ದಿ. ಶುಕ್ಲ ಅವರಿಗೆ ನುಡಿ ನಮನ
ದಿ. ಶುಕ್ಲ ಅವರಿಗೆ ನುಡಿ ನಮನ
ಕಲಬುರಗಿ: ಹಿಂದಿ ಸಾಹಿತ್ಯ ಕ್ಷೇತ್ರದ ದಿಗ್ಗಜ ಲೇಖಕರು, 2024ರ 59ನೆಯ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿನೋದ ಕುಮಾರ ಶುಕ್ಲ ಅವರು ದಿನಾಂಕ 23.12.2025 ರಂದು ನಿಧನ ಹೊಂದಿದ ಪ್ರಯುಕ್ತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯ ಹಿಂದಿ ವಿಭಾಗದ ವತಿಯಿಂದ ಇಂದು ಬೆಳಿಗ್ಗೆ ಮಹಾವಿದ್ಯಾಲಯದಲ್ಲಿ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ರಾಜೇಂದ್ರ ಕೊಂಡಾ ಅವರು ವಹಿಸಿಕೊಂಡು ವಿನೋದ ಕುಮಾರ ಶುಕ್ಲ ಅವರ ವ್ಯಕ್ತಿತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನೂತನ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ದಯಾನಂದ ಶಾಸ್ತ್ರಿ ಅವರು ವಿನೋದ ಕುಮಾರ ಶುಕ್ಲ ಅವರ ಜೀವನ ಮತ್ತು ಸಾಹಿತ್ಯದ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಪ್ರೇಮಚಂದ ಚವ್ಹಾಣ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿನೋದ ಕುಮಾರ ಶುಕ್ಲ ಅವರ ಸಾಹಿತ್ಯಿಕ ಜೀವನದ ಪರಿಚಯವನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಕಾರ್ಯಕ್ರಮದ ನಿರೂಪಣೆ ಮತ್ತು ವಂದನೆಯನ್ನು ಹಿಂದಿ ವಿಭಾಗದ ಸುಷ್ಮಾ ಕುಲಕರ್ಣಿ ಅವರು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ರತ್ನಾ ಪ್ಯಾಟಿ, ಸಿದ್ದು ದೇವರಮನಿ, ಶರಣು ಗೋಲ್ಗೇರಿ, ವಿದ್ಯಾ ನಿಗೂಡಗಿ, ಸುನಂದಾ ಸ್ವಾದಿ, ಐಶ್ವರ್ಯಾ ಹಿರೇಮಠ, ಜಯಶ್ರೀ ಇಂಗಳೇಶ್ವರ ಮತ್ತು ಹಿಂದಿ ವಿಭಾಗದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
