ಪ್ರಕಟಿತ ಕವನ,ಹನಿಗವನ, ಗಜಲ್,ಹೈಕು,ಶಾಯಿರಿ ಗಳ ಆಹ್ವಾನ

ಪ್ರಕಟಿತ ಕವನ,ಹನಿಗವನ, ಗಜಲ್,ಹೈಕು,ಶಾಯಿರಿಗಳ ಆಹ್ವಾನ
ಕಲಬುರಗಿ: 2025ರ ಜನವರಿಯಿಂದ2025ರ ಡಿಸೆಂಬರ್ ತಿಂಗಳವರೆಗಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿರುವ ಕವನ ಸಂಪಾದಿಸಿ ಕೊಡುವ ಜವಾಬ್ದಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡಿದೆ ಎಂದು ಪ್ರಾಧ್ಯಾಪಕ ಹಾಗೂ ಸಂಪಾದಕ ಡಾ.ಶರಣಬಸಪ್ಪ ವಡ್ದನಕೇರಿ ತಿಳಿಸಿದ್ದಾರೆ.
ಆಸಕ್ತರು ಪತ್ರಿಕೆ ಅಥವಾ ನಿಯತಕಾಲಿಕೆಗಳಲ್ಲಿ ಕವಿತೆ,ಹನಿಗವಿತೆ,ಗಜಲ್,ಹೈಕು,ಶಾಯಿರಿ, ಪ್ರಕಟವಾಗಿದ್ದರೆ ಅದರ ಪತ್ರಿಕೆಯ ಹೆಸರು ಹಾಗೂ ದಿನಾಂಕವನ್ನು ತಿಳಿಸಿ ತಮ್ಮ ಸ್ವ ಪರಿಚಯ ಮತ್ತು ವಿಳಾಸ ಹಾಗೂ ಒಪ್ಪಿಗೆ ಪತ್ರದೊಂದಿಗೆ ಈ ಕೆಳಗಿನ ವಿಳಾಸಕ್ಕೆ ಪ್ರಕಟಿತ ಒಂದು ಕವನ,ಮೂರು ಹನಿಗವನ,ಶಾಯಿರಿ,ಹೈಕು,ಕಳುಹಿಸಬೇಕು ಎಂದು ಅವರು ಕೋರಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎಲ್.ಎನ್. ಮುಕಂದ್ ರಾಜ್ ಹಾಗೂ ರಿಜಿಸ್ಟ್ರಾರ್ ಶ್ರೀ ಕರಿಯಪ್ಪ ಎನ್. ಮತ್ತು ಅಕಾಡೆಮಿಯ ಸದಸ್ಯರಾದ ಡಾ.ಸಿದ್ದರಾಮ ಹೊನ್ಕಲ್ ಅವರು ಈ ಒಂದು ಜವಾಬ್ದಾರಿಯುತ ಕೆಲಸ ನನಗೆ ಒಪ್ಪಿಸಿದ್ದು ಅದನ್ನು ತಮ್ಮ ಪ್ರಕಟಿತ ಕವನದ ಜಿರಾಕ್ಸ ಪ್ರತಿ ಕಳಿಸುವ ಮೂಲಕ ನನಗೆ ಈ ಕೆಲಸದಲ್ಲಿ ಸಹಕಾರ ನೀಡಲು ಕೋರುತ್ತೇನೆ.
ಈ ಸಂಕಲನದಲ್ಲಿ ಬಳಸಿಕೊಳ್ಳುವ ಕವಿತೆಗಳ ಲೇಖಕರಿಗೆ ಅಕಾಡೆಮಿಯಿಂದ ರೂ.750/-ಗಳ ಗೌರವ ಸಂಭಾವನೆ ಮತ್ತು 1 ಗೌರವ ಪ್ರತಿಯನ್ನು ಕಳಿಸಿಕೊಡಲಾಗುವುದು.
ಕವನ,ಗಜಲ್,ಹೈಕು,ಶಾಯಿರಿ 2025 ಡಿಸೆಂಬರ್ 25 ರೊಳಗೆ ಡಾ ಶರಣಬಸಪ್ಪ ವಡ್ಡನಕೇರಿ, ಮನೆ ಸಂಖ್ಯೆ 33 , ಕೆ.ಎಚ್.ಬಿ ಕಾಲೋನಿ ರಾಜಾಪುರ ರಸ್ತೆ, ಡಾ.ಅಂಬೇಡ್ಕರ ಹಾಸ್ಟೆಲ್ ಹಿಂದುಗಡೆ, ಕಲಬುರಗಿ 585105 ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ವಿವರಗಳಿಗೆ 9741169055 ಸಂಪರ್ಕಿಸಬಹುದು.