ಸೇಡಂ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

ಸೇಡಂ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

ಸೇಡಂ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ 

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚರಿಕೆ ಕ್ರಮಕೈಗೊಳ್ಳುವ ಬಗ್ಗೆ ಚರ್ಚೆ

ಸಭೆಯಲ್ಲಿ ಗ್ರಾಮ ಪಂಚಾಯತಿ ಪಿಡಿಓಗಳು ಭಾಗಿ 

ಚಿಂಚೋಳಿ : 

ಕುಡಿಯುವ ನೀರಿನ ಮತ್ತು ಬಿಸಿಗಾಳಿ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆಗಳ ಕುರಿತು ಮುಂಜಾಗ್ರತೆ ಕ್ರಮ ಕೈಗೊಳಲು ಚಿಂಚೋಳಿ ತಹಸೀಲ್ ಕಾರ್ಯಾಲಯದಲ್ಲಿ ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ಅವರ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆಸಲಾಯಿತು. 

ಬೆಸಿಗೆ ಪ್ರಾರಂಭವಾದ ಹಿನ್ನಲೆಯಲ್ಲಿ ತಾಲೂಕಿನ ಗ್ರಾಮ ಮತ್ತು ತಾಂಡಾಗಳಲ್ಲಿ ಜನರಿಗೆ ಯಾವುದೇ ರೀತಿ ಕುಡಿಯುವ ನೀರಿನ ಮತ್ತು ಪಶುಗಳಿಗೆ ಮೇವಿನ ಸಮಸ್ಯೆಗಳು ಉದ್ಭವಿಸದಂತೆ ಸಂಭಂದಪಟ್ಟ ಅಧಿಕಾರಿಗಳು ತಯಾರಿ ನಡೆಸಿಕೊಳ್ಳಬೇಕೆಂದು ಆಯುಕ್ತರು ತಿಳಿಸಿದರು. 

ಕಳೆದ ವರ್ಷದಂತೆ ಈ ವರ್ಷ ಕುಡಿಯುವ ನೀರಿನ ಸಮಸ್ಯೆ ಇನ್ನೂ ಉದ್ಭವಗೊಂಡಿಲ್ಲ. ತಾಂಡಾ ಮತ್ತು ಗ್ರಾಮಗಳು ಸೇರಿ ಒಟ್ಟು 14 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಗುರುತಿಸಲಾಗಿದೆ ಎಂದು ಸಭೆಗೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಮುಖ್ಯ ಅಧಿಕಾರಿ ಚಂದುಲಾಲ್ ರಾಠೋಡ ತಿಳಿಸಿದರು. ಸ ಟಾಸ್ಕ್ ಫೋರ್ಸ್ ಸಮಿತಿಗೆ ರಕಾರದಿಂದ ಅನುದಾನ ಬಂದಿಲ್ಲ. ಅನುದಾನದ ಬರುವುದನ್ನು ಕಾಯದೆ ಮುನ್ನೆಚರಿಕೆ ಕ್ರಮವಾಗಿ ಕುಡಿಯುವ ನೀರಿನ ಸಮಸ್ಯೆಗಳು ಕಂಡಬಂದಲ್ಲಿ ಪರಿಯಾಯ ವ್ಯವಸ್ಥೆಯಾಗಿ ಸಮೀಪದಲ್ಲಿರುವ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರು ಪೂರೈಕೆ ಮಾಡುವ ಕ್ರಮ ಅಧಿಕಾರಿಗಳು ಕೈಗೊಳಬೇಕು. ತಪ್ಪಿದಲ್ಲಿ ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾಗುತ್ತಿರಿ ಎಂದು ಎಚ್ಚರಿಸಿದರು.   

ಸಭೆಯಲ್ಲಿ ಗ್ರೇಡ್ 1 ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಇಓ ಶಂಕರ ರಾಠೋಡ, ಗ್ರೇಡ್ -2 ವೆಂಕಟೇಶ ದುಗ್ಗನ್, ಪುರಸಭೆ ಮುಖ್ಯ ಅಧಿಕಾರಿ ಕಾಶಿನ್ನಾಥ ಧನ್ನಿ, ಡಿವೈ ಎಸ್ ಪಿ ಸಂಗಮನಾಥ ಹಿರೇಮಠ್, ಸಿಪಿಐ ಕಪಿಲದೇವ, ಬಿಇಓ ವಿ. ಲಕ್ಷ್ಮಯ್ಯ, ಟಿಎಚ್ ಓ ಡಾ. ಗಫಾರ್, ಚಂದುಲಾಲ್ ರಾಠೋಡ್, ಬಸವರಾಜ ಬೈನೂರ್, ಕೃಷಿ ಅಧಿಕಾರಿ ವೀರಶೆಟ್ಟಿ ರಾಠೋಡ, ಗಿರಿರಾಜ ಸಜ್ಜನ, ಪಿಡಿಓ ಗೋವಿಂದರೆಡ್ಡಿ, ರಾಮಕೃಷ್ಣ ಕೋರಡಂಪಳ್ಳಿ,ವೀರಣ್ಣ, ದಶರಥ ಪಾತ್ರೆ, ಸುನೀಲ್, ಶಾಂತಪ್ಪ, ವಾಹೇದ್ ಅಲಿ, ಮೀನಾಕ್ಷಿ ಸುಲೇಪೇಟ, ಕಂದಾಯ ನಿರೀಕ್ಷಕ ರವಿ ಚಿಟ್ಟಾ ಸೇರಿದಂತೆ ವಸತಿ ನಿಲಯ ಹಾಗೂ ಪಶು ಅಧಿಕಾರಿಗಳು ಉಪಸ್ಥಿತರಿದರು. 

ಅಕ್ರಮ ಮರಳು ಮತ್ತು ಕಲ್ಲುಗಣಿಗಾರಿಕೆ ತಡೆಗೆ ಟಾಸ್ಕ್ ಪೋರ್ಸ್ ಸಭೆ : 

ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಮರಳು ದಂಧೆಯ ಕಾರ್ಯ ಚಟುವಿಟಕೆಗಳಿಗೆ ಬ್ರೇಕ್ ಹಾಕಲು ಗಣಿ ಮತ್ತು ಭೂ ವಿಜ್ಞಾನಿ, ಪ್ರಾದೇಶಿಕ ಸಾರಿಗೆ ಇಲಾಖೆ, ಜೇಸ್ಕಾಂ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಟಾಸ್ಕ್ ಫೋರ್ಸ್ ಸಭೆ ನಡೆಸಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ ನಿಯಮಕ್ಕಿಂತ ಅತ್ಯಾಧಿಕ ಭಾರ ತುಂಬಿಕೊಂಡು ವಾಹನಗಳು ರಸ್ತೆ ಮೇಲೆ ಸಾಗುತ್ತಿವೆ ಮತ್ತು ನಂಬರ ಪ್ಲೇಟ್ ಇಲ್ಲದ ವಾಹನಗಳಿಗೆ ಬ್ರೇಕ್ ಹಾಕುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿದರು. 

ತಾಲೂಕಿನ ಮಿರಿಯಾಣ ಕಲ್ಲುಗಣಿಗಾರಿಕೆಗಳಲ್ಲಿ ಶಹಾಬಾದ್ ಶಿಲೆಯ ಅಕ್ರಮ ಗಣಿಗಾರಿ ನಡೆಸುತ್ತಿರುವ ಕಾರಣಕ್ಕೆ 16 ಖಾಸಿಗಿ ದೂರು ದಾಖಲಿಸಲಾಗಿದೆ ಎಂದು ಭೂವಿಜ್ಞಾನಿ ಅಧಿಕಾರಿ ಪ್ರವೀಣಕುಮಾರ ತಿಳಿಸಿದರು. ಮಿರಿಯಾಣ ಗಣಿಗಾರಿಕೆದಾರರು ಅಕ್ರಮವಾಗಿ ವಿದ್ಯುತ್ ಪಡೆದು ಅಕ್ರಮ ಗಣಿಗಾರಿಕೆ ನಡೆಸುತ್ತಿದವರ ಮೇಲೆ ಜೆಸ್ಕಾಂ ಜಾಗೃತ ದಳ ತಂಡ ದಾಳಿ ನಡೆಸಿ 20 ಟಿಸಿ ಜಪ್ತಿ ಮಾಡಲಾಗಿದ್ದು, ತನಿಖೆ ಕಾರ್ಯ ಮುಂದುವರೆಸಲಾಗಿದೆ ಎಂದು ಜೆಸ್ಕಾಂ ಎಇಇ ಕಾಮಣ್ಣ ಇಂಜಳ್ಳಿ ಸಭೆಗೆ ಮಾಹಿತಿ ನೀಡಿದರು. ಅಕ್ರಮ ಮರಳು, ಅಧಿಕ ಭಾರ ಹೊತ್ತುಕೊಂಡು ಸಾಗಟ ನಡೆಸುತ್ತಿರುವ 200 ವಾಹನಗಳನ್ನು ತಪಾಸಣೆ ಮಾಡಿ, 9 ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗಿದೆ ಎಂದು ಕ್ಷೇತ್ರ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದರು.