ಕನಕದಾಸರು ಚರಿತ್ರೆ
ಕನಕದಾಸರು ಚರಿತ್ರೆ
ಲೇಖಕರು :-ಎಂ. ಜಿ. ಗಂಗನಪಳ್ಳಿ
ಪುಟ :-64
ಬೆಲೆ :-60ರೂಪಾಯಿ
ಪ್ರಕಾಶನ :-ಸಿರಿಗನ್ನಡ ಪ್ರಕಾಶನ
ಬೀದರ ಜಿಲ್ಲೆಯ ಖ್ಯಾತ ಸಾಹಿತಿಗಳಲ್ಲಿ ಒಬ್ಬರಾದ ಸಾಹಿತಿ ಶ್ರೀ ಎಂ. ಜಿ. ಗಂಗನಪಳ್ಳಿಯವರು ವೃತ್ತಿಯಲ್ಲಿ ಶಿಕ್ಷಕರಾದರೆ ಪ್ರವೃತ್ತಿಯಲ್ಲಿ ಉತ್ತಮ ಬರಹಗಾರರು ವಾಗ್ಮಿಗಳು ಅವರು ನೇರನುಡಿ ಮಾತನಾಡುವವರು.
ಶ್ರೀಯುತರು ನೆಲ ಜಲ ಶರಣ ಸಂಸ್ಕೃತಿ ಮತ್ತು ದಾಸರ ಚರಿತ್ರೆಗಳ ಮೂಲಕ ಓದುಗರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.
ಹೀಗಾಗಿ ಗಂಗನಪಳ್ಳಿಯವರು ಬರೆದ ಕನಕದಾಸರು (ಗದ್ಯ ಪದ್ಯ ಚುಟುಕು )ಸಂತರ ಚರಿತ್ರೆ ಕುರಿತು ವಿಮರ್ಶ .
ಗಂಗನಪಳ್ಳಿಯವರು ತಾವು ರಚಿಸಿದ ಕೃತಿಯಲ್ಲಿ ಕನಕದಾಸರ ಜೀವನ ಚರಿತ್ರೆ ಮತ್ತು ಅವರ ದಾಸರ ಪದಗಳ ಮೂಲಕ ಜನರಲ್ಲಿ ಭಕ್ತಿಯ ಪರಂಪರೆಯ ಅರಿವನ್ನು ಮೂಡಿಸುವ ಕುರಿತು ಬೆಳಕು ಚೆಲ್ಲಿರುವರಲ್ಲದೆ ಮನುಷ್ಯನ ನೆಮ್ಮದಿ ಬದುಕಿಗೆ ಅಧ್ಯಾತ್ಮದ ಮಹತ್ವವನ್ನು ಅರುಹಿದ್ದಾರೆ.
ಕುಲ ಕುಲವೆಂದು ನೀವು ಬಡಿದಾಡದಿರಿ
ಆತ್ಮ ಯಾವ ಕುಲವೆಂದು
ಎಲ್ಲರೊಳಗಿರುವ ಜೀವಾತ್ಮ ಒಂದೇ ಯಂದ ಮೇಲೆ
ಕುಲವೆನ್ನುವ ಬೇಧ ಎಲ್ಲಿಹದು
ಮಾನವ ಕುಲವೊಂದೇ ಅನ್ನುವ ಸಂದೇಶ ಸಾರಿರುವರು.
ಕನಕದಾಸರು ತಮ್ಮ ದಾಸಪದಗಳ ಮೂಲಕ ಮನುಷ್ಯ ನಲ್ಲಿ ತುಂಬಿರುವ ಸ್ವಾರ್ಥ ಕತ್ತಲೆಯನ್ನು ಸರಸಿ ನಿಸ್ವಾರ್ಥ ಪರೋಪಕಾರದ ಮಾರ್ಗದಲ್ಲಿ ನಡೆಯುವಂತೆ ಸೂಚಿಸಿದ್ದಾರೆ.
ಅದೇ ರೀತಿ ಎಂ. ಜಿ. ಗಂಗನಪಳ್ಳಿಯವರು ಅನೇಕ ತ್ರಿಪದಿಗಳಲ್ಲಿ ಕನಕದಾಸರನ್ನು ಹಾಡಿ ಹೊಗಳಿದ್ದಾರೆ.
""ಬಾಡ ಬಂಕಾಪುರದ ದೊರೆ ಬೀರಪ್ಪ
ತಿರುಪತಿ ತಿಮ್ಮಪ್ಪನಿಗೆ ಕೈ ಮುಗಿದು
ಕಂದನ ಕರುಣಿಸೋ ಎಂದಾನೋ""
ಅಂದರೆ ಕನಕದಾಸರ ತಂದೆಯವರು ಮಗನನ್ನು ಕರುಣಿಸಲು ದೇವರನ್ನು ಪ್ರಾರ್ಥನೆ ಮಾಡುವ ಪರಿಯನ್ನು ವಿವರಿಸಿದ್ದಾರೆ.
ಕನಕದಾಸರ ಹಾಡು
ಜನಪದರ ನುಡಿ ಮೆರಸಿ
ಕನ್ನಡ ಗುಡಿ ಮೆರಸಿ
ಅಧೀಕೇಶವನಿಗೆ ಭಜಿಸಿ
ಅಡಿಗಾಡಿಗೆ ಹೆಜ್ಜೆ ಹಾಕ್ಯಾರೋ
ಹೀಗೆ ದಾಸರ ಪದಗಳು ಜನ ನುಡಿಯಾಗಿ
ಕನ್ನಡ ಮಾತೆಗೆ ಅರ್ಪಿತವೆಂಬ ಭಾವನೆಯನ್ನು ಶ್ರೀಯುತರು ತಮ್ಮ ತ್ರಿಪದಿಗಳ ಮೂಲಕ ವ್ಯಕ್ತಪಡಿಸಿರುವರು.
ಶ್ರೀ ಗಂಗನಪಳ್ಳಿಯವರು ತಮ್ಮ ಕೃತಿಯಲ್ಲಿ ಒಟ್ಟು 105ತ್ರಿಪದಿಗಳು, 7ಪದ್ಯಗಳು 1ಕನಕದಾಸರ ಜೀವನ ಚರಿತ್ರೆ ಕುರಿತು ಸಮಗ್ರ ಲೇಖನ ಹಾಗು 12ಚುಟುಕುಗಳನ್ನು ರಚಿರಸುವರು.
ಒಟ್ಟಾರೆಯಾಗಿ ಹೇಳುವದಾದರೆ ತಮ್ಮ ಒಂದೇ ಕೃತಿಯಲ್ಲಿ ಗದ್ಯ, ಪದ್ಯ, ಮತ್ತು ಚುಟುಕುಗಳ ಮೂಲಕ ಕನಕದಾಸರ ಸಮಗ್ರ ಭಕ್ತಿ ಪರಂಪರೆಯ ಚಿತ್ರಣವನ್ನೇ ಓದುಗರಿಗೆ ತಮ್ಮ ಲೇಖನದ ಮೂಲಕ ಕಾಣಿಕೆಯಾಗಿ ನೀಡಿದ್ದಾರೆ.
ಹೀಗಾಗಿ ಶ್ರೀ ಗಂಗನಪಳ್ಳಿಯವರು ಬರೆದ ಕನಕದಾಸರ ಕುರಿತು ಗದ್ಯ ಪದ್ಯ ಚುಟುಕು ಲೇಖನ ಓದಲು ಅಮೋಘವಾದದ್ದು
-ಓಂಕಾರ_ಪಾಟೀಲ
(ಕಾರ್ಯದರ್ಶಿ :-ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ )