ನಡೆಯೋಳಗಿನ ನುಡಿ (nadeyolagina nudi)

ನಡೆಯೋಳಗಿನ ನುಡಿ (nadeyolagina nudi)

ನಡೆಯೋಳಗಿನ ನುಡಿ 

ಕನ್ನಡ ಸಾಹಿತ್ಯ ಚರಿತ್ರೆಯ ಪರಂಪರೆಯನ್ನು ನೋಡಿದಾಗ ಬಸವಣ್ಣನವರ ಮತ್ತು ಶರಣರನ್ನು ಕುರಿತು ಬಂದಷ್ಟು ಸಾಹಿತ್ಯ ಮತ್ತೊಂದು ಬಂದಿಲ್ಲ. ಆದರೂ ಪ್ರತಿವರ್ಷ ವಚನ ಸಾಹಿತ್ಯ ಕೃತಿಗಳು ಪ್ರಕಟವಾಗುತ್ತ ಬಂದಿವೆ. ಆ ಸಾಲಿನಲ್ಲಿ ಡಾ. ಕರುಣಾ ಜಮದರಖಾನಿ ಅವರ ನಡೆಯೊಳಗಿನ ನುಡಿ ಒಂದಾಗಿದೆ. ಇಲ್ಲಿಯ ಹದಿನೈದು ಲೇಖನಗಳು ವೈವಿಧ್ಯತೆ ಹೊಂದಿವೆ. ಶರಣರೊಂದಿಗೆ ದಾಸ ಸಾಹಿತ್ಯ, ಅಂಬೇಡ್ಕರ್, ಅಂಡಾಳ್, ಮೀರಾಬಾಯಿಯೊಂದಿಗೆ ತೌಲನಿಕವಾದ ಚಿಂತನೆ ಗಮನ ಸೆಳೆಯುತ್ತವೆ.

ಅಲಕ್ಷಿತ ಶರಣರಾದ ಮೇದಾರ ಕೇತಯ್ಯ, ಮಾರಯ್ಯ ಸತ್ಯಕ್ಕ, ಲಿಂಗಮ್ಮ, ಲಕ್ಕಮ್ಮ, ರಾಯಮ್ಮರ ವಚನಗಳ ಆಶಯವನ್ನು ತಮ್ಮ ನಿಲುವುಗಳನ್ನು ಸಮರ್ಥಿಸುವ ಲೇಖಕಿಯ ವಿಚಾರಧಾರೆಗಳು ಇಲ್ಲಿವೆ. ಸಮಾಜಿಕ ಸ್ತರದ, ವೈಚಾರಿಕ, ವೈಜ್ಞಾನಿಕ, ತಾತ್ವಿಕ ಚಿಂತನಾಪರ ಲೇಖನ ಗಮನ ಸೆಳೆಯುತ್ತವೆ. ಕಾಯಕ, ದಾಸೋಹ, ಅನುಭವ ಮಂಟಪ, ಶರಣೆಯರ, ಉತ್ಪಾದನಾ ಸಿದ್ಧಾಂತಗಳಂತ ಲೇಖನಗಳು ಹೊಸ ನೋಟ ಲೇಖಕಿ ಕೊಟ್ಟಿದ್ದಾರೆ. ವಿಭಿನ್ನ ನೆಲೆಗಳ ಸರಳ ಸುಂದರವಾಗಿ ಅಷ್ಟೇ ಸರಾಗವಾಗಿ ಓದಿಸಿಕೊಂಡು ಹೋಗುವ ವಚನ ಸಾಹಿತ್ಯದ ವಿಶಿಷ್ಟ ಅನುಭವಗಳಿವೆ.

 ಕಮಲಾಪುರ ತಾಲೂಕಿನ ಡೊಂಗರಗಾoವ ಗ್ರಾಮದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ ಪ್ರತಿಷ್ಠಾನದಿಂದ 2023 ರಲ್ಲಿ ಪ್ರಕಟವಾದ ಈ ಕೃತಿಯು 100 ಪುಟಗಳು ಹೊಂದಿದ್ದು 120 ಬೆಲೆ ನಿಗದಿಪಡಿಸಲಾಗಿದೆ.