮಿತಿ ರಚನೆಗೆ ಒತ್ತಾಯ

ಬೆಳಗಾವಿ ಅಧಿವೇಶನದಲ್ಲಿ ಚಿಂಚೋಳಿ ರೈತರ ನೀರಾವರಿ ಮತ್ತು ಕ್ಷಿಣಿಸುತ್ತಿರುವ ಶೈಕ್ಷಣಿಕ ಅಭಿವೃದ್ಧಿಗೆ ಧ್ವನಿ ಮೊಳಗಿಸಿದ್ದ ಶಾಸಕ ಡಾ. ಅವಿನಾಶ ಜಾಧವ 

ಸಮರ್ಪಕ ನೀರಾವರಿಗಾಗಿ ಸಮಿತಿ ರಚನೆಗೆ ಒತ್ತಾಯ 

ಚಿಂಚೋಳಿ : ಕಲಬುರಗಿ, ಯಾದಗೀರ, ಬೀದರ ಜಿಲ್ಲೆಗಳಿಂದ ಒಟ್ಟು 11 ಜಲಾಶಯಗಳಾದ ಲೋವರ್ ಮುಲ್ಲಾಮಾರಿ, ಚಂದ್ರಂಪಳ್ಳಿ, ಡಂದೋಡರಾ ನಾಲಾ, ಅಮರ್ಜಾ, ಬೆಣ್ಣೆತೋರಾ, ಭೀಮಾ ಲಿಫ್ಟ್ ಏರಿಗೇಶನ ಡ್ಯಾಂ ಗಳು ಶೇ. 90 ರಷ್ಟು ಭರ್ತಿಯಾದರು ಕೂಡ ಈ ಭಾಗದ ರೈತರಿಗೆ ಸಮರ್ಪಕವಾಗಿ ನೀರುಸಿಗದೇ ಇರುವುದಕ್ಕೆ ಕಾರಣವೇನು ಎಂದು ಶಾಸಕ ಡಾ. ಅವಿನಾಶ ಜಾಧವ ಅವರು ಬೆಳಗಾವಿ ಅಧಿವೇಶನದಲ್ಲಿ ಸರಕಾರಕ್ಕೆ ಪ್ರಶ್ನಿಸಿದ್ದಾರೆ. 

ಈ ಭಾಗದ ಒಂದು ಲಕ್ಷ ಆರುವತ್ತೇಳು ಸಾವಿರ ರೈತರಿಗೆ ನೀರಾವರಿ ಸೌಲಭ್ಯ ಸಿಗಬೇಕಾಗಿತ್ತು. ಆದರೆ ಸಿಗುತ್ತಿಲ್ಲ. ಸರಕಾರ ಸಮಿತಿ ರಚಿಸಿ ಪರಿಶೀಲನೆ ಮಾಡಿಸಿ ಕಾರಣಕಂಡುಕೊಂಡು ರೈತರಿಗೆ ನೀರಾವರಿ ಸೌಲಭ್ಯ ಪಡೆದುಕೊಳ್ಳುವಂತೆ ಕ್ರಮವಹಿಸಬೇಕೆಂದು ಮುಖ್ಯಮಂತ್ರಿಗಳಿಗೆ ಶಾಸಕ ಡಾ. ಅವಿನಾಶ ಜಾಧವ ಅಧಿವೇಶನದಲ್ಲಿ ಮಾತನಾಡಿ ಒತ್ತಾಯಿಸಿದರು. ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಸೇರಿ 313 ಶಾಲೆಗಳಿವೆ. ಬೋಧನೆಗೆ 1151 ಶಿಕ್ಷಕರ ಬೇಡಿಕೆ ಇದೆ. ಕೊಟ್ಟಿದ್ದು ಕೆವಲ 674 ಬೋಧಕ ಶಿಕ್ಷಕರಿಗೆ ನೀಡಿದೆ. ಇನ್ನೂ ಕೆಲವು ಶಾಲೆಗಳಲ್ಲಿ ಇಂಗ್ಲೀಷ್, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕರ ಕೊರತೆ ಇದ್ದು, ಹಿಂದುಳಿದ ತಾಲೂಕ ಹಣೆ ಪಟ್ಟಿ ಪಡೆದಿರುವ ಚಿಂಚೋಳಿ ತಾಲೂಕಿನ ಉತ್ತಮ್ಮ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರ ನೇಮಕ ಮಾಡಿಕೊಂಡು ಕ್ರಮವಹಿಸಬೇಕಾಗಿದೆ. ಚಿಂಚೋಳಿಯಲ್ಲಿ ಪ್ರವಾಸಿತಾಣವಾಗುವ ಎಲ್ಲಾ ಉತ್ತಮ ಪರಿಸರ ಅರಣ್ಯ ಸಂಪನ್ಮೂಲವಿದ್ದು, ಪ್ರವಾಸಿತಾಣವನ್ನಾಗಿ ಮಾಡಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.

ಪಟ್ಟಣದ ನ್ಯಾಯಾಲಯವು ನಿಜಾಮ್ ಕಾಲದ ನಿರ್ಮಾಣಗೊಂಡ ಕಟ್ಟಡವಾಗಿದ್ದರಿಂದ ನ್ಯಾಯಾಲಯದ ಮೇಲ್ಚಾವಣಿ ಸೊರುತ್ತಿವೆ. ಇದ್ದರಿಂದ ನ್ಯಾಯಾವಾದಿಗಳು ಭಯದಲ್ಲಿಯೇ ವಾದಿಸುವಂತಾಗಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಕಳೆದ ಕಲಬುರಗಿ ಸಚಿವ ಸಂಪುಟದಲ್ಲಿಯೂ ಮನವಿಗೆ ಆಶ್ವಾಸನೆ ನೀಡಲಾಗಿತು. ಶೀಘ್ರದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರ ಕ್ರಮವಹಿಸಬೇಕೆಂದು ಮನವಿ ಮಾಡಿದರು.