ಸಗರ ದರ್ಗಾ ಸಿಸಿ ರಸ್ತೆ ಕಾಮಗಾರಿ ಸಚಿವರಿಂದ ವೀಕ್ಷಣೆ.
ಸಗರ ದರ್ಗಾ ಸಿಸಿ ರಸ್ತೆ ಕಾಮಗಾರಿ ಸಚಿವರಿಂದ ವೀಕ್ಷಣೆ.
ಶಹಾಪುರ : ತಾಲೂಕಿನ ಸಗರ ಗ್ರಾಮದ ಸೋಫಿ ಸರ್ಮಸ್ತ ದರ್ಗಾಕ್ಕೆ ಸಂಪರ್ಕ ಕಲ್ಪಿಸುವ ಸಿ.ಸಿ ರಸ್ತೆ ಕಾಮಗಾರಿಯನ್ನು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಇಂದು ವೀಕ್ಷಣೆ ಮಾಡಿದರು.
ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ ಸಿಸಿ ರಸ್ತೆ ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿದ್ದರೆ ಮಾತ್ರ ಬಿಲ್ಲು ಪಾವತಿಸಲಾಗುತ್ತದೆ, ಕಾಮಗಾರಿಗಳ ಗುಣಮಟ್ಟದಿಂದ ಕೂಡಿರಬೇಕು ಎನ್ನುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶ ವಾಗಿದ್ದು,ಸಾರ್ವಜನಿಕರು ಕೂಡ ಕಾಮಗಾರಿ ಮಾಡುವಾಗ ಪರಿಶೀಲನೆ ನಡೆಸಿ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿರ್ಮಿತಿ ಕೇಂದ್ರದ ವತಿಯಿಂದ ಅಚ್ಚುಕಟ್ಟಾಗಿ ನಿರ್ಮಾಣ ಹಂತದಲ್ಲಿರುವ ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಿ ಸಿ ರಸ್ತೆ ಕಾಮಗಾರಿಯನ್ನು ಇಂದು ದಿಢೀರನೆ ಭೇಟಿ ನೀಡಿ ರಸ್ತೆಯ ಗುಣಮಟ್ಟವನ್ನು ಪರಿಶೀಲಿಸಿದರು.ಈ ರಸ್ತೆ ಮುಖ್ಯ ರಸ್ತೆಯಿಂದ ದರ್ಗಾಕೆ ಕಲ್ಪಿಸಲಾಗುತ್ತಿದೆ,ಡಿವೈಡರ್ ನಿಂದ ಕೂಡಿದ ಈ ರಸ್ತೆ ಮಧ್ಯಭಾಗದಲ್ಲಿ ಸ್ಟ್ರೀಟ್ ಲೈಟ್ ಅಳವಡಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸನಗೌಡ ಮಾಲಿ ಪಾಟೀಲ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಚಂದಣ್ಣ ಸೇರಿ, ಗ್ರಾಮದ ಹಿರಿಯ ಮುಖಂಡರಾದ ಲಿಂಗಣ್ಣಪಡಶೆಟ್ಟಿ,ಹಜರತ್ ಸೋಫಿ ಸರ್ ಮಸ್ತ್ ಸಗರ ಶರೀಫರಾದ ಹಜರತ್ ಸೈಯದ್ ಮೊಹಮ್ಮದ್ ಮುಜಿಬುದ್ದೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.